ಮೊದಲ ರಾತ್ರಿಯ
ಆ ಮೌನದೊಳಗೂ
ತಲ್ಲಣಿಸಿತು ಮನ
ಒಲವಿನ ಕಂಪಿನಲಿ
ಮೈಮನದ ಬಿಸಿಯೇರಿ
ತಬ್ಬಿದ ಈ ಬಾಹು ಬಂಧನ
ಬೆತ್ತಲೆ ಎದೆಗೆ ನಲ್ಲೆ
ನೀ ಒತ್ತಿದ ಪಾದಸ್ಪರ್ಶ
ಒಡಲೊಳಗೆ ಏನೋ ಸಂಘರ್ಷ
ಕಾಮ ಪ್ರೇಮಗಳ
ತಾಕಲಾಟದಲಿ ಸುಖದ
ಸಂಭ್ರಮ ಪ್ರತಿ ನಿಮಿಷ
ಹರೆಯದೆರಡು ಜೀವಗಳು
ಕಡಿವಾಣ ಇರದ ಕುದುರೆಗಳು
ಓಟವೊಂದೆ ಈ ಆಟದಲಿ
ಅಧರಗಳ ಈ ಮಿಲನ
ಭಾವಗಳ ಹಿತ ಸ್ಖಲನ
ರಾತ್ರಿಯಲಿ ದೇಹ ಕದನ
ಬಂಧವದು ಗಟ್ಟಿಯಾಗಲು
ಕಷ್ಟಗಳ ಮೆಟ್ಟಿ ನಿಲ್ಲಲು
ಪಣ ತೊಡುವ ಪರ್ವಕಾಲ
ನಾಚಿಕೆಯನು ಆಚೆ ದೂಡಿ
ಅಂಜಿಕೆಯಿಂದಲೇ ಒಂದುಗೂಡಿ
ನಂಬಿಕೆಯ ನೌಕೆಗೆ ಅಡಿಯಿಡುವ ಸಕಾಲ
ಒಂಟಿ ಜೀವಗಳೆರಡು
ಏಕಾಂತದಲಿ ಬೆರೆತು
ಸ್ವಂತವಾಗುವ ರಾತ್ರಿ
ಜೀವನದುದ್ದಕ್ಕೂ
ಜೊತೆ ನಡೆವ ಕರಾರಿಗೆ
ರುಜು ಹಾಕುವ ಖಾತ್ರಿ
ಈ ಮಿಲನ ಮಹೋತ್ಸವ
ಜೀವನದಿ ಸಮಭಾವ
ಮೂಡುವ ಸಂಭ್ರಮ
0525ಎಎಂ15092018
*ಅಮು ಭಾವಜೀವಿ*
ಚಿತ್ರದುರ್ಗ
No comments:
Post a Comment