ಬೆಳೆಯುವವನ ತುಳಿಯುವವರು ಇರುವವರೆಗೂ
ಬೆಳೆಯುವವನ ಸ್ವಾಭಿಮಾನಕ್ಕೆ ಹಿನ್ನಡೆಯಾಗದು
ಹಂಬಲಿಸಿ ದುಡಿಯುವವನಿಗೆ ಅಡ್ಡಗಾಲಾದರೇನು
ದುಡಿಯುವ ಕೈಗಳೆಂದಿಗೂ ದಾರಿದ್ರವನು ಹೆಚ್ಚಿಸಿಕೊಳ್ಳವು
ಇಲ್ಲಿ ಎಲ್ಲವೂ ಅವರವರ ಮೂಗಿನ ನೇರದ್ದೆ ಮಾತು
ತಲೆಕೆಡಿಸಿಕೊಳ್ಳಬೇಕಿಲ್ಲ ಅಂತವರ ಮಾತಿಗೆ ಸೋತು
ಶ್ರಮದ ಬದುಕ ನಂಬಿ ಯಾರೂ ಕೆಟ್ಟಿಲ್ಲ
ಅಡ್ಡಿಪಡಿಸುವವನೇಂದಿಗೂ ಗುರಿ ಮುಟ್ಟಲ್ಲ
ಹಣವಿಂದು ಜಗವನಾಳುತಲಿದೆ
ಜನಸಮೂಹ ಅದರ ಹಿಂದೆ ಓಡುತಿದೆ
ಯಾವ ಹಂಗು ಬೇಕಿಲ್ಲ ಬೆವರ ಸುರಿಸುವವನಿಗೆ
ಹಣದಿಂದ ಗೆಲ್ಲಲಾಗುವುದಿಲ್ಲ ಗುಣ ಬೇಕು ಮನುಷ್ಯನಿಗೆ
ಏಕೆ ಇಷ್ಟೊಂದು ಸಹಿಸಲಾಗದ ಅಸೂಯ ಜನಕೆ
ಅವರವರ ಏಳಿಗೆ ಅವರವರ ದುಡಿಮೆ ಮೇಲಿದೆ
ಹರಿದ ಬಟ್ಟೆ ಕೊಳಕು ಮೈಯೆಂದು ಜರಿಯುವುದೇಕೆ
ಅವನಲ್ಲಿ ಬಸಿದ ಬೆವರಿಗೂ ಬೆಲೆ ಇದೆ
ಸೋಮಾರಿಯಾಗಿ ಕೂರುವ ಬದಲು
ಕಾಯಕದಲ್ಲಿ ತಲ್ಲೀನವಾಗುವುದು ಲೇಸು
ಉಂಡದ್ದು ಕರಗುವಂತೆ ದುಡಿಯುವ ಮೈಗೆ
ಕಾಯಕ ದೀಕ್ಷೆ ತಂದು ಕೊಡುವುದು ಯಶಸ್ಸು
೦೭೫೫ಎಎಂ೨೪೦೨೨೦೨೩
*ಅಮುಭಾವಜೀವಿ ಮುಸ್ಟೂರು*
No comments:
Post a Comment