Monday, January 23, 2023

ಕವಿತೆ

*ಸ* ರಿ ದಾರಿಯಲಿ ನಡೆವ ಮೊದಲು
*ಸಾ* ವಿರ ಭಾರಿ ಯೋಚಿಸಬೇಕು
*ಸಿ* ಕ್ಕ ಸಿಕ್ಕ ಕಡೆ ಓಡಾಡುವ ಬದಲು
*ಸೀ* ಮಿತ ಗುರಿಯೆಡೆಗೆ ಸಾಗಬೇಕು
*ಸು* ಖದ ನಿರೀಕ್ಷೆಯ ಕೈಗೂಡಿಲು
*ಸೂ* ಕ್ಷ್ಮಮತಿಯಾಗಿ ಚಿಂತಿಸು
*ಸೃ* ಷ್ಟಿಯ ಮುಂದೆ ನೀ ತೃಣವು
*ಸೆ* ಳೆತಕೆ ಸಿಗದಂತೆ ಜಾಗರೂಕತೆಯಿಂದ
*ಸೇ* ರಬೇಕು ಸಾಧನೆಯ ಆ ಗುರಿಯನು
*ಸೈ* ಎನಿಸಿಕೊಂಡಾಗಲೇ ಸಾರ್ಥಕತೆ
*ಸೊ* ಗಸಾದ ಈ ಜಗದಲಿ
*ಸೋ* ಜಿಗದ ಸಂಗತಿ ನೂರಿವೆ
*ಸೌಂ* ದರ್ಯವ ಆಸ್ವಾದಿಸುವ
*ಸಂ* ಸ್ಕಾರವು ನಿನ್ನ ಮನವನಾಳುವಾಗ
*ಸಹ* ಯಾತ್ರಿಯಾಗಿ ಬರುವುದು ನಿನ್ನೊಂದಿಗೆ

೧೦೩೮ಪಿಎಂ೨೦೦೧೨೦೨೩
*ಅಮುಭಾವಜೀವಿ ಮುಸ್ಟೂರು*

No comments:

Post a Comment