ತೆರೆಯಿತು ಹಗಲ ಬಾಗಿಲು
ಬಿರಿದ ಮೊಗ್ಗು ಅರಳುವ ಸಮಯ
ಅನಾವರಣಗೊಂಡಿತು ಜಗದ ವಿಸ್ಮಯ
ಚಿಲಿಪಿಲಿ ಕಲರವ ಗಾನ
ಎಲೆ ಮೇಲೆ ಇಬ್ಬನಿಯ ಕವನ
ಮೈದಡವಿದೆ ತಂಗಾಳಿಯ ಬೆರಳು
ಮೈಮುರಿದೆದ್ದವು ಮುದುಡಿದ ಮನಗಳು
ಹರಿವ ನೀರಿನ ಜುಳುಜುಳು ನಿನಾದ
ನೂರು ಭಾವ ಮೂಡಿಸಿತು ಮೌನ ಸಂವಾದ
ಕ್ಷಣ ಕ್ಷಣವೂ ಹೊಸತನ ತಂದಿತು
ನವೋನ್ಮೈಷಶಾಲಿ ಪ್ರಕೃತಿಯ ಸಂದೇಶ
ಮುಂಜಾನೆಯ ಹೂಬಿಸಿಲ ಹೊಂಗಿರಣ
ದಿನದಂಗಳದಿ ನಳನಳಿಸುವ ತೋರಣ
ದುಡಿಯುವ ಕೈಗಳಿಗೆ ಕೆಲಸವನಿತ್ತು
ತಂತು ಹಸಿದ ಹೊಟ್ಟೆಗೆ ಅನ್ನದ ತುತ್ತು
ಸೋಮಾರಿತನವ ದೂರ ತಳ್ಳಿ
ಶ್ರಮದ ಬದುಕಿನ ಪಾಠ ಹೇಳಿ
ದಿನದ ಅವಕಾಶವ ನೀಡಿದ
ದಿನಕರನೆಂಬ ಮಹಾಬೋಧಕ
0೬೩೭ಎಎಂ೧೧೦೨೨೦೨೩
*ಅಮುಭಾವಜೀವಿ ಮುಸ್ಟೂರು*
No comments:
Post a Comment