*ಕಂಗೆಟ್ಟ ಬದುಕು*
ಏಕೆ ಮುನಿದೆ ಮೇಘವೇ
ಮಳೆ ಸುರಿವ ಮನಸಿಲ್ಲವೇ
ಬಿತ್ತಿದ ಪೈರು ಒಣಗುತಿದೆ
ಕುಡಿವ ನೀರಿಗೆ ಆಹಾಕಾರವಿದೆ
ಕೆರೆ ತೊರೆಗಳೆಲ್ಲ ಬತ್ತಿ
ಬದುಕು ಭೀಕರವಾಗಿದೆ
ಬೆಂದ ಒಡಲಿಗೆ ಇಲ್ಲಿ
ತಂಪನೆರೆಯುವವರಿಲ್ಲ
ಕಾದ ಹೆಂಚಿನಂತೆ ಭೂಮಿ
ಹನಿ ನೀರಿಗೆ ಹಾತೊರೆದಿದೆಯಲ್ಲ
ಗೀರಿದ ಬೆಂಕಿಗೆಲ್ಲವೂ
ಆಹಾರವಾಗಿ ಸುಟ್ಟು ಹಾಕಿ
ಹಸಿವಿಗೆ ಜನಜಾನುವಾರು
ತತ್ತರಿಸಿ ಗುಳೆ ಹೊರಟಿದೆ
ಅಷ್ಟು ಇಷ್ಟು ಇದ್ದ ಭರವಸೆ
ಬರಿದಾಗಿದೆ ಬೊಗಸೆಯಿಂದ ಜಾರಿ
ಉಳಿವಿಗಾಗಿ ಹೋರಾಟ
ಶುರುವಾಗಿದೆ ಕಾಪಾಡು ನೀ ಬಂದು
ಅಲ್ಲೆಲ್ಲೋ ಕೊಚ್ಚಿ ಹೋಗುವ
ಬದಲು ಇಲ್ಲಿ ಬಾಯಿಗೆ ಹನಿಯಾಗು
ಬಯಲುಸೀಮೆಯ ಬದುಕು
ಬರದಿಂದ ಕಂಗೆಟ್ಟಿದೆ ನೀ ಆಸರೆಯಾಗು
0441ಪಿಎಂ19092018
*ಅಮು ಭಾವಜೀವಿ*
ಜಗಳೂರು
No comments:
Post a Comment