ಗೆಲುವನ್ನು ಸಂಭ್ರಮಿದಷ್ಟೇ
ಸೋಲನ್ನು ಸ್ವೀಕರಿಸಬೇಕು
ಸೋತಾಗಲೇ ತಿಳಿಯುವುದು
ನಮ್ಮವರು ಯಾರೆಂದು
ಏಕೆಂದರೆ ಈ ಜಗದಲಿ
ಗೆದ್ದೆತ್ತಿನ ಬಾಲ ಹಿಡಿಯುವವರೇ ಜಾಸ್ತಿ
ಸೋತವರು ಒಬ್ಬಂಟಿಯಾಗುವುದೇ ಜಾಸ್ತಿ
ಗೆಲುವು ಅಭಿಮಾನ ಹೆಚ್ಚಿಸಿದರೆ
ಸೋಲು ಸ್ವಾಭಿಮಾನಿಯಾಗಿಸುತ್ತದೆ
೦೧೨೮ಪಿಎಂ೩೧೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*
ಹೊಸತಿಲ್ಲ ಹಳತೇ ಎಲ್ಲ
ಕಾಲಗರ್ಭದ ನಾಗಾಲೋಟದಲ್ಲಿ
ಮನುಜ ಸಂಸ್ಕೃತಿಯ ಆಚರಣೆ ಇದು
ದಿನದರ್ಶಿಕೆಯ ಬದಲಾವಣೆಯಿದು
ಸಮಯದ ಹಿಂದೆ ಓಡುವ ನಮಗೆ
ಅದು ಸಿಕ್ಕದೆ ಕರೆದೊಯ್ಯುತ್ತಿದೆ
ವರುಷಗಳ ಲೆಕ್ಕದಲ್ಲಿ ಮಾತ್ರ
ಎಂದಿಗೂ ಬದಲಾಗದು ಅದರ ಸೂತ್ರ
ನಿಸರ್ಗಕ್ಕೆ ಇಲ್ಲ ಇದರ ಆಚರಣೆ
ಕೃತಕತೆಯ ವ್ಯರ್ಥ ವಿಜೃಂಭಣೆ
ಪಾಶ್ಚಿಮಾತ್ಯದ ಅಂಧ ಅನುಕರಣೆ
ನಾವೀನ್ಯತೆ ಇಲ್ಲದ ಸಂಭ್ರಮಾಚರಣೆ
ಮದ್ಯ ಮಾದಕಗಳ ಸೇವಿಸಿ
ಮಧ್ಯರಾತ್ರಿಯಲ್ಲಿ ಸ್ವಾಗತಿಸಿ
ದಿನಕಳೆದರೆ ಮತ್ತದೇ ನಿಸ್ಸಾರ ಜೀವನ
ಪುಟ ತಿರುವಿ ಹಾಕುವ ಕಾಲದ ನಿರ್ಗಮನ
ಪ್ರತಿಕ್ಷಣವೂ ಹೊಸತಾದರೂ
ಅದಕ್ಕೆ ಬೇಕಿಲ್ಲ ಇಂಥ ಆಚರಣೆ
ಬದುಕಿನ ಪಯಣಕ್ಕೆ ಸದ್ವಿನಿಯೋಗಿಸಿಕೊಂಡರೆ
ಸಾರ್ಥಕತೆಯ ಅನುಭವದ ಸಂಗ್ರಹಣೆ
ಸಾಗುವ ಹಾದಿಯಲ್ಲಿ ನಗು ತುಂಬಿ
ಸಂಭ್ರಮಿಸುವುದು ಒಳಿತು ಪ್ರತಿಕ್ಷಣ
ಸರಿದು ಹೋಗುವ ವರ್ಷಗಳ ನೆನಪು
ನೆಮ್ಮದಿಯ ಬಾಳಿಗೆ ಆಗಲಿ ಪ್ರೇರಣಾ
೦೨೩೮ಎಎಂ೦೧೦೧೨೦೨೨
*ಅಮುಭಾವಜೀವಿ ಸುಧಾ ಮುಸ್ಟೂರು*
No comments:
Post a Comment