ನಾನಲ್ಲ , ಬರೀ ಭಾವಜೀವಿ!!!
ಎದೆಯ ಭಾವಗಳ ಹಡೆದು
ಮನದ ನೋವುಗಳ ನೆನೆದು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ನೂರು ನೆನಪುಗಳ ಸವಿದು
ಸೂರು ಕಾಣದೆ ನೊಂದು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ಅಕ್ಕರೆಯ ಮಾತುಗಳಿಗೆ ಹಂಬಲಿಸಿ
ಬಿಕ್ಕುವ ಭಾವನೆಗಳ ಹೆಕ್ಕಿ
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ಕನಿಕರದ ಹೃದಯವೇ ಪಡೆದು
ಮುನಿಸಿರದ ಮೌನದ ಕುರಿತು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ಕಂಡ ಕಷ್ಟಗಳ ಸರಮಾಲೆ
ಸಹಿಸಿ ಪಡೆದ ಅನುಭವದಿ
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ಚಂದ ನಿಸರ್ಗದ ಚೆಲುವಿಗೆ
ಮನಸೋತು ಕುಣಿ ಕುಣಿದು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ಅಕ್ಷರಗಳ ಸಾಕ್ಷಾತ್ಕಾರದಲ್ಲಿ
ಪ್ರೀತಿಯ ಪುರಸ್ಕಾರ ಬಯಸಿ
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ನಿನ್ನೆ ನಾಳೆಗಳ ಪಯಣದಲಿ
ಇದ್ದು ಹೋಗಲು ಬಂದವ ನಾನು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
೦೪೧೧ಪಿಎಂ೦೭೧೧೨೦೨೩
*ಅಮುಭಾವಜೀವಿ ಮುಸ್ಟೂರು*
[11/9, 10:16 AM] +91 94493 36793: ನಮಸ್ತೆ, ನಾನು ಕವಿಯಲ್ಲ, ಭಾವಜೀವಿ ಅಷ್ಟೇ, ಎನ್ನುವ ಮನದ ಸೂಪ್ತ ಚೇತನದ ಪದಗುಚ್ಛದ ಅಕ್ಷರ ದಾಸೋಹವನನ್ನೇ ಬಡಿಸಿ ಕವನದ ಮೆರುಗನ್ನು ನೀಡಿದ್ದೀರಿ, ಅಭಿನಂದನೆ
*ಬರದ ತನಗ*
ಮಳೆ ಬರದೆ ಬರ
ಜಗವಾಗಿ ತತ್ತರ
ಜೀವನವೇ ದುಸ್ತರ
ಇನ್ನಿಲ್ಲ ಆ ಚಿತ್ತಾರ
ಕೆರೆ ಪಳೆಯುಳಿಕೆ
ಬಾಯಾರಿ ಬಿಕ್ಕಳಿಕೆ
ಏನಿಲ್ಲ ಹೆಗ್ಗಳಿಕೆ
ಬಿಸಿಲ ಬಾಯಾರಿಕೆ
ಒಣಗಿದ ಬೆಳೆಯು
ಕಿಡಿಸೋಕಿ ಸುಟ್ಟಾಯ್ತು
ಹಿಡಿ ಕಾಳು ಬೇಡಲು
ಸುಡುಗಾಡ ಕಾವಲು
ಗುಟುಕು ನೀರಿಲ್ಲಿಲ್ಲ
ಕುಟುಕು ಜೀವವಿಲ್ಲ
ಕಟುಕ ಬರಗಾಲ
ಸಂಕಷ್ಟ ಕಳಿಲಿಲ್ಲ
ಬಂಜೆ ಮೋಡದ ಗರ್ಭ
ಸಂಜೆ ಮಳೆ ತರ್ಲಿಲ್ಲ
ಬರಿದು ಬದುಕಲಿ
ನೆಮ್ಮದಿಯು ಇನ್ನೆಲ್ಲಿ
೦೯೧೪ಪಿಎಂ೦೭೧೧೨೦೨೩
*ಅಮುಭಾವಜೀವಿ ಮುಸ್ಟೂರು*
ಏಕೆ ಬಿಟ್ಟು ಹೋದೆ ಪ್ರಭುವೇ
ಮೊರೆಯನೇಕೆ ಕೇಳಿದಿರುವೆ
ದಟ್ಟ ಕಾನನದಲಿ ಒಂಟಿ ಬಿಟ್ಟು ಹೋದೆ
ಹೀಗೆ ಮಾಡುವಂತ ಪಾಪ ನಾನೇನು ಮಾಡಿದೆ
ಕೂಗಿ ಕರೆಯಲು ಧ್ವನಿ ಮೊದಲಿಲ್ಲ
ಅಳುವ ಶಕ್ತಿ ನನ್ನೊಳಗೆ ಕೊಂದಿದೆಯಲ್ಲ
ದಾರಿ ತೋರಲು ಬೇಗ ಬಾ ಗುರುವೇ
ನಿನ್ನ ಕಂದನಾ ರೋದನೆ ಕೇಳುತ್ತಿಲ್ಲವೇ
ನೀ ತೋರಿದ ದಾರಿಯಲ್ಲಿ ನಾ ನಡೆದು ಬಂದೆ
ಇದ್ದಲ್ಲೇ ಅಳಿದುಳಿದೆ ಯಾಕಯ್ಯ ತಂದೆ
ಕರುಣೆ ಬಾರದೆ ನನ್ನ ಕಂಬನಿಧಾರೆ ಕಂಡು
ಕರಪಿಡಿದು ನನ್ನನೆತ್ತಿಕೊ ಕಂದ ಎಂದು
ಸಾಕಯ್ಯ ನನಗೀ ಭವದ ಬಂಧನ
ನೀಡಯ್ಯ ಮಲಗುವೆ ನಿನ್ನ ಮಡಿಲನ್ನ
ಕಷ್ಟಗಳ ಕ್ರೂರ ಮೃಗಗಳು ಕಾದು ಕುಳಿತಿವೆ
ಜೀವವಿದು ಬಾಯಿಗೆ ಬಂದು ನರಳುತ್ತಿದೆ
ಹುಲ್ಲು ಕಡ್ಡಿಯ ಆಸರೆಯೊಂದ ಕಾಣದೆ
ಕಲ್ಲಾಗಿ ಕುಳಿತೆ ಏಕೆ ನನ್ನ ಕಾಪಾಡದೆ
ನಾ ಬೇಡುವ ಪರಿ ಸಾಲದಾಯಿತೆ
ನನಗೆ ಕಷ್ಟ ಕೊಡುವುದೇ ನಿನಗಿಷ್ಟವಾಯಿತೆ
೦೬೫೬ಎಎಂ೦೮೧೧೨೦೨೩
ಅಮುಭಾವಜೀವಿ ಮುಸ್ಟೂರು
ಬದಲಾಗದಿರು ಸಖ ನೀ ಎಂದೆಂದಿಗೂ
ಜೀವ ವೀಣೆ ಮಿಡಿವ ಭಾವ
ನೀನೆ ನಲ್ಲ ಎಂದೆಂದಿಗೂ
ನಿನ್ನನೇ ನಂಬಿ ಬಂದಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ
ಕಣ್ಣು ಕಣ್ಣು ಕಲೆತ ಭಾವ
ಹೃದಯ ತಂತಿ ಮೀಟುವ
ಒಲವ ಬಯಸುತಲಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ
ಹೆತ್ತವರ ಬಿಟ್ಟು ಬಂದೆ ನಿನ್ನೊಂದಿಗೆ
ಒಡನಾಡಿಗಳ ಒಡನಾಟ ತೊರೆದಿರುವೆ
ನೀನೇ ನನಗೆಲ್ಲವೆಂದು ಬಾಳುತಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ
ಒಡಲೊಳಗೆ ಬಯಕೆ ಮೊಳೆತು
ಎದೆಯೊಳಗೆ ನಿನ್ನ ರೂಪ ನಿಂತು
ಬಾಳಿನಾಸರೆ ನೀನೆಂದು ನಂಬಿಹೆ
ಬದಲಾಗದಿರು ಸಖ ನೀ ಎಂದೆಂದಿಗೂ
ನಿನ್ನೆಗಳ ನಾ ಹೇಗೋ ಕಳೆದೆ
ನಾಳೆಗಳು ಹೇಗೋ ಗೊತ್ತಿಲ್ಲ
ಇಂದಿನ ಖುಷಿ ನಿನ್ನ ಕೈಲಿದೆ
ಬದಲಾಗದಿರು ಸಖ ನೀ ಎಂದೆಂದಿಗೂ
ಜೀವವಿರುವವರೆಗೆ ನೀನೇ ನಲ್ಲ
ನೀನಲ್ಲದೆ ಬೇರೇನೂ ಬೇಕಿಲ್ಲ
ಉಸಿರೊಂದಿಗೆ ಉಸಿರಾಗಿ ಬೆರೆತಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ
೦೭೫೩ಪಿಎಂ೦೮೧೧೨೦೨೩
*ಅಮುಭಾವಜೀವಿ ಮುಸ್ಟೂರು*
[11/9, 4:08 PM] +91 94493 36793: ನಮಸ್ತೆ, ನನ್ನ ಬಾಳಿಗೆ ನಿನ್ನ ಸರ್ವಸ್ವವೇ ಬಿಟ್ಟು , ನನ್ನ ಜೀವನದ ಕಣ್ಣು,ಮನದ ಹೊನ್ನು, ಇವೆಲ್ಲವೂ ನಿನ್ನದೇ ಎನ್ನುವ ಮೂಲಕ ಕವನದ ಚೆಂದದ ಸಾಲುಗಳು, ಅಭಿನಂದನೆ
[11/9, 4:32 PM] +91 94493 36793: ನಮಸ್ತೆ, ಎಲ್ಲರನ್ನೂ ಬಿಟ್ಟು ನಿನ್ನಲ್ಲಿ ಗೆ ಬಂದಿರುವೆ, ಅಂದು-ಇಂದು ನಿನ್ನಲ್ಲಿಯೇ ಇದೆಯೆಂದು ಕವನ ದಾಖಲಿಸಿದೆ, ಅಭಿನಂದನೆ
*ತನಗ*
ಯುದ್ದದ ಕರಾಳತೆ
ಹಿಂಸೆಯ ಅಟ್ಟಹಾಸ
ರಕ್ತ ಪಿಪಾಸು ಅದು
ಬೇಕಿಲ್ಲ ಮಂದಹಾಸ
೦೧೩೬ಪಿಎಂ೦೯೧೧೨೦೨೩
*ಅಮುಭಾವಜೀವಿ ಮುಸ್ಟೂರು* .
*ತನಗ*
ಯುದ್ದ ರಕ್ಕಸಿ ದಾಹ
ಜೀವಹರಣ ಮೋಹ
ಕರುಣೆ ತೋರಲಿಲ್ಲ
ಉನ್ಮತ್ತರ ವ್ಯಾಮೋಹ
೦೨೪೦ಪಿಎಂ೦೯೧೧೨೦೨೩
*ಅಮುಭಾವಜೀವಿ ಮುಸ್ಟೂರು*
ನೀ ನನ್ನ ಬೆಳಕಲ್ಲ ಬಿರುಗಾಳಿ
ಮೆತ್ತಿದ ಮಂಜಿನ ಹನಿ ಕರಗಿ
ಭರವಸೆ ಬತ್ತಿ ಹೋಗಿವೆ
ನಂಬಿಕೆ ದ್ರೋಹದ ಸುಳಿ
ಬಾಳ ಕತ್ತಲಿಗೆ ತಳ್ಳಿಯಾಯ್ತು
ನೀ ನನ್ನ ಬೆಳಕಲ್ಲ ಬಿರುಗಾಳಿ
ಆ ಬಿರುಸಿಗೆ ಸಿಕ್ಕು ಬರಿದಾದೆ
ಹಣತೆ ಹಚ್ಚುವೆ ಎಂದುಕೊಂಡಿದ್ದೆ
ಕಾಡ್ಗಿಚ್ಚಿಗೆ ಸಿಕ್ಕು ಬೆಂದು ಹೋದೆ
ಬಳಿ ಬಂದೆ ಬೆಳದಿಂಗಳಂತೆ
ಸುಳಿಯಂತೆ ಪಾತಾಳಕೆ ತಳ್ಳಿದೆ
ತೀರದಲಿ ವಿರಮಿಸುವಾಸೆಗೆ
ಸುನಾಮಿಯಂತೆರಗಿ ಆಘಾತ ನೀಡಿದೆ
ಒಲವ ದೀಪಾವಳಿ ಹಬ್ಬದಿ
ಬಿರುಸಾಗಿ ಆರ್ಭಟಿಸಿ ಭಸ್ಮಗೈದೆ
ದೀಪ ದೀಪವ ಬೆಳಗುವ ಮೊದಲೆ
ನಂದುವ ಆತಂಕ ತಂದೊಡ್ಡಿದೆ
ಬೆಳಕ ಬಯಸಿ ಬಂದವಳು
ಪತಂಗದಂತೆ ರೆಕ್ಕೆ ಸುಟ್ಟು ಕೊಂಡೆ
ಬಾನಿಗೆ ಹಾರುವ ಭ್ರಮೆಯಲ್ಲಿ
ಆಸರೆ ಕಾಣದೆ ಕಂಗಾಲಾದೆ
ಬೇಡ ಬಿಡು ಇನಿಯ
ನಮ್ಮಂತೆ ನಡೆಯದು ಸಮಯ
ಸೇರದ ತೀರದ ಬಾಳು ನಮ್ಮದು
ಇನ್ನು ಒಲವ ಗೂಡು ಸೇರದು
೦೭೪೩ಪಿಎಂ೦೯೧೧೨೦೨೨
*ಅಮುಭಾವಜೀವಿ ಮುಸ್ಟೂರು*
ಹೂಬನ
ಎದೆಯ ಹೊಲದಲ್ಲಿ
ಭಾವಗಳು ಅರಳಿ
ಒಲವ ಹೂಬನವು
ನಳನಳಿಸಿಹುದು
ಯುದ್ಧಗಳು
ಮನುಕುಲದ ನಾಶ
ಯುದ್ಧದ ಈ ಉನ್ಮಾದ
ನರ ರಕ್ತ ಪಿಪಾಸು
ಮದವೇರಿದ ಜನ
ಹೂಬನ
ಎದೆಯ ಹೊಲ
ಹಸಿರು ಸಿರಿಯಲ್ಲಿ
ಹೂಬನದಂತೆ
ನಳನಳಿಸುತ್ತಿದೆ
ಕಾಯುವ ಕರುಣೆ
ಬಳಲಿ ಜೀವ
ಅಳಿದುಳಿದ ಭಾವ
ಬೊಗಸೆ ಜಾರಿ
ಕಾಯುವ ಕರುಣೆಯ
ಹಂಬಲದ ಭಿಕ್ಷುಕ
ಯುದ್ಧಗಳು
ನರ ಮಾನವ
ಯುದ್ಧೋನ್ಮಾದದಿ ಕುದ್ದು
ರಕ್ತ ಮಜ್ಜನ
ನಿಲ್ಲದ ಹಿಂಸೆ ನಿತ್ಯ
ಸಾವಿನ ಸರದಾರ
ಭಯದ ಕಾರ್ಮೋಡ
ನಿಂತಲ್ಲೇ ನೆಲ
ಕುಸಿವ ವೇಳೆಯಲ್ಲಿ
ಭಯದ ಕಾರ್ಮೋಡವು
ನೆಮ್ಮದಿಯ ಕಸಿದು
ಕೈಚೆಲ್ಲಿದೆ ಬಯಕೆ
೧೦೧೨ಪಿಎಂ೦೯೧೧೨೦೨೩
ಅಮುಭಾವಜೀವಿ ಮುಸ್ಟೂರು
ಶಿಕ್ಷಕರು
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ
ಸಿರಿಯ ನಾ ಬೇಡಲಿಲ್ಲ
ಎಡವಿ ಬಿದ್ದಿದೆ ಬದುಕು
ದಡ ಸೇರುವೆ ಅಭಯ ನೀಡು
ಬರುವ ಸಂಕಷ್ಟ ನೂರಿರಲಿ
ಎದುರಿಸುವ ಶಕ್ತಿ ಕೊಡು
ಬಡತನದ ಬೇಗೆಯಲಿ ಬೆಂದಿರುವೆ
ಸಿರಿಯ ನಾ ಎಂದು ನಿನ್ನ ಬೇಡಲಿಲ್ಲ
ಖುಷಿಯ ಕಳೆದುಕೊಂಡು ಬಳಲಿರುವೆ
ಆಸರೆಯ ಬಯಸಿಹೆ ಸಿಗದೇ ಹೋಯ್ತಲ್ಲ
ಬಂಧುಗಳೆಲ್ಲ ಕೈ ಬಿಟ್ಟು ಹೋದರು
ಬಾಳಲಿ ನನ್ನವರೆಂಬುವರಾರಿಲ್ಲ
ನನ್ನದೆನ್ನುವುದೆಲ್ಲ ಇಲ್ಲದೆ ಹೋದರೂ
ಗೆಲ್ಲುವ ಭರವಸೆಯ ಕಳೆದುಕೊಂಡಿಲ್ಲ
ಒಂಟಿ ಪಯಣದ ಹಾದಿಯಲ್ಲಿ
ನಂಬಿಕೆಯ ನಿಟ್ಟುಸಿರು ಬಿಟ್ಟು
ಹಂಬಲಿಸುತಿರುವೆ ಬಾಳಲಿ
ಯಶಸ್ಸು ಸಾಧಿಸುವ ಛಲದಿ
ಬಲವ ಕೊಡು ಎದ್ದು ನಿಲ್ಲಲು
ಗೆಲುವು ಕೊಡು ಜಗಕೆ ಸಾರಿ ಹೇಳಲು
ಸಿರಿಯ ಬೇಡುವುದಿಲ್ಲ ಹರಿಯೇ
ಗುರಿಯೆಡೆಗೆ ನನ್ನ ನಡೆಸಿಬಿಡು
೦೯೫೪ಪಿಎಂ೧೦೧೧೨೦೨೩
*ಅಮುಭಾವಜೀವಿ ಮುಸ್ಟೂರು*
ಅಮಾವಾಸ್ಯೆಯ ಕತ್ತಲಲ್ಲಿ
ಬಾಳ ದಾರಿಯಲ್ಲಿ
ಚಂದ್ರನ ತೇರಿನಲ್ಲಿ
ಒಲವಿನ ಜೋಡಿ ನಾವು
ಕಾಣುವ ಬಿಂಬದಲ್ಲಿ
ಕಣ್ಣಿನ ರೆಪ್ಪೆಯಂತೆ
ನಾ ಕಾಯುವೆ ಇರಲಿ ವಿಶ್ವಾಸವು
ಅಮಾವಾಸ್ಯೆಯ ಕತ್ತಲಲ್ಲಿ
ಕಣ್ಬೆಳಕಾಗಿ ಉಳಿಯುವೆ
ಬಾಳ ದಡ ಸೇರಲು
ಹುಣ್ಣಿಮೆಯ ರಾತ್ರಿಯಲ್ಲಿ
ಉಕ್ಕೋ ಸಾಗರಕೆ ತೀರವಾಗುವೆ
ಒಲವ ಅಮೃತ ನಿನಗೆ ಕುಡಿಸಲು
ಹೂವಂತೆ ನೀನು ಬಾಳಲಿ
ದುಂಬಿಯಂತೆ ನಾ ನಿನ್ನ ಜೊತೆಯಲ್ಲಿ
ಮಧು ಹೀರುವೆ ಹದ ಪ್ರೀತಿಯಲ್ಲಿ
ಧಾವಂತದ ಈ ಬದುಕಿನಲ್ಲಿ
ಏಕಾಂತದ ಈ ಸಮಯದಲ್ಲಿ
ಸುಖಾಂತದ ಒಲವ ಬೇಡುವೆ ನಿಲ್ಲಿ
ಕೈ ಮೇಲೆ ಕೈ ಇಟ್ಟು ಆಣೆ ಮಾಡು
ಎಂದೆಂದೂ ನಿನ್ನವನಾಗಿರುವೆ ನೋಡು
ಜಗಕ್ಕೆ ಮಾದರಿಯಾಗದೆ ನಮ್ಮೀ ಪಾಡು
ಚಂದಿರನೂರಲಿ ಕಟ್ಟೋಣ ಪುಟ್ಟಗೂಡು
ಸದಾ ಬೆಳಕಾಗಿರಲಿ ಬೆಳದಿಂಗಳ ಮಾಡು
ಎಲ್ಲ ಮರೆತು ಹಾಯಾಗಿ ಗುನುಗೋಣ ಹಾಡು
0532ಪಿಎಂ೧೧೧೧೨೦೨೩
*ಅಮುಭಾವಜೀವಿ ಮುಸ್ಟೂರು*
ಕನ್ನಡ ಕವನ ಸಂಚಲನ ಬಳಗದ ಸ್ಪರ್ಧೆಗಾಗಿ
ವಿಷಯ:- *ದೀಪದಿಂದ ದೀಪವ ಹಚ್ಚುವ ದೀಪಾವಳಿ*
ಶೀರ್ಷಿಕೆ :- *ದಾರಿದೀಪ*
ಕತ್ತಲಿಂದ ಬೆಳಕಿನೆಡೆಗೆ
ಸಾಗಬೇಕು ನಮ್ಮ ನಡಿಗೆ
ಸಾಲು ದೀಪಗಳ ಸಂಸಾರ
ಎಣ್ಣೆ ಬತ್ತಿಗಳೇ ಅದಕಾಧಾರ
ದೀಪದಿಂದ ದೀಪ ಹಚ್ಚುವ
ಸಂಸ್ಕಾರವೇ ಬೆಳಕಿನ ದೀಪಾವಳಿ
ಒಂದು ಸಣ್ಣ ಹಣತೆ
ಕೋಣೆಯ ಕತ್ತಲೆ ಕಳೆಯುವುದು
ಜ್ಞಾನದ ಜ್ಯೋತಿ ಮನದ
ಅಜ್ಞಾನವ ತೊಳೆಯುವುದು
ಯಾರೂ ಇಲ್ಲಿ ಪರಿಪೂರ್ಣರಿಲ್ಲ
ಒಬ್ಬರಿಗೊಬ್ಬರು ಇಲ್ಲಿ ದಾರಿದೀಪ
ಜ್ಯೋತಿ ಬೆಳಗೋ ಪ್ರೀತಿ ಬೇಕು
ಕಳೆಯಲು ಮನದ ದ್ವೇಷದ ಶಾಪ
ಸ್ನೇಹದ ಎಣ್ಣೆ ಬೇಕು
ಪ್ರೀತಿಯ ಬತ್ತಿ ಸಾಕು
ಅನುಬಂಧದ ಹಣತೆ ಬೆಳಗಲು
ಅಂತರಂಗ ಬೆಳಕಾಗಲು
ಬಾಳ ಕತ್ತಲಿಗೆ ಹಣತೆ ಹಚ್ಚಿ
ಒಬ್ಬರ ಮುಖ ಒಬ್ಬರು ನೋಡೋಣ
ಒಲವಿನ ಪ್ರಣತಿ ಬೆಳಗುವ ತನಕ
ಬಾಳ ಪಯಣ ಸವೆಸೋಣ
೦೮೧೨ಪಿಎಂ೧೨೧೧೨೦೨೩
*ಅಮುಭಾವಜೀವಿ ಮುಸ್ಟೂರು*
ಮಗುವಾಗಿ ನಿನ್ನ ಕೈ ತುತ್ತು ತಿನ್ನುವಾಸೆ ಇನಿಯ
ಒಂದು ಅಪರೂಪದ ಬಂಧ
ನನ್ನ ನಿನ್ನ ಈ ಸಂಬಂಧ
ಹೂವೊಳಗೆ ಸೇರಿದಂತೆ ಮಕರಂದ
ಬಡತನದೊಳಗೂ ಒಲವಿದೆ
ಆ ಪ್ರೀತಿಯ ನೆರಳಲಿ ಬಾಳಿದೆ
ಜೇನಾಗುವ ಸವಿದು ಸೌಗಂಧ
ಸಿರಿಯ ಬೇಡುವುದಿಲ್ಲ ಬಾಳಲಿ
ನಿನ್ನೊಲವೊಂದು ಸಾಕು ನನಗೆ
ಮಗುವಾಗಿ ನಿನ್ನ ಕೈ ತುತ್ತು ತಿನ್ನುವಾಸೆ ಇನಿಯ
ಎದೆಯ ಭಾವಗಳ ಗೊಂಚಲು
ನಲ್ಲ ನಿನ್ನ ಈ ಚಂದದ ಮಡಿಲು
ಸಿರಿವಂತಿಕೆ ಬೇಡದ ಒಲವೇ ವಿಸ್ಮಯ
ಜೊತೆ ಜೊತೆಯಲಿ ಸಾಗಲಿ ಜೀವನ
ನಗುನಗುತ ಬಾಳಾಗಲಿ ಹೂಬನ
ಅದರಲಿ ನೀ ತುಂಬಿದೆ ಒಲವ ಹೂರಣ
ಅನುದಿನ ಹಿತ ತರಲಿ ಆಲಿಂಗನ
ಅನುಕ್ಷಣವೂ ಆಪ್ಯಾಯಮಾನ
ನಿನ್ನ ಬಾಳಿಗೆ ನಾನಾಗುವೆ ತೋರಣ
ಬಡತನವಿಲ್ಲ ನಿನ್ನೊಲುಮೆಯಲಿ
ಶ್ರೀಮಂತಿಕೆ ಬೇಕಿಲ್ಲ ಬಾಳಿನಲಿ
ಗಂಜಿ ಕುಡಿದರೂ ನಂಜಿಲ್ಲ ಅದರಲಿ
ಪ್ರೀತಿಯ ಕೈ ತುತ್ತು ಬಾಳ ಸಂಪತ್ತು
ಸಂಗಾತಿ ನೀ ತೋರಿದೆ ಸಂಪ್ರೀತಿ
ಸಂತೃಪ್ತೆ ನಾ ನಿನ್ನ ಒಲವ ಸುಧೆಯಲಿ
೦೭೪೨ಪಿಎಂ೧೩೧೧೨೦೨೩
*ಅಮುಭಾವಜೀವಿ ಮುಸ್ಟೂರು*
ಹಚ್ಚಿದ ಹಣತೆ ಬೆಳಕಿನಲ್ಲಿ ಹೊಸತು ಕರೆಯಬಾರದೇ ಇಂದು
No comments:
Post a Comment