*ಮತ್ತೆ ಮರುಕಳಿಸದಂತೆ*
ಮತ್ತೆ ಮರುಕಳಿಸಿತೆ
ಕಾಮುಕರ ಅಟ್ಟಹಾಸ
ಎಂದಿಗೆ ಆಗುವುದೋ
ಅವರ ಸರ್ವನಾಶ
ಬಾಲೆಯೆಂಬುದನೂ ನೋಡದೆ
ಮೃಗವಾಗಿ ಎರಗಿ ಕೊಂದರೇ
ಮಾನವೀಯತೆಯನೇ ಮರೆತು
ಕೊಟ್ಟರೆ ಆ ಅಮಾಯಕಿಗೆ ತೊಂದರೆ
ರಕ್ಷಣೆ ಇಲ್ಲವೇ ಹೆಣ್ಣಿಗೆ
ಮನ್ನಣೆ ನೀಡಬೇಕಲ್ಲವೆ ಅವಳಿಗೆ
ಹೀಗೆ ಬೀದಿಕಾಮುಕರಿಗೆ
ಬಲಿಯಾಗುತ್ತಿದ್ದರೆ ಉಳಿಗಾಲವಿನ್ನೆಲ್ಲಿ
ಕಣ್ಣು ಮುಚ್ಚಿ ಕೂತಿದೆ ಕಾನೂನು
ಅದಕೆ ಮತ್ತೆ ಮತ್ತೆ ಮರುಕಳಿಸಿದೆ
ಜೀವ ತೆಗೆದವನಿಗೆ ಜೀವ ಭಿಕ್ಷೆಯನು
ನೀಡಿ ಪೋಷಿಸಸುತ್ತಿದೆ ಶಿಕ್ಷಿಸದೆ
ಪರಿಹಾರ ಕೊಟ್ಟರೆ ಮುಗಿಯದು
ಅನ್ಯಾಯಕೆ ಶಾಸ್ತಿಯಾಗಬೇಕು
ಒಕ್ಕೊರಲ ಕೂಗೆದ್ದು ಮುಚ್ಚಿದ
ಆ ಕಣ್ಣ ತೆರೆಸಬೇಕು
ಅತ್ಯಾಚಾರಿ ಎಂದಿಗೂ ಕಂಟಕ
ಅವನ ನಾಶವೇ ಸಮಾಜಕೆ ಮದ್ದು
ಅಡಗಿಸುವ ಬದಲು ಎದುರೆಳೆದು
ಶಿಕ್ಷಿಸಬೇಕು ಮತ್ತೆ ಮರುಕಳಿಸದಂತೆ
0719ಪಿಎಂ21122017
*ಅಮುಭಾವಜೀವಿ*
(ಅಪ್ಪಾಜಿ ಎ ಮುಸ್ಟೂರು)
No comments:
Post a Comment