ನೋವು ಕೊಟ್ಟವರಿಗೊಂದಿಷ್ಟು
ನೋವು ಕೊಡುವುದು ಪ್ರಕೃತಿ
ತಾಳ್ಮೆಯೊಂದಿಷ್ಟಿರಲಿ ಮನುಜ
ಕೊಟ್ಟದ್ದನ್ನು ಹಿಂತಿರುಗಿಸುವುದು ಜಗದ ನೀತಿ
ನಾನು ಎಂದು ಮೆರೆದವರಾರೂ
ಇಲ್ಲಿ ಉಳಿದಿಲ್ಲ ಕೇಳು ಮನುಜ
ಬೆಳೆದದ್ದು ಅಳಿಯಲೇ ಬೇಕು
ಅರಿತರೆ ಸಾಕು ನೀನು ಈ ನಿಜ
ಸ್ವಾರ್ಥಕಾಗಿ ಸತ್ಯವನು ಕೊಂದರೇನಂತೆ
ನಿಸ್ವಾರ್ಥಿಗಳನು ಕೈಬಿಡದು ಕೇಳು
ಒಂದಷ್ಟು ಕಷ್ಟಗಳ ಸಹಿಸಲೇ ಬೇಕು
ಹೂವಿನ ಜೊತೆ ಮುಳ್ಳಿರುವುದೇಕೆ ಹೇಳು
ನೊಂದ ಜೀವಿಗಳ ಮೂಕ ವೇದನೆ
ಯಮನ ಲೆಕ್ಕದಲಿ ದಾಖಲಾಗಿಹುದು
ಪಾಪದ ಕೊಡ ತುಂಬಿದ ಬಳಿಕ
ಎಲ್ಲಕ್ಕೂ ಉತ್ತರ ಸಿಕ್ಕೇಸಿಗುವುದು
ಯಾವುದನ್ನೂ ಹೆಚ್ಚು ಸಂಭ್ರಮಿಸದರು
ಎಲ್ಲಕ್ಕೂ ಕೊನೆಯೆಂಬುದೊಂದಿದೆ
ಪ್ರಾಮಾಣಿಕತೆಯ ಅರ್ಜಿಯೊಂದಿಗೆ ನಡೆ
ಒಳ್ಳೆತನಕೆಂದಿಗೂ ಬೆಲೆ ಇದ್ದೇ ಇದೆ
೦೨೫೬ಎಎಂ೦೯೦೧೨೦೨೩
*ಅಮುಭಾವಜೀವಿ ಮುಸ್ಟೂರು*
No comments:
Post a Comment