*ನಗು ಮೂಡಲಿ*
ಎಷ್ಟೊಂದು ಆಹ್ಲಾದಕರ
ಮಳೆ ಬಂದ ಈ ಮುಂಜಾನೆ
ಭೂಮಿ ತಾ ತಣಿದ ಘಮಲು
ಸವಿಯುವುದೇ ಖುಷಿಯು
ಬತ್ತಿದ ಬೆಳೆಗಳಿಗೆ ಮತ್ತೆ
ಜೀವ ತುಂಬಿದೆ ಈ ಮಳೆ
ಬೀದಿಗೆ ಬಿದ್ದ ಬದುಕಿನಲೂ
ಮತ್ತೆ ಮೂಡಿದೆ ಜೀವಕಳೆ
ಖಾಲಿಯಾದ ಒಡಲು ತುಂಬಿ
ಹಸಿರಾಗಿಸಿ ಸಂಭ್ರಮಿಸಿದೆ
ಬದುಕುವ ಆ ಕನಸು
ಇನ್ನೊಮ್ಮೆ ಜೀವ ಪಡೆದಿದೆ
ನಿಸರ್ಗದ ಆಶಾಕಿರಣ
ಮಳೆಯ ಈ ಪ್ರೇರಣ
ಮತ್ತೆ ಮತ್ತೆ ಬರುತಿರಲಿ
ದಣಿದೊಡಲ ತಣಿಸುತಲಿರಲಿ
ಬರವದು ದೂರ ಓಡಲಿ
ರೈತನ ಮೊಗದಿ ನಗು ಮೂಡಲಿ
ಹಸಿವಿರದ ಜಗ ನಮ್ಮದಾಗಲಿ
ಹಸಿರು ಎಲ್ಲೆಲ್ಲೂ ಚಿರವಿರಲಿ
0900ಎಎಂ26092018
*ಅಮು ಭಾವಜೀವಿ*
ಚಿತ್ರದುರ್ಗ
No comments:
Post a Comment