Sunday, January 8, 2023

ಕವನ

*ಕೊನೆ ಎಲ್ಲಿ*

ಯಾರು ಕೊಂದರೋ
ಏಕೆ ಕೊಂದರೋ
ಜೀವವಂತೂ ಬಲಿಯಾಯ್ತು 
ನ್ಯಾಯ ಸಿಗುವುದೋ 
ಅಲ್ಲೇ ನ್ಯಾಯ ಸಾಯುವುದೋ
ಇಲ್ಲಿ ಯಾರಿಗೆ ಗೊತ್ತು

ಹೆತ್ತವರ ಅಸಹಾಯಕತೆಗೆ
ನೋವಿನ ಕಿಚ್ಚನು ಇಟ್ಟು 
ದಹಿಸುತಿದೆ ನಿತ್ಯವೂ 
ಸಾವನ್ನೂ ಲಾಭವಾಗಿಸಿಕೊಂಡು.
ಸಮಾಜದ ಶಾಂತಿಯನು ಕೆಡಿಸಿ
ಮಣ್ಣಲ್ಲಿ ಮಣ್ಣಾಯ್ತು ಆ ಸತ್ಯವೂ

ಇನ್ನೆಷ್ಟು ದೇಹಗಳು ಬಲಿ
ಬೀಳಬೇಕೋ ಆ ರಕ್ತ ಪಿಪಾಸುವಿಗೆ
ತಣಿದು ತೃಪ್ತವಾಗದ ಆ ಮನಕೆ
ಮಾನವೀಯತೆ ಇನ್ನೆಲ್ಲಿ
ಮಾನವನ ದಾನವತೆಗೆ ಕೊನೆ ಎಲ್ಲಿ

1009.ಪಿಎಂ08012018
*ಅಮುಭಾವಜೀವಿ*

No comments:

Post a Comment