ಬದುಕಿಗೆ ಏಕಿಷ್ಟೋಂದು ಆಸೆಗಳು
ಬಂದದ್ದು ನಾವಿಲ್ಲಿ ಬಾಳಿಹೋಗಲು
ಹೆತ್ತವರ ಕಾಮಪ್ರೇಮದ ಫಲ
ಮಕ್ಕಳೇ ಅವರಿಗೆ ಬೇರೇನಿಲ್ಲ
ಪ್ರೀತಿಯ ಅನುಬಂಧ ಬೆಸೆದ ಸಂಬಂಧ
ಬೆಳೆದು ನಿಂತ ಮೇಲೆಲ್ಲ ಮರೆತು
ತನ್ನ ಸ್ವಾರ್ಥಸುಖಕೆ ಅವರ ಬಲಿಗೊಟ್ಟು
ಕೊನೆಗೆ ಬರುವರು ಅವರ ಆಸ್ತಿ ಹಕ್ಕಿಂದ
ಬಾಂಧವ್ಯಕಿಂತ ಬಂದವರ ಮಾತೇ ಹೆಚ್ಚು
ರಕ್ತಸಂಬಂಧವಾದರೂ ದ್ವೇಷಿಸೋ ಹುಚ್ಚು
ಕರುಳಬಳ್ಳಿಯ ನಂಟು ಕಳಚಿದ್ದೆಲ್ಲಿ
ಬಂದು ಹೋಗುವ ಮೂರು ದಿನದೊಳಗೆ
ಅದು ಏಕಿಷ್ಟೊಂದು ದ್ವೇಷ ಹಗೆ
ಒಗ್ಗಟ್ಟಿನ ಬಲವೇ ಸುಖಜೀವನಕಿಲ್ಲಿ
ಹೋದವರು ಅವರೆಲ್ಲ ಮಣ್ಣಾದರು
ಸುಟ್ಟವರು ಇನ್ನಿಲ್ಲದಂತೆ ಬೂದಿಯಾದರು
ಏಕೆ ಬಡಿದಾಡುವರೋ ಈ ಸತ್ಯ ಅರಿಯದವರು
ನಿನ್ನೆ ಅವರು ಇಂದು ಇವರು ನಾಳೆ ಇನ್ನಾರೋ
ಹುಟ್ಟು ಸಾವಿನ ಮಧ್ಯೆ ಏಕಿಂತ ಪರಿಪಾಠ
ಶಾಶ್ವವಾಗುಳಿದಿಲ್ಲ ಕೋಟೆ ಕಟ್ಟಿ ಮೆರೆದವರು
ಉಳಿಯಲಿ ಅನುಬಂಧದಾನಂದ
ಕೂಡಿ ಬಾಳಿದರೆದಲ್ಲವೇ ಮಕರಂದ
೧೦೩೬ಪಿಎಂ೨೯೦೧೨೦೨೩
*ಅಮುಭಾವಜೀವಿ ಮುಸ್ಟೂರು*
No comments:
Post a Comment