ಪ್ರೀತಿಯ ಆಟದಲಿ
ಮೋಸದ ಪುಟದಲಿ
ಪಾಠವ ಕಲಿಸಿ ಹೋದಳು
ನಂಬಿಕೆಯ ಭಾವಕೆ
ನೋವಿನ ಕಾಣಿಕೆ
ನೀಡಿ ಅವಳು ಹೋದಳು
ಬೇಕಿರದ ಸಂಬಂಧಕೆ
ಪ್ರೀತಿಯ ಲೇಪಿಸಿ
ಮುಗ್ಧ ಹೃದಯಕೆ ಮಸಿ ಬಳಿದಳು
ನೈತಿಕತೆಯ ನಂಟಿರದ
ದೈಹಿಕ ವಾಂಛೆಗಾಗಿ
ಶುದ್ಧ ಒಲವಿಗೆ ಕಳಂಕ ತಂದಳು
ಇಂತಹವಳ ಸಂಕುಲ ನಶಿಸಲಿ
ಕಷ್ಟ ತಂದವಳೂ ಅದನನುಭವಿಸಲಿ
ಅಮಾಯಕ ಹೃದಯ ಚೇತರಿಸಿಕೊಳ್ಳಲಿ
ಮೋಸಗಾತಿಯ ಆಟ ಪಾಠವಾಯ್ತು
ಕಪಟಿಯ ಹಿಂದಿನ ದಿಟ ಅರಿವಾಯ್ತು
ನೊಂದ ಮನಸು ನಿತ್ಯ ಶಪಿಸಿತು
1028ಪಿಎಂ15012023
*ಅಮುಭಾವಜೀವಿ ಮುಸ್ಟೂರು*
No comments:
Post a Comment