ಈ ಇರುಳ ನೀರವ ಮೌನದೊಳಗೂ
ಬೆಳದಿಂಗಳು ಮೂಡುವಂತೆ
ಮತ್ತೆ ಮರಳಿ ಮನಸ್ಸಾಗಿದೆ
ಕೋಟಿ ತಾರೆಗಳು ಹೊಳೆದರೂ
ಶಶಿಯ ಆಗಮನದಂತೆ
ಮತ್ತೆ ಮರಳಿ ಮನಸ್ಸಾಗಿದೆ
ಸಾಲುಗಟ್ಟಿದ ಇಬ್ಬನಿಯೊಳಗೆ
ಅರುಣ ಕಿರಣದ ಹೊಳಪಂತೆ
ಮತ್ತೆ ಮರಳಿ ಮನಸ್ಸಾಗಿದೆ
ಮುಸ್ಸಂಜೆಗೆ ಮುದುಡಿದ ಮೊಗ್ಗು
ಮುಂಜಾನೆಗೆ ಮೆಲ್ಲ ಅರಳುವಂತೆ
ಮತ್ತೆ ಮರಳಿ ಮನಸ್ಸಾಗಿದೆ
ಚೈತ್ರದ ಚಿಗುರಿನ ಜೊತೆಗೆ
ವಸಂತಕ್ಕೆ ಕೋಗಿಲೆ ಹಾಡಿದಂತೆ
ಮತ್ತೆ ಮರಳಿ ಮನಸ್ಸಾಗಿದೆ
ಬಿರುಬೇಸಿಗೆಯಲ್ಲಿ ಬತ್ತಿದ ತೊರೆ
ವರ್ಷ ಕಾಲದಿ ಮೈದುಂಬಿದಂತೆ
ಮತ್ತೆ ಮರಳಿ ಮನಸ್ಸಾಗಿದೆ
ಎದೆಯ ಧಮನಿಯ ಬಡಿತ
ಅವನು ಬರುವ ಸೂಚನೆ ನೀಡಲು
ಮತ್ತೆ ಮರಳಿ ಮನಸಾಗಿದೆ
ಕಲ್ಲು ಮುಳ್ಳಿನ ಹಾದಿ ತುಳಿದು
ಹೆಪ್ಪುಗಟ್ಟಿದ ರಕ್ತ ಕರಗಿ
ಮತ್ತೆ ಮರಳಿ ಮನಸಾಗಿದೆ
೧೦೩೩ಪಿಎಂ೨೨೦೧೨೦೨೨
*ಅಮುಭಾವಜೀವಿ ಮುಸ್ಟೂರು*
No comments:
Post a Comment