Tuesday, January 4, 2022

ಕವಿತೆ

ಬಾಳಿನ ಗುಡಿ ಮಲಿನವಾಯಿತು
ಮಾಯಾಂಗನೆ ಬೀಸಿದ ಬಲೆಗೆ
ಬಿದ್ದ ಬದುಕು ಇನ್ನಿಲ್ಲದಂತೆ ನರಳಿತು
ಈಗವಳ ಕಪಿಮುಷ್ಟಿಯಿಂದ
ಹೊರ ಬಂದಾಯ್ತು
ಜೀವನವೀಗ ನಿರಾಳತೆಯಿಂದ
ನಿಟ್ಟುಸಿರು ಬಿಟ್ಟಿತು

೧೨೩೬ಪಿಎಂ೨೫೧೨೨೦೨೧
*ಅಮುಭಾವಜೀವಿ ಸುಧಾ ಮುಷ್ಟೂರು*


ಮನಸ್ಸು ನಿರ್ಮಲವಾಗಿರಲಿ
ಕಲ್ಮಶ ಆಲೋಚನೆಗಳನ್ನು ತ್ಯಜಿಸಿ
ಬದುಕಿನೆಡೆಗೆ ಗಮನಹರಿಸಿ
ನೋವು ಕೊಡುವ ಚಿಂತೆ ನಿಗ್ರಹಿಸಿ
ತೊಂದರೆಯೀವ ಜನರ ತಿರಸ್ಕರಿಸಿ
ನಂಬಿದವರಿಗೆ ನೆರಳಾಗಿ ಜೀವಿಸಿ
ಅವಮಾನವ ಧನಾತ್ಮಕವಾಗಿ ಸ್ವೀಕರಿಸಿ
ತುಳಿಯುವವರ ಪಾದದಡಿಯಿಂದ ಉದ್ಭವಿಸಿ
ಅಧಿಕಾರ ದರ್ಪದವರನು ದೂರವಿರಿಸಿ
ಪ್ರೀತಿಸುವ ಪ್ರತಿಯೊಬ್ಬರ ಆಲಂಗಿಸಿ

೦೨೧೯ಪಿಎಂ೨೬೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*



#ಅಮುಭಾವದೂಟ ೧೯೯
ಉಸಿರುಗಟ್ಟಿದಂತಿತ್ತು
ಅಲ್ಲಿಂದ ಹೊರ ನಡೆದೆ
ಸತ್ಯವಂತರಿಗಲ್ಲಿ ಉಳಿಗಾಲವಿಲ್ಲ
ನ್ಯಾಯ ಕೇಳಿದರಲ್ಲಿ ಅದು ಸಿಗುವುದಿಲ್ಲ
ಪ್ರಾಮಾಣಿಕತೆಗೆ ಬೆಲೆ ಸಿಗದ ಜಾಗವದು
ಸ್ವಾರ್ಥ ತುಂಬಿದ ಈ ಜಗದಲ್ಲಿ
ನಿಸ್ವಾರ್ಥಿಗಳಿಗೆ ನೆಲೆಯಿಲ್ಲ

೦೮೨೯ಪಿಎಂ೨೭೧೨೨೦೨೧
*ಅಪ್ಪಾಜಿ ಸುಧಾ ಮುಸ್ಟೂರು*

No comments:

Post a Comment