ಪ್ರೀತಿಸುವ ಹೃದಯದ ಕೇಳು
ನಿನ್ನಿಂದಲೇ ಹಸನು ಈ ಬಾಳು
ಹರೆಯದ ಹುಚ್ಚು ನದಿಯ ಕಟ್ಟಿ ಹಾಕಲು
ಒಲವಿನ ಅಣೆಕಟ್ಟು ಕಟ್ಟಿ ನಿಲ್ಲಿಸಿದೆ
ಒಂಟಿತನದ ಬೀಳನು ಹಸನು ಮಾಡಲು
ಪ್ರೀತಿಯ ಸಿಂಚನಗೈದು ಹಸಿರಾಗಿಸಿದೆ
ಈ ಹಸಿರ ದೊರೆಯು ನೀನು
ಬಾಳಲಿ ಹಸಿವಿನ ಚಿಂತೆ ಇರದಿನ್ನೂ
ಎದೆಯಾಳದ ನೋವುಗಳಿಗೆ
ಸಾಂತ್ವಾನ ಹೇಳಿದೆ
ಬಸವಳಿದ ನಾಳಿಗೆ
ಭರವಸೆಯ ತುಂಬಿದೆ
ನೀನಲ್ಲವೇ ಈ ಬಾಳ ಚೇತನ
ನಿನ್ನಿಂದಲೇ ಬದುಕು ಸುಂದರ ಹೂಬನ
ಹೃದಯದ ಒಡನಾಡಿ ನೀನೀಗ
ಹೊತ್ತೆ ಬಾಳ ಬಂಡಿಯ ನೊಗ
ಜೋಡೆತ್ತಿನ ರೀತಿ ಉಳುಮೆ ಮಾಡೋಣ
ಏನೇ ಬಂದರೂ ಒಲುಮೆಯಿಂದ ಬಾಳೋಣ
ಪ್ರೀತಿಯೇ ನಮ್ಮಿಬ್ಬರ ಒಡನಾಡಿ
ಬಾಳಸಂಪುಟಕ್ಕೆ ಅದುವೆ ಮುನ್ನುಡಿ
೧೧೦೧೩ಎಎಂ೦೧೦೩೨೦೨೩
*ಅಮುಭಾವಜೀವಿ ಮುಸ್ಟೂರು*
ತೊರೆದು ಜೀವಿಸಬಹುದು ನೀನು
ಮರೆತು ಬಾಳಲಾರೆನು ನಾನು
ಪ್ರೀತಿ ನಿನಗೊಂದು ಆಟ
ಪ್ರೀತಿಯೇ ನನಗೆ ನಿತ್ಯದ ಊಟ
ಬೇಡದ ಬದುಕಿಗೆ ನೀ
ಬಂದದ್ದು ನಿಜವಾದರೂ
ಅಪವಾದ ಹೊತ್ತು ಬದುಕಿದೆ
ನಾನು ಸದಾ ಯವಾಗಲೂ
ಬಹಳ ಪುಟದಲ್ಲಿ ನೀ ಮುಗಿದ ಅಧ್ಯಾಯ
ಅದರಿಂದ ಬದುಕಿಗೆ ಅನುಭವದ ಸಂದಾಯ ಮುಗ್ಧ ಜೀವವ ಒದ್ದು ನೀ ಹೋದೇ
ಶುದ್ಧ ಪ್ರೀತಿಯ ಮುಖಕ್ಕೆ ಮಸಿಯನ್ನು ಪಡೆದೆ
ನಿನ್ನ ಮೋಸದಾಟಕ್ಕೆ ಬಲಿಯಾದೆ
ಬಾಳ ಸಂಕಷ್ಟಕ್ಕೆ ನೀ ನನ್ನ ತಳ್ಳಿದೆ
ಯಾರು ನಂಬದಂತ ಮುಖವಾಡ ನೀ ಧರಿಸಿದೆ
ಅದು ತಂದ ದುಗುಡಕ್ಕೆ ನಿತ್ಯ ನಾ ನರಳಿದೆ
ನೈತಿಕತೆ ಎಂಬುದು ನಿನಗೆ ಇದ್ದಿದ್ದರೆ
ನೀ ಹೀಗೆ ಕೊಡುತ್ತಿರಲಿಲ್ಲ ನನಗೆ ತೊಂದರೆ
ಅನೈತಿಕ ಅನುಬಂಧ ಬಯಸಿದೆ ನೀ
ಅದರಿಂದ ಅವಹೇಳನಕೆ ನಾ ಬಲಿಯಾದೆ
೧೧೪೦ಎಎಂ೦೧೦೩೨೦೨೩
*ಅಮುಭಾವಜೀವಿ ಮುಸ್ಟೂರು*
No comments:
Post a Comment