ಪ್ರೀತಿಯ ಅನುಬಂಧವೇ ಹೊಸದು
ಹೇಳಲಾಗದ ಅನುಭೂತಿ ಅದು
ನೋವಿಗೆ ನೆರಳಾಗುವ ಹೃದಯ
ಖುಷಿಯಲಿ ಒಂದಾಗುವ ಸಮಯ
ನಾನು ನೀನು ಬೇರೆ ಎನದ ಹಾಗೆ
ನಾವಿಬ್ಬರಾಗುವ ಬೆಸುಗೆ
ನೋಟಕ್ಕಿಂತಲೂ ಭಾವ ಮಿಲನ
ಎದೆಯ ಮಾತುಗಳೊಂದೊಂದು ಕವನ
ಪ್ರೀತಿಸಲು ಸಾಕಾಗದು ಒಂದು ಜೀವನ
ಏಳೇಳು ಜನ್ಮಗಳ ಪಾಡು ಒಲವಿನ ನಿಲ್ದಾಣ
ಆಕರ್ಷಣೀಯ ಸಂಘರ್ಷವಿಲ್ಲದೆ
ಪ್ರೀತಿಯ ಭಾವಕ್ಕೆ ಅಭಾವವಿಲ್ಲದೆ
ಪ್ರತಿಕ್ಷಣವೂ ಹಿಡಿಯುವ ಮನವು
ದುಂಬಿಗಾಗಿ ಕಾಯುವಂತೆ ಸುಮವು
ಶತಮಾನದ ಇತಿಹಾಸ ಪುಟಗಳ ಸಾರ
ಅಭಿಮಾನದ ಆಲಾಪವೇ ಇದರ ಸಂಸ್ಕಾರ
ಪ್ರೀತಿಯಲ್ಲಿ ಎಂದು ಇರದು ಅಧಿಕಾರ
ಇದು ಪ್ರೀತಿಸುವ ಹೃದಯಗಳ ಮಮಕಾರ
ಮನಸೊಪ್ಪಿದ ಅಪ್ಪುಗೆಯೇ ಪ್ರೀತಿ
ಜಗವ ಗೆದ್ದೇ ಗೆಲ್ಲುವುದದರ ಛಾತಿ
ಜೀವ ಜೀವಗಳ ಬೆಸೆಯುವ ನೀತಿ
ಬದುಕಿನಾಧಾರದ ಅನುಸಂಧಾನವೇ ಪ್ರೀತಿ
೧೧೧೩ಪಿಎಂ೦೩೦೨೨೦೨೩
*ಅಮುಭಾವಜೀವಿ ಮುಸ್ಟೂರು*
No comments:
Post a Comment