*ಕೈಬೀಸಿ ಕರೆದಿದೆ*
ಕೈ ಬೀಸಿ ಕರೆದಿದೆ ಕಲ್ಪತರು
ಸೂಸಿದೆ ಕಾವ್ಯದ ಸೊಡರು
ಹನಿ ಹನಿ ಇಬ್ಬನಿ ಮುತ್ತಾಗಿ
ಹೊಳೆಯಲು ಸೇರಿದೆ ಒಂದಾಗಿ
ಎಲೆ ಮರೆಯ ತಾರೆಗಳೆಲ್ಲ
ಕಂಗೊಳಿಸುವ ಸುಸಮಯ
ಕಾವ್ಯ ಕಲರವದಿ ಮೀಯುವ
ಕ್ಷಣವಿದು ಅವಿಸ್ಮರಣೀಯ
ಕವಿ ಕೋಗಿಲೆಗಳ ಕಲರವಕೆ
ಸಜ್ಜಾಗಿದೆ ಕಾವ್ಯ ವೇದಿಕೆ
ಭಾವದ ಹೊಳೆಯಲಿ ತೇಲಲು
ಕಾತರಿಸಿ ಪಯಣಿಸಿಹ ಯಾನಿಗಳು
ಯಾವುದೋ ತಾಣ
ಎಲ್ಲಿಯೋ ನಿಲ್ದಾಣ
ಭೇಟಿಗೊಂದು ಕಾರಣ
ನೀಡಿತು ಬದುಕಲೊಂದು ಪ್ರೇರಣ
ಬಣ್ಣಬಣ್ಣದ ಸುಮಗಳೆಲ್ಲ
ಸೇರಿ ರಮಣೀಯವಾಗಿಸಿದೆ
ಎಲ್ಲ ಚಿಂತೆಗಳ ಮರೆತು
ಬದುಕಿಂದು ಸಂಭ್ರಮದಿ ತೇಲಿದೆ
0818ಎಎಂ24122017
*ಅಮುಭಾವಜೀವಿ*
ಅಪ್ಪಾಜಿ ಎ ಮುಸ್ಟೂರು
No comments:
Post a Comment