ನನ್ನೆದೆಯ ಗಡಿ ದಾಟಿ
ನನ್ನೊಲವ ಅಪಹರಿಸಿ
ಭವಿಷ್ಯವ ಕತ್ತಲಾಗಿಸಿದ
ಉಗ್ರವಾದಿಯೋ ನೀನು
ಮರಳು ಮಾತಲ್ಲಿ ನಂದಿಸಿ
ಮನವ ನಿನ್ನೆಡೆ ತಿರುಗಿಸಿ
ಈ ಬದುಕನೇ ನನ್ನಿಂದಲೇ ಆಸ್ಪೋಟಿಸಿದ
ಭಯೋತ್ಪಾದಕನೇನೋ ನೀನು
ಆಸರೆಗೆ ಕೈಯ ಹಿಡಿದು
ಅನುಬಂಧವ ನನ್ನಲ್ಲಿ ಬೆಸೆದು
ವಶವಾದ ನನ್ನ ಬದುಕಿನಿಂದ
ಹತ್ಯಗೈದ ಹಿಂಸಾಚಾರಿಯೋ ನೀನು
ಕೈಹಿಡಿದೆನೆಂದು ಕನಿಕರಿಸದೆ
ಬಳಸಿಕೊಂಡೆ ನಿನ್ನ ಲಾಭಕ್ಕೆ
ಭಾವಗಳ ಸೀಮಿತ ದಾಳಿಗೆ
ನನ್ನ ದೂಡಿದ ಆತಂಕವಾದಿಯೋ ನೀನು
ಆಸೆಯನ್ನು ತೋರಿಸಿ
ಅವಿತ ಕಾಮನೆಗಳ ಪ್ರಚೋದಿಸಿ
ಆತ್ಮಾಹುತಿಗೈದು ನನ್ನಿಡಿ ಬಾಳ
ನಾಶ ಮಾಡಿದ ಹತಾಶವಾದಿಯೋ ನೀನು
ನಿನಗೊಲಿದ ನನ್ನ ತಪ್ಪಿಗೆ
ಬಲಿಯಾದೆ ನಾ ನೀ ಪಾಪ ಕೃತ್ಯಕ್ಕೆ
ಪ್ರೀತಿಯ ಈ ಹೋರಾಟದಿ
ಸಾವಿನ ಕುಣಿಕೆಗೆ ನೀ ತಳ್ಳಿದೆ
೦೭೦೯ಎಎಂ೦೧೧೨೨೦೧೫
ಅಮುಭಾವಜೀವಿ ಮುಸ್ಟೂರು
ಎಲ್ಲಾ ಖಾಲಿ
***********
ಎದೆಯ ಭಾವವೆಲ್ಲಾ
ಹರಡಿವೆ ಚುಕ್ಕಿಯಾಗಿ
ಒಂದು ಬೆಳಗಲಿಲ್ಲ
ಬೆಳದಿಂಗಳ ಚಂದಿರನಾಗಿ
ಬಂದ ಭಾವಗಳೆಲ್ಲ
ಹರಿದು ಹೋದವು ವ್ಯರ್ಥವಾಗಿ
ಒಂದು ನಿಂತು ಮನದಿ
ಇಂಗಲಿಲ್ಲ ಸಮರ್ಥವಾಗಿ
ಎಲ್ಲಾ ಖಾಲಿ ಈಗೀಗ
ಬರದ ಛಾಯೆಯಂತೆ
ಒಂದೊಮ್ಮೆ ಕಂಡಿದ್ದವು
ನನ್ನೊಳಗೆ ಮರೀಚಿಕೆಯಂತೆ
ಅರಳಿದ ಸುಮಗಳೆಲ್ಲ
ಪೂಜೆಗರ್ಪಿತವಾಗುವುದಿಲ್ಲ
ಯಾವೊಂದು ಭಾವವು
ನನ್ನಲ್ಲಿ ಸಮರ್ಪಿತಗೊಳ್ಳಲಿಲ್ಲ
ಹುಟ್ಟಿದ ಒಂದೊಂದು ಭಾವಕ್ಕೂ
ಕವಿತೆ ಕಟ್ಟಿ ನಾ ಬರೆದಿಟ್ಟಿ
ನನ್ನೊಳಗೆ ಉಳಿದು ಬೆಳೆದ
ಅವುಗಳನ್ನೆಲ್ಲ ತೆರೆದಿಟ್ಟೆ
ಓದಿದ ಮನಗಳೆಲ್ಲ
ಮುದಗೊಂಡವು
ನನ್ನ ಬೆನ್ತಟ್ಟಿದ ರೀತಿಗೆ ಮತ್ತೆ
ಸಾವಿರ ಭಾವ ಹೊಮ್ಮಿದವು
೦೫೨೧ಎಎಂ೦೨೦೧೨೦೧೫
ಬೆಳಗಿನ ಸ್ವಾಗತ
**********""
ಮಲಗಿದ್ದ ಮುಗ್ಧ ಜಗವ
ಹಕ್ಕಿ ಕೂಗಿನ ಕರೆಗಂಟೆ
ಇಂಪಾಗಿ ಮಾರ್ದನಿಸಿ
ಬೆಳಗಾಯ್ತೇಳೆಂದುಲಿಯಿತು
ತನ್ನ ಮೈ ಮೆತ್ತಿದ ಇಬ್ಬನಿಯ
ಮೆಲ್ಲ ಮೆಲ್ಲನೆ ಒರೆಸಿಕೊಳ್ಳುತ
ಮೈ ಮುರಿದು ಎಲೆ ತೆರೆದು
ಪ್ರಕೃತಿಯು ಬೆಳಕ ಸ್ವಾಗತಿಸಿತು
ಸವಿಗನಸು ಕಾಣುವ ಮಗು
ಮೌನದಲ್ಲೇ ಪಕಳೆಗಳ ಬಿಚ್ಚಿ
ನಗುದ ತನ್ನ ಚೆಲುವ ವೈಯಾರವ
ಬಾನ ಅತಿಥಿಗೆ ಮುದದಿ ಅರ್ಪಿಸಿತು
ಹರಿವ ನೀರಿನ ನಾದ
ಗುಡಿಯ ಗಂಟೆಯ ಶಬ್ದ
ಪ್ರಶಾಂತ ಮುಂಜಾವಲಿ
ಸುತ್ತೆಲ್ಲ ಪ್ರತಿದ್ವನಿಸುತ್ತಿತ್ತು
.
ಇರುಳ ಬೆರಳನ್ನು ಹಿಡಿದು
ಉಷೆಯ ಹಸೆಯೇನೇರಿ
ಹೊಸ ಹುರುಪಿನ ಹರೆಯಕೆ
ಅಣಿಯಾಗಿ ಬಂದ ಬಾಲ ನೇಸರ
ಜಗವೆಲ್ಲ ಝಗಮಗಿಸಿ
ಈ ಬೆಳಗ ಸಂಭ್ರಮಿಸಿ ಹೊಸ
ಲವಲವಿಕೆಯಿಂದಲಿ ಓಡುತಲಿತ್ತು
ಕಾಯಕವನಾಧರಿಸಿ ಕಾಲದ ಬೆನ್ನೇರಿ
೦೬೧೪ಎಎಂ೦೨೧೨೨೦೧೬
ಹೆಸರಲ್ಲಿ ಏನಿದೆ
*************
ಹೆಸರಲ್ಲಿ ಏನಿದೆ ಬರಿ ಕೆಸರು
ನಿತ್ಯ ಹೊರಳಾಡಬೇಕಿಲ್ಲಿ
ಉಳಿಸಲು ಅದರ ಹೆಸರು
ಹೆಜ್ಜೆಹೆಜ್ಜೆಗೂ ಸವಾಲಾಗಿ
ಸಜ್ಜನಿಕೆಯ ಕುರುಹಾಗಿ
ಉಳಿಸಬೇಕು ಹೆಸರು
ಕೂಗಿ ಕರೆಯಲೊಂದು
ಕರೆದು ಗುರುತಿಸಲೆಂದು
ಗುರುತಿಸಿ ಗೌರವಿಸಲೆಂದು
ಹೆಸರಿರಬೇಕು ಮನುಜಗೆ
ಹೂವು ಹೆಸರ ಬಯಸದು
ಹಸಿರ ಉಸಿರೇ ಆಗಿಹುದು
ದುಂಬಿ ಬಿನ್ನವೆಣಸದು
ಜೇನ ಸವಿಯ ಜಗಕೆಲ್ಲ ಹಂಚುವುದು
ಬಣ್ಣಗಳ ಭಿನ್ನವತ್ತಳೆಯಲ್ಲೆಲ್ಲ ಹೇಳುವುದು
ಹೆಸರಿನ ಗುಂಗು ಅದಕ್ಕಿರದು
ಮನುಜನಷ್ಟೇ ಹೆಸರಿಗೆ ಹಂಬಲಿಸುವುದು
ಹರಿವ ನೀರಿಗಿಲ್ಲ ಹೆಸರ ಹಂಗು
ಎಲ್ಲ ಶೋಕಿ ಪಾವನಗೈದು
ಜೀವಜಲದ ಒಲವೇಕೆ
ನಿಮ್ಮಗರಿ ವಾಗದು
ಮನುಜನಷ್ಟೇ ಹೆಸರ ಹಿಂದೆ ಓಡುವುದು
೦೬೪೫ಎಎಂ೦೨೧೨೨೦೧೬
ನಮನ
*****
ಮನಸು ಮೂಕವಾದ ಕ್ಷಣ
ಹೆಮ್ಮೆಗೂ ಹೆಮ್ಮೆ ಎನಿಸುವ ದಿನ
ಅದಕ್ಕೆ ಕಾರಣ ಈ ಸಮರ್ಪಣ
ಸಲ್ಲಿಸುವೆ ಅಭಿನಂದನ
ರಾಜ್ಯದ ಮೂಲೆ ಮೂಲೆಯಿಂದ
ಕವಿ ಗೋಷ್ಠಿಗೆಂದು ಬಂದ
ನಮ್ಮನೆಲ್ಲ ಆಧರಿಸಿ ಸ್ವಾಗತಿಸಿ
ಸನ್ಮಾನಿಸಿದ ಸಮರ್ಪಣ ಕೊಂದು ನಮನ
ಅಚ್ಚು ಕಟ್ಟು ಕಾರ್ಯಕ್ರಮ
ಅಚ್ಚುಮೆಚ್ಚಿನ ಸಮಾಗಮ
ನಾಡು ನುಡಿ ನೆಲ ಜಲಕ್ಕೆ ಮಿಡಿದ
ಕವಿ ಮನದ ಕವಿತೆಗಳಿಗೆ ವಂದನ
ಕಾರ್ಯಕರ್ತರ ಅಮಿತೋತ್ಸಾಹ
ಕವಿಗಳಿಗಿಂತ ಈ ಪ್ರೋತ್ಸಾಹ
ಮರೆಯದಂತಹ ಕ್ಷಣವಾಗುಳಿದ
ಸಮರ್ಪಣದ ಮೊದಲ ಪ್ರಯತ್ನ
ಹಿರಿಯರ ಮಾರ್ಗ ದರ್ಶನ
ಸ್ನೇಹ ಮನಗಳ ಆತ್ಮೀಯಾಲಿಂಗನ
ಹಿತಮಿತ ರುಚಿ ಬೆರೆತ ಭೋಜನ
ಮಾರುಹೋದೆ ಆ ಪ್ರೀತಿಗೆ ನಾ
ಮೈಸೂರಿನ ಈ ಸಂಪ್ರದಾಯಕ್ಕೆ
ನಾ ಶರಣು ಶರಣು
ಅವಕಾಶದ ಕದ ತೆರೆದವರ
ನೆನೆದು ಆನಂದ ಭಾಷ್ಪ ತಂತು ಕಣ್ಣು
ಸಾರ್ಥಕ ಭಾವ ಮೂಡಿತು
ಜವಾಬ್ದಾರಿಯ ಹೊಣೆ ಹೆಚ್ಚಿತು
ಸಮರ್ಪಣಗೊಂದು ಸಮರ್ಪಣೆ
ನನ್ನ ಈ ಮೂಕ ಮನದ ಅಭಿನಂದನೆ
೧೦೩೫ಎಎಂ೦೫೧೨೨೦೧೬
ಸಾಧಕೀಯ ಸಾವು
*************
ಕಣ್ಣು ಹನಿಗರೆದಿದೆ
ಮನವು ಮರುಗಿದೆ
ಸಾಧಕಿ ಒಬ್ಬಳ ಸಾವು
ನೋವು ತಂದಿದೆ
ತಾನು ನಡೆದ ಹಾದಿಯಲ್ಲಿ
ತನ್ನ ಸಾಧನೆಯ ಹೆಜ್ಜೆಯೊತ್ತಿ
ನಾಡಿಗೆ ಹೆಮ್ಮೆ ಎನಿಸಿದ
ಅಮ್ಮ ಪದದ ಅನ್ವರ್ಥವಾಗಿ
ಬಡವರ ಪಾಲಿನ ಮಹಾತಾಯಿ
ರೈತರ ಪಾಲಿನ ಕರುಣಾಮಯಿ
ನಿಲ್ಲುವ ನೆಲೆಗೊಳಿಸುವ ಗಟ್ಟಿಗಿತ್ತಿ
ಸ್ತ್ರೀ ಕುಲದ ಹೆಮ್ಮೆ ಈ ನಾರಿ
ಕಲೆಯಲ್ಲಿ ನಾಯಕಿಯಾಗಿ ಮೆರೆದು
ರಾಜಕೀಯದಲ್ಲಿ ಮುಖ್ಯಮಂತ್ರಿ ಯಾಗಿ
ನಂಬಿದವರ ನಂಬಿಕೆಗರ್ಹವಾಗಿ
ಬದುಕಿದ ಛಲಗಾತಿ
ವಿವಾದಗಳೇನಿರಲಿ
ಈಗೆಲ್ಲವೂ ಗೌಣ
ಆ ಸಾಧಕೀಯ ಸಾಧನೆಗೆ
ಕಂಪನಿ ಕರೆದಿದೆ ಮನ
೧೧೪೮ಎಎಂ೦೬೧೩೨೦೧೬
ಬೆನ್ತಟ್ಟಿದ ಕೈಗಳು
************
ತಿರಸ್ಕಾರದ ನೋವಲಿ ಬೆಂದು
ಪುರಸ್ಕಾರದ ನಲಿವ ಉಂಡು
ಸಾರ್ಥಕಯಹತೆಯ ಭಾಷ್ಪ ಸುರಿದು
ಕವಿ ಉಳಿದನಿಂದು ನೋಡು
ಬರೆದ ಭಾವ ಮೆರೆಯಲು
ಬೇಕು ಬೆನ್ತಟ್ಟುವ ಕೈಗಳು
ಕವಿಯ ಕಲ್ಪನೆ ವಾಸ್ತವವಾಗಲು
ಬೇಕು ಓದಿ ಓದಿಸುವ ಮನಗಳು
ಪ್ರಶಸ್ತಿಗಾಗಿಯೇ ಎಂದು
ಕವಿತೆ ಹುಟ್ಟುವುದಿಲ್ಲ
ಓದುಗನ ಮನ ತಣಿಯೇ
ಅದಕ್ಕಿಂತ ಪುರಸ್ಕಾರ ಬೇಕಿಲ್ಲ
ಬರೆಯಲೆಂದೇ ಕೂರಲು
ಹುಟ್ಟದು ಕವಿತೆ
ತಾನಾಗಿಯೇ ಹುಟ್ಟಿ ಬರಲು
ಇರುಳಲು ಬೆಳಗುವ ಹಣತೆ
ಬೆಳೆಯಬೇಕು ಕಾವ್ಯ
ಬೆಳಗಬೇಕು ಕವಿ ಭವಿಷ್ಯ
ಕವಿ ಅಳಿದರು ಕವಿತೆ ಉಳಿದು
ಉಲಿಯಬೇಕದು ನಿತ್ಯ
೦೭೧೨ಪಿಎಂ೦೬೧೨೨೦೧೬
ಓ ಪ್ರೇಮಿ
*****₹**
ಓ ಪ್ರೇಮಿ ಓ ಪ್ರೇಮಿ
ನೀ ಮೌನಿಯಾದೆ ಅದೇಕೆ
ಓ ಧ್ಯಾನಿ ಓ ಧ್ಯಾನಿ
ಪ್ರೀತಿಯ ಮೇಲಿಡು ನೀ ನಂಬಿಕೆ
ಒಲವೊಂದು ತಪವು ನೀ ಕೇಳು
ಒಲವನ್ನು ನಂಬಿ ನೀ ಬಾಳು
ಪ್ರೀತಿಯಲ್ಲಿ ಎಂದೆಂದೂ ಮಾಮೂಲು
ಈ ವಿರಹ ಎಂಬ ಅಮಲು
ಪ್ರೇಮಿಗಳು ಒಂದು ಕ್ಷಣ ಸೇರಲು
ಈ ಸನಿಹ ತೆರವಂತೆ ಸ್ವರ್ಗದ ಬಾಗಿಲು
ಯುವ ಆ ನೋವೆಲ್ಲ ಮಾಯ
ಯುಗ ಒಂದು ಕ್ಷಣ ವಾಗ ಸಮಯ
ಪ್ರೀತಿಯ ಗೆಲುವಿಗಾಗಿ
ಇಲ್ಲಿ ನಿತ್ಯ ನೂರು ಹೋರಾಟ
ನರಳಿ ಅರಳಿ ಬಾಳುವುದರಲ್ಲಿ
ಯಾರಿಗೂ ಕಾಣದು ಆ ಸಂಕಟ
ಮೌನವೇ ಪ್ರೇಮಿಯ ಉತ್ತರ
ತ್ಯಾಗವೇ ಪ್ರೇಮವು ನೀಡಿದ ಸಂಸ್ಕಾರ
೦೩೦೯ಪಿಎಂ೦೭೧೨೨೦೧೬
ಹುಟ್ಟಬೇಕಿದೆ ಕವಿತೆ
####೨#######
ಹುಟ್ಟಬೇಕಿದೆ ಕವಿತೆ
ಅಂಧಕಾರದೊಳಿರುವ
ಮೂಢ ಜನರ ನಂಬಿಕೆಯ
ಕಳೆವ ಬೆಳಕಾಗಿ ಬೆಳಗಲು
ಹುಟ್ಟಬೇಕಿದೆ ಕವಿತೆ
ನೊಂದವರ ನೋವ ಮರೆಸಿ
ಎದೆಯಲ್ಲಿ ಒಲವೇ ಮೂಡಿಸಿ
ಮತ್ತೆ ಹೋರಾಟದ ಹುರುಪು ತುಂಬಲು
ಹುಟ್ಟಬೇಕಿದೆ ಕವಿತೆ
ದೌರ್ಜನ್ಯ ದಬ್ಬಾಲಿಕೆಯ ಮೆಟ್ಟಿ
ನಿರಾಶ್ರಿತರಿಗೆ ಆಶ್ರಯವಿತ್ತು
ಬದುಕಲಿ ನೆಲೆಗೊಳಿಸಲು
ಹುಟ್ಟಬೇಕಿದೆ ಕವಿತೆ
ದೌರ್ಭಾಗ್ಯರ ಸೌಭಾಗ್ಯವಾಗಿ
ದೌರ್ಬಲ್ಯವ ಕಿತ್ತು ಪ್ರಾಬಲ್ಯರಾಗಿಸಿ
ದಾರಿದ್ರ್ಯವನು ಹೊಡೆದೋಡಿಸಲು
ಹುಟ್ಟಬೇಕಿದೆ ಕವಿತೆ
ಪೊಳ್ಳು ಭರವಸೆಯ ನೀಡುವವರ
ಕಳ್ಳ ಬುದ್ದಿಯನ್ನು ಕೊಳ್ಳೆ ಹೊಡೆದು
ಸ್ವಚ್ಛಗೈವ ಕಸಪೊರಿಕೆಯಾಗಲು
ಹುಟ್ಟಬೇಕಿದೆ ಕವಿತೆ
ನಾಡು ಕಟ್ಟಿದವರ ನೆನೆದು
ನಾಡಿಗಾಗಿ ಮಡಿದವರತ್ತ ನಡೆದು
ವೀರ ಚರಿತ್ರೆಯ ಸಾರಲು
ಹುಟ್ಟಬೇಕಿದೆ ಕವಿತೆ
ನನ್ನದೆಂಬುದನ್ನೆಲ್ಲ ಅಳಿಸಿ
ದೈವತ್ವದ ಎದುರಲ್ಲಿ ಸಮರ್ಪಿಸಿ
ಅಹಮಿನ ಧೂಪವಾಗಲು
ಹುಟ್ಟಬೇಕಿದೆ ಕವಿತೆ
ಅವಮಾನಗಳ ಸಹಿಸಿ
ಅಭಿಮಾನವ ಸಂಪಾದಿಸುವ
ಸ್ವಾಭಿಮಾನವಾಗಿ ಹೊಮ್ಮಲು
ಹುಟ್ಟಬೇಕಿದೆ ಕವಿತೆ
ಅಕ್ಷರದ ಸತ್ವ ಮಹತ್ವ ಸಾರಿ
ಅನಕ್ಷರತೆಯ ಬುಡ ಸಮೇತ ಕಿತ್ತು
ಸಾಕ್ಷರತೆಯ ಪಟವ ಹಾರಿಸಲು
ಹುಟ್ಟಬೇಕಿದೆ ಕವಿತೆ
ಹೆತ್ತವರ ಬೀದಿಗೆ ತಳ್ಳಿ
ಉದ್ದುದ್ದ ವೇದಾಂತ ನುಡಿಯುವವರ
ನಡೆ ಬದಲಾಸಲು
ಹುಟ್ಟಬೇಕಿದೆ ಕವಿತೆ
ಅಬಲೆಯರ ಮೇಲ್ನಡೆಯುವ
ಅತ್ಯಾಚಾರವ ಹಿಮ್ಮೆಟ್ಟಿ
ಸಬಲ ಸಾಮ್ರಾಜ್ಯ ಕಟ್ಟಲು
ಹುಟ್ಟಬೇಕಿದೆ ಕವಿತೆ
ವರದಕ್ಷಿಣೆಯ ಭೂತ ಬಿಡಿಸಿ
ನಮ್ಮ ಬಾಳು ಸಮಪಾಲು ಮಂತ್ರಪಟಿಸಿ
ಸಮಾನತೆಯ ಸವಿ ಉಣಿಸಲು
ಹುಟ್ಟಬೇಕಿದೆ ಕವಿತೆ.
ಕಲೆ ಸಾಹಿತ್ಯ ಸಂಸ್ಕೃತಿಗಳ
ಮರೆತ ಈ ಜನಗಳ
ಮನದೊಳಗೆ ಮತ್ತೆ ಮೇಲೆಸಲು
ಹುಟ್ಟಬೇಕಿದೆ ಕವಿತೆ
ನಮ್ಮವರ ಬದುಕಿನ ರೀತಿ ನೀತಿಯ
ಮುಂದಿನವರಿಗೆ ತಲುಪಿಸುವ
ಪ್ರಭಾವ ವಾಹಕವಾಗಲು
೦೬೦೦ಎಎಂ೦೭೧೨೨೦೧೬
ಸೂರು ಕಟ್ಟಬೇಕಿದೆ
**************
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ
ನೊಂದ ಜೀವಗಳ
ನೆಮ್ಮದಿಯ ನೆರಳ
ಬೆರಳ ಹಿಡಿದು ಕರೆದು
ಮರೆಸುವ ಸಾಂತ್ವಾನದ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ
ಅಸಹಾಯಕ ಬದುಕಿಗೆ
ಆಸರೆಯ ಕೈಚಾಚಿ
ಅನುಬಂಧ ಬೆಸೆಯುವ
ಅನುಕಂಪದ ಅಪ್ಯಾಯತೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ
ಅಬಲರ ಬೆಂಬಲವಾಗಿ
ಬದುಕುವ ಹಂಬಲ ತುಂಬಿ
ಕನಸುಗಳ ಬಿತ್ತುತ
ಭರವಸೆಯ ಹೊಸ ನಿರೀಕ್ಷೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ
ಪ್ರೀತಿಗಾಗಿ ಹಲುಬುವ
ಅಸಂಖ್ಯಾತ ಜೀವಸಂಕುಲವ
ಅಪ್ಪುಗೆಯ ಆಶಯ ನೀಡಿ
ಪೊರೆವ ಪರಂಪರೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ
೧೧೩೩ಎಎಂ೦೮೧೨೨೦೧೬
ಅರ್ಥಹೀನ ಬದುಕು
""""""""""""""""""''
ನಾನು ನೀನು ಬೆಸೆದರು
ಮನಸು ಮತೆಲ್ಲೋ ಹರಿದು
ದೇಹ ಸೇರುವುದಾದರೂ
ಭಾವವಿರದ ಬದುಕು ಅರ್ಥಹೀನ
ಮಾತನಾಡಬೇಕಾದ ಹೊತ್ತು
ಮೌನವನ್ನೆಲ್ಲ ನುಂಗಿತ್ತು
ಒಂದು ಸಾಧನದೊಂದಿಗೆ
ಕಳೆದೆ ಹೋದೆ ಮಾತನಾಡದೆ ನನ್ನೊಂದಿಗೆ
ಆಡುವ ಮಾತು ನೂರಿದ್ದರು
ಆಡುವ ತುಟಿಗಳು ಬಿಗಿದಿವೆ ಈಗ
ಕಣ್ಣು ಕಣ್ಣು ಸೇರುವ ಬದಲು
ಏನೇನೋ ನೋಡಿ ದಣಿಯುತ್ತಿವೆ
ಹೃದಯದ ಭಾವ ಬೆರಳ
ತುದಿಯೊಳು ಆಡಿ ಮೂಡಿವೆ
ಮತ್ತೊಂದರಲ್ಲಿ ಸಂದೇಶವಾಗಿ
ಬಿಸಿಯಪ್ಪಿಗೆ ಹಿತ ನೀಡದೆ
ತಾವು ಹಾರಿದೆ ಸೂಕಿಸದೆ
೦೯೪೫ಪಿಎಂ೦೮೧೨೨೦೧೬
ನೀನಿರದ ಬೇಸರ
************
ನಡೆಯಲಾರೆ ದೂರ
ನೀನಿರದ ಬೇಸರ
ಚೇತನವನೇ ಕಸಿದಿದೆ
ಶಾಂತಿಯನ್ನು ಕದಡಿದೆ
ತಂಗಾಳಿಯು ಕೂಡ ನನಗೀಗ
ಕಿರಿಕಿರಿಯ ಮಾಡುತ್ತಿದೆ
ಮಧುರ ನಾದವು ಕೂಡ
ಕರ್ಕಶವಾಗಿದೆ ನೀನಿಲ್ಲದೆ
ಒಣಹುಲ್ಲಲು ಹಸಿರ ಕಾಣುವಾಸೆ
ನೀನಿರದ ಕಿಡಿಸೋಕೆ ತಂತು ಈ ಹತಾಶೆ
ಬರದ ಗರ ಬಡಿದಿದೆ ಈಗ
ನಿನ್ನೊಲವ ಸೋನೆ ಸುರಿಯದೆ
ಭಾವಗಳ ಅಂತರ್ಜಲ ಬತ್ತಿ
ನಿರ್ಜೀವವಾಗಿದ ಬದುಕು
ವಿರಹದ ಬೇ(ಸಿ)ಗೆಯಲ್ಲಿ ಬೆಂದು
ಬಸವಳಿದಿದೆ ಚಂದ ಬದುಕು
ಮನದಾಗಸವು ಬಿಕ್ಕುತಿದೆ
ನಿನ್ನ ನಗು ಮೇಘ ಸಂದೇಶವಿರದೆ
ಜೀವನವೇ ನರಳುತಿದೆ
ನಿನ್ನ ಉಪಸ್ಥಿತಿ ಇರದೆ
ಬಂದು ಬಿಡು ನಲ್ಲ
ಇನ್ನು ಕಾಯಿಸುವುದು ತರವಲ್ಲ
ಇರುವ ಸುಖವನ್ನೇ ಹಂಚಿ ತಿಂದು
ಮೆರೆಯೋಣ ಹೊಸ ಜೀವನದಿ
8:38 ಎಎಂ 9.12.2016
ಬಾನತಿಥಿಯ ಸ್ವಾಗತ
***************
ಮಬ್ಬು ಕರಗುತ್ತಿದೆ
ಜಗವೆದ್ದು ಕೂರುತಿದೆ
ಮೂಡಣದ ಬಾನತಿಥಿಯ
ಸ್ವಾಗತಿಸುತಿದೆ
ಇಬ್ಬನಿ ಮೆತ್ತಿದ ಪ್ರಕೃತಿಯು
ಮೋರೆಯನೊರೆಸಿಕೊಳ್ಳುತಲಿ
ಹಕ್ಕಿ ಗಾನಕ್ಕೆ ಕೊಳಕಿತಗೊಂಡು
ಲವಲವಿಕೆಯ ಹೂ ಅರಳಿಸಿದೆ
ಮುಚ್ಚಿದ ಕಣ್ಣ ತೆರೆದ
ಎಲೆಗಳ ಹಸಿರು ವರ್ಣ
ಭಾಸ್ಕರನ ಆಗಮನವ ಸಾರಿ
ಸ್ವರ್ಗವನ್ನೇ ಧರೆಗಿಳಿಸಿದೆ
ಹರಿವ ನೀರ ಸುನಾದ
ಉಕ್ಕುವ ಅಲೆಗಳ ಆನಂದ
ಬೆಳಕಿನ ಈ ಸೆಳೆತಕ್ಕೆ ಸಿಕ್ಕು
ತೋರಿದ ಕ್ರಿಯಾಶೀಲ ದಿಕ್ಕು
ತಂಪಿನ ಇಂಪಿನ ಮುಂಜಾನೆ
ತೆರೆಯಿತು ಹೊಸ ಭಾವದ ಖಜನೆ
ಏಳಿರಿಯೆಲ್ಲ ಕಾರ್ಯೋನ್ಮುಖರಾಗಿ
ದುಡಿಯುತ ಕಾಲನೊಂದಿಗೆ ಜೊತೆಯಾಗಿ
0618 ಎಎಂ 10.12.2016
ಹೊಸ ಕನಸ ಹೊತ್ತು
*******-*******
ಹೊಸ ಕನಸುಗಳ ಹೊತ್ತು
ಹೊಸ ಜೀವನಕ್ಕೆ ಅಡಿಯಿತ್ತು
ಹೊಸತನದ ತುಡಿತ ಮಿಡಿತಗಳ
ಹೊಸ ಜೋಡಿಗೆ ಶುಭಾಶಯ
ಬಾಳ ಹಾದಿಯ ತುಂಬಾ ನಗುವಿರಲಿ
ಬದುಕಿನ ಅಂತ್ಯದವರೆಗೂ ಒಲವಿರಲಿ
ಏಳು ಬೀಳು ಸಹಜ ಬಾಳಿನಲ್ಲಿ
ಏರು ಗತಿಯು ನಿಮ್ಮದಾಗಿರಲಿ
ಪ್ರೀತಿಸುವ ಜೀವಗಳು ನೀವು
ಸಿಹಿಯೊಂದಿರಲಿ ಬೇಡ ಬೇವು
ಸರಿ ಮಾತು ಸಾವಿರಾಗಲಿ
ಒಮ್ಮತದ ನಿಲುವು ನಿಮ್ಮಿಬ್ಬರದಾಗಲಿ
ಹಿರಿಯರ ಹರಕೆ ನಿಮಗಿದೆ
ಕಿರಿಯರಿಗೆ ಆದರ್ಶ ನೀವಾಗಿರಿ
ಸಂಸಾರದ ಈ ಬಂಧನ
ಆಗಲಿ ಮನಗಳ ಮಧುರ ಮಿಲನ
ಸುಖದ ನೆರಳು ಸದಾ
ನಿಮ್ಮ ಬೆರಳ ಹಿಡಿದು ನಡೆಸಲಿ
ನೂರು ಕಾಲ ಬಾಳಿರೆಂದು
ನಾನು ಈ ಕವಿತೆಯಿಂದ ಹರಸುವೆ
12 12 ಪಿಎಂ 11 12 2018
ಬಾಳ ಹೆಗ್ಗುರುತು.
************
ಬೇಕಿಲ್ಲ ನನಗೇನು ನಿನ್ನ ಹೊರತು
ನೀನೆ ನನ್ನ ಬಾಳ ಹೆಗ್ಗುರುತು
ಒಲವಿಗಾಗಿ ಹಂಬಲಿಸುವ
ಜೀವಕ್ಕೆ ನೀ ತಾಯಾದೆ
ಚೆಲುವಿಗೆ ಮನವ ಬೆಂಬಲಿಸಿ
ನೋವಲ್ಲು ಔದಾರ್ಯ ಮೆರೆದೆ
ಹಸಿವು ಎನ್ನಲು ಕರೆದು
ನಿನ್ನ ಹಸಿವು ಲೆಕ್ಕಿಸದೆ ಕೈತುತ್ತನಿತ್ತೆ
ದಣಿದು ಬಂದಾಗ ನಿನ್ನ ಬಳಲಿಕೆಯನು
ತೋರ್ಪಡಿಸದೆ ಸಂತೈಸಿದೆ
ಅಮ್ಮ ಎಂಬೊಂದು ಕೂಗಿಗೆ
ನಿನ್ನ ಇಡೀ ಬದುಕನ್ನೇ ಮೀಸಲಿಟ್ಟೆ
ಯಾವ ಪ್ರತಿಫಲವ ಬೇಡದೆ
ನಿನ್ನೊಡಲಲ್ಲಿ ನನಗೆ ಜೀವವ ಕೊಟ್ಟೆ
ಸಾವಿನಾಚೆಗೂ ಉಳಿಯುವ ಬಂಧ ನಿನ್ನದು
ನೋವಿನಲ್ಲೂ ಮೊದಲು ಕರವ ಹೆಸರದು
ನನಗೆಲ್ಲ ಪುಕ್ಕಟೆ ಕೊಟ್ಟ ದೈವ ನೀನು
ನಿನ್ನನೇ ನಂಬಿದ ಅಪ್ಪಟ ಭಕ್ತ ನಾನು
6 21 ಎ ಎಂ 12 12 2016
ಎಲ್ಲ ಮುಗಿದಿರುವಾಗ
****************
ಎಲ್ಲ ಮುಗಿದಿರುವಾಗ
ಈಗ ಬಂದರೇನು ಪ್ರಯೋಜನ
ಗರಬಡಿಸಿತು ಬರ ಬಂದು
ತತ್ತರಿಸಿದೆ ರೈತಾಪಿ ಜೀವನ
ಬತ್ತಿ ಹೋಗಿದೆ ಬಿತ್ತುವ ಕಾಲ
ಉಳಿದಿದೆ ಬರೀ ಬೇಸಿಗೆಕಾಲ
ಬಿರುಗಾಳಿಯಬ್ಬರದಿ ಬಂದರೆ
ಅಳಿದು ಉಳಿದ ಬದುಕಿಗೂ ತೊಂದರೆ
ಬರಿಗೈಲಿ ಕೂತು ಕರುಗುತಿಹ
ಬಡಪಾಯಿ ಈ ರೈತ
ಈಗ ಸುರಿಯುವ ಬದಲು ಮಳೆ
ಮುಂಗಾರಿಗೆ ಬರಬಾರದಿತ್ತಾ
ಒಣಗಿದ ಒಡಲನು
ತಣಿಸಲು ಬಂದಿಹುದು
ಸತ್ತ ಭರವಸೆಯ ಮತ್ತೆ
ಚಿಗುರಿಸಲು ಸೋತಿಹುದು
ಏನಾಯಿತು ಈ ಪ್ರಕೃತಿಗೆ
ದಿಕ್ಕೆಟ್ಟು ಓಡಿದೆ ಅದ್ಯಾವ ಕಡೆಗೆ
ಏರುಪೇರಿನ ಈ ಕಾಲಘಟ್ಟ
ಕಟ್ಟಿತು ರೈತ ಬದುಕಿಗೆ ಚಟ್ಟ
0452 ಪಿಎಂ 13 12 2016
ಧಗೆಯಾರಿದೆ ಜೀವ
**************
ನೋವಿನ ಆಕಂದನ
ಸೋಲಿನ ಆಕ್ರಮಣ
ಭಗ್ನಗೊಂಡ ಕನಸುಗಳ
ನೆನೆದು ರೋಧಿಸಿದೆ ಮನ
ಹೆಜ್ಜೆ ಹೆಜ್ಜೆಗೂ ಕಟ್ಟಿಹಾಕಿ
ಕಾಮ ಕೊಚ್ಚೆಯಲ್ಲಿ ನೂಕಿ
ಕರುಬುವ ನನ್ನ ಕಂಡು ನಗುವ
ಜನರೊಂದಿಗೆ ನಾ ಹೇಗೆ ಹೇಗಲಿ
ಕಟ್ಟಿದ ಗೆಜ್ಜೆ ಸವೆವಾ ಮುನ್ನವೇ
ಮುಟ್ಟಿದ ಕೈಗಳು ಮೈಲಿಗೆ ಮಾಡಿ
ಕತ್ತಲ ಜಗದೀ ಬೆತ್ತಲೆ ಬಿಸುಟಿ
ಹುಸಿನಗುತಿದೆ ಹಸಿ ಮೈಯನುಂಡು
ಯೌವ್ವನದ ಕನಸುಗಳ ಕೊಂದು
ಮೈಮನಗಳ ಘಾಸಿಗೊಳಿಸಿ.
ಆ ಗಾಯದ ಮೇಲೀಗ ನಿರ್ಲಕ್ಷದ
ಬರೆಯೆಳಿದು ಭೀಭತ್ಸ್ಯ ಮೆರೆದಿದೆ
ಭರವಸೆಗಳನೆಲ್ಲ ಅಳಿಸಿ
ಬದುಕನ್ನೇ ಸಾಯಿಸಿದರು
ಉಳಿದ ದೇಹವನ್ನುಂಡು
ಜಗದಿ ಗಣ್ಯತೆಯ ಮೆರೆದವರು
ಮೃಗಗಳಿಗೆ ಸುಖವ ನೀಡಿ
ಬಳಲಿ ಬಸವಳಿದಿರುವೆ
ಧಗೆಯಾರಿದ ಜೀವನವು
ಸಾಕಾಗಿ ಸತಾಯಿಸಿದೆ ಸಾವು
7 7 ಪಿಎಂ 11.12.2016
ಬಣಗುಡುವ ಒಡಲು
****************
ಬಣಗುಡುತಿದೆ ಒಡಲು
ಬುವಿಯಲ್ಲಿ ಬರ ಬಂದಿರಲು
ಹನಿ ನೀರಿಗೂ ಪರದಾಡುವ
ಹೈರಾಣ ಸ್ಥಿತಿ ಇದು
ಮಳೆಯಾಗದೆ ಕೆಂಡದ
ಉಂಡೆಯಾಗಿ ಬೆಂದಿದೆ
ಒಣಗಿದ ಬದುಕನ್ನು ಕಂಡು
ಈ ಪ್ರಕೃತಿ ಮರುಗದಾಗಿದೆ
ತುಂಬಿ ಹರಿಯುತ್ತಿದ್ದವು
ನದಿ ತೊರೆಗಳ ಆಗ ಮೈದುಂಬಿ
ಬರಿ ದಾಗಿ ಬಾಯ್ಬಿರುಕು ಬಿಟ್ಟಿದೆ
ಏಕೊದಗಿತೋ ಈ ದುರ್ಗತಿ
ಪರದಾಡುತ್ತಿವೆ ಖಗಮೃಗ
ಬಾಯಾರಿಕೆಗೆ ದಿಕ್ಕು ತಪ್ಪಿ
ಕೊಳೆಯದೆ ಹಾಗೆ ಒಣಗಿದೆ
ದೇಹ ಧಾರುಣ ಸಾವನಪ್ಪಿ
ಯುದ್ಧಕ್ಕೆ ಮುನ್ನುಡಿ ಬರೆದಿದೆ
ನೀರಿನ ಈ ದಾಹವೆಚ್ಚಿ
ಜೀವಜಲದ ಅಸ್ತಿತ್ವಕ್ಕಾಗಿ
ಜೀವ ಹೋಗುತ್ತಿದೆ ಈ ಬರದಿ
ಯಾವಾಗ ಬರುವುದು
ಆ ಭರವಸೆಯ ಮಳೆ
ಮತ್ತೆ ಹೇಗೆ ಮೈದುಂಬುವುದು
ಹಸಿರಿನ ಈ ಜೀವಕಳೆ
01 23 ಪಿಎಂ 10.12.2016
ನಮ್ಮಿಬ್ಬರ ನಡುವೆ
**************
ಇರಲಿ ಬಿಡು ನೀ ತೊರೆದು
ಹೋದಷ್ಟೇ ನೋವು
ಬಂದರೆ ಭಯವಿಲ್ಲ ನನ್ನ
ಹುಡುಕಿಕೊಂಡು ಆ ಸಾವು
ಆಗಸದ ರವಿ ಚಂದ್ರರಿಗೂ
ತಪ್ಪಿಲ್ಲ ಆ ಕಪ್ಪು ಗ್ರಹಣ
ನಮ್ಮಿಬ್ಬರ ನಡುವೆ ಬಂದ
ವಿರಸವೆ ಅದಕ್ಕೆ ಕಾರಣ
ನಮ್ಮೊಳಗಿನ ಹಮ್ಮಿಗಾಗಿ
ಬರವು ಎರಗಿದೆ ಬಾಳಿಗೆ
ಧರೆಯೊತ್ತಿ ಉರಿದಿರಲು
ನೆಮ್ಮದಿ ಇಲ್ಲವೋ ನಾಳೆಗೆ
ಕಾರ್ಮೋಡ ಕರಗಿ
ಮಳೆಯು ಸುರಿದಂತೆ
ನಮ್ಮಿಬ್ಬರ ಮುನಿಸ ತೆರೆ
ತಾ ದೂರ ಸರಿದಂತೆ
ಬಾಳ ಬಂದಿಲ್ಲಿ ನಾವೇಕೆ
ಈ ಅಂತರವನ್ನು ತಂದುಕೊಂಡೆವು
ಬಿಸಿಲ ಬೇಗೆಗೆ ಮರೀಚಿಕೆಯೇ
ನೀರಿನ ಅಗರವೆಂದುಕೊಂಡೆವು
ಸಾಕಿನ್ನು ಈ ಬೇಸರ
ಬೆಳಗಲಿ ಒಲವನೇಸರ
ನಿನ್ನ ಈ ಅಂತರ
ತಂತು ತುದಿಕಾಲಲಿ ಸೇರುವ ಕಾತರ
350 ಪಿಎಂ 15.11.2016
ನನ್ನನು ಬಿಡಲಿಲ್ಲ
************
ಶ್ರದ್ಧಾಂಜಲಿಗೆ ಅರ್ಹನಾಗಿ
ತಿಲಾಂಜಲಿ ಇತ್ತೆ ಗರ್ವಕ್ಕೆ
ಜನನದಿಂದ ಬಂದ ನಾನೆಂಬ
ಅಹಂಗೆ ಸಾವಾಯ್ತು ಉತ್ತರ
ನನ್ನದೆಂದು ಎಲ್ಲದರಲ್ಲೂ
ಅಧಿಪತ್ಯದ ಮದವೇರಿ ನಡೆದೆ
ಬದುಕಿರುವವರೆಗೂ ನನಗಾಗಿಯೇ
ಎಲ್ಲರ ಬದುಕ ಸುಖ ಕಿತ್ತುಕೊಂಡೆ
ಪ್ರೀತಿಗಿಷ್ಟು ಜಾಗವೀಯದೆ
ಅಧಿಕಾರದ ದರ್ಪದಲ್ಲೇ ಮೆರೆದೆ
ಸೇವಕನ ಅಸಹಾಯಕತೆಯನ್ನೇ
ನನ್ನ ಬಲದ ಪ್ರಭಾವವೆಂದು ಬೀಗಿದೆ
ಹಣ ಅಂತಸ್ತುಗಳಿಂದ
ನನ್ನ ಗುಣವನ್ನು ಮಣ್ಣಾಗಿಸಿದೆ
ಇಲ್ಲದವರ ಹೆಣಗಳ ಮೇಲೆ
ಸಿರಿತನದ ದಬ್ಬಾಳಿಕೆ ನಡೆಸಿದೆ
ಸಾವಿರಂಬುದು ನನ್ನನ್ನು ಬಿಡಲಿಲ್ಲ
ಹೆಣವಾದ ಗಳಿಗೆ ಏನು ಜೊತೆ ಬರಲಿಲ್ಲ
ಮಣ್ಣಾಗುವ ಈ ದೇಹಕ್ಕೆ ಮನದರ್ಪ
ಜೀವ ಹೋದ ಮೇಲೆ ಹಲ್ಲಿಲ್ಲದ ಸರ್ಪ
ಇದ್ದಾಗ ಕಾಡಿಸಿಕೊಂಡವರೇ
ಸತ್ತಾಗ ಹೊತ್ತು ಮುಕ್ತಿಯಿತ್ತರು
ಹಣ ಅಧಿಕಾರವನ್ನೆಲ್ಲ ಮರೆತು
ಸಂಸ್ಕಾರಗೈದು ಮಾನವೀಯತೆ ಮೆರೆದರು
1228 ಪಿಎಂ 1612 2016
ಮುಂಜಾನೆಯ ದೀಪ
***************
ಮಾಗಿ ಚಳಿಯ ಬೀದಿಯಲ್ಲಿ
ಕಾರ್ತಿಕ ಮಾಸದ ದೀಪದಲ್ಲಿ
ಶಿಶಿರ ಋತುವ ಪರ್ವದಲ್ಲಿ
ಹೊಸತನಕ್ಕೆ ತುಡಿವ ವೇಳೆಯಲ್ಲಿ
ಮೂಡಿತು ಮುಂಜಾನೆಯ ಈ ದೀಪ
ಕಳೆದ ಕತ್ತಲೆಯ ಭಿತ್ತಿಯಲ್ಲಿ
ಜಗದ ಸವಿಗನಸ ನಿದಿರೆಯಲಿ
ಪ್ರಕೃತಿ ಚೆಲುವ ಅನಾವರಣದಲ್ಲಿ
ಮೊಳಗೋ ಸುಪ್ರಭಾತದಲ್ಲಿ
ಮಂಜಿನ ತೆರೆ ಸರಿಸಿ ಬಂದ ನೇಸರ
ಬೆಳಕ ಬೀರುವ ಕಾಯಕದಲ್ಲಿ
ಕವಿದ ಕತ್ತಲೆ ಓಡಿಸುವಲ್ಲಿ
ಜಗವ ನಡೆಸೋ ನಾಯಕತ್ವದಲ್ಲಿ
ಯಶಸ್ಸಿನ ಆ ಗತಿಯಲ್ಲಿ
ಕಾಲರೂಢನಾಗಿ ಬಂದ ಆನೆಸರ
6:43 ಪಿಎಂ 17 12 2018
ಸತತ ಸೋಲಿನಿಂದ
++++++---+++++
ಮೋಹ ಬತ್ತಿತು
ಮನಸ್ಸು ಸತ್ತಿತು
ಸತತ ಸೋಲಿನಿಂದ
ಮಾತು ತಪ್ಪಿತು
ಮೌನ ಗೆದ್ದಿತು
ಸೋತ ಭೀತಿಯಿಂದ
ನೀತಿ ಕೈಕಟ್ಟಿ ಬಿಟ್ಟಿತು
ಪ್ರೀತಿ ಕಂಗೆಟ್ಟಿತು
ನಂಬಿಕೆ ಇಲ್ಲದ್ದರಿಂದ
ಭಾವ ಕುಸಿಯಿತು
ನೋವು ಹೆಚ್ಚಿತು
ಸ್ಪೂರ್ತಿಯ ಅಭಾವದಿಂದ
ಜಗವು ನ್ನಕ್ಕಿತು
ಮನವು ಬಿಕ್ಕಿತು
ಈ ಹುಚ್ಚಾಟದಿಂದ
ದಾರಿ ಸವಿಯಿತು
ಗುರಿಯು ಮಾಸಿತು
ಈ ನಿರಾಸೆಯಿಂದ
ಭರವಸೆಯು ಸೋತು
ಬದುಕು ಕೈತಪ್ಪಿತು
ಬರೀ ನಿರೀಕ್ಷೆಯಿಂದ
ಎಲ್ಲ ಹುಸಿ ಆಯ್ತು
ಬೆಲ್ಲ ಕಹಿಯಾಯಿತು
ಗೆಲ್ಲದ ನೆಲವಿನಿಂದ
02 14 ಎಎಂ 18 12 2016
ವಿಶ್ವಮಾನವ
**********
ಕನ್ನಡಕ್ಕಾಗಿ ಎತ್ತಿದ ಕೈ
ಕಲ್ಪವೃಕ್ಷವಾಯಿತು
ಕನ್ನಡ ಡಿಂಡಿಮ ಬಾರಿಸಿ
ಕನ್ನಡಿಗರನ್ನೆಚ್ಚರಿಸಿತು
ಮಲೆನಾಡ ಕಾನನದ
ಸಹ್ಯಾದ್ರಿಯ ಮಡಿಲಲ್ಲಿ
ಅವತರಿಸಿದ ಕನ್ನಡದ ಕಂಪು
ಕನ್ನಡದ ಹೆಮ್ಮರವಾದರು ಈ ಕುವೆಂಪು
ರಾಮಕೃಷ್ಣಾಶ್ರಮದಾಸರೆಯಲ್ಲಿ
ಹುಲಸಾಗಿ ಬೆಳೆದ ಪ್ರತಿಭೆ
ಆಂಗ್ಲ ಸಾಹಿತ್ಯಕ್ಕೆ ಮಾರುಹೋಗಿತ್ತು
ಅಪ್ಪಟ ಕನ್ನಡದ ಪ್ರಭೆ
ದಿಗ್ಗಜರ ಗರಡಿಯಲ್ಲಿ ಪಳಗಿ
ಸಾಹಿತ್ಯ ಲೋಕದ ತಾರೆಯಂತೆ ಮಿರುಗಿ
ರಾಮಾಯಣದ ದರ್ಶನ ಮಾಡಿಸಿ
ಕನ್ನಡಕ್ಕೆ ಜ್ಞಾನಪೀಠದ ಮುಕುಟವಿತ್ತರು
ನಾಡು ನುಡಿಗೆ ದುಡಿದ ಕವಿಗೆ
ರಾಷ್ಟ್ರಕವಿಯ ಅಭಿಮಾನದ ಗೌರವ
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು
ಎಂದು ಸಾರಿದ ವಿಶ್ವಮಾನವ
ಭಾರತ ಜನನಿಯ
ಕನ್ನಡ ತನುಜಾತೆಯ
ಹೆಮ್ಮೆಯ ಈ ಕುವರ
ಕನ್ನಡದ ಕಂಪ ಹರಡಿದ ಧೀರ
0425 ಎಎಂ 20 12 2018
ಮಧುರ ಪೇಯ
************
ಎಲ್ಲಿಯ ನೀರೋ
ಎಲ್ಲಿಯ ಹಸಿರಲಿಯೋ
ಯಾವ ಹಸುವಿನ ಹಾಲೋ
ಯಾವ ನೆಲದ ಸಕ್ಕರೆ ಸವಿಯೋ
ಹದವಾಗಿ ಕೂಡಿದ ಮಿಶ್ರಣ
ಸವಿವ ಮನದ ಮುದಕೆ ಕಾರಣ
ಉರಿವ ಬೆಂಕಿಯ ಸಹಿಸಿ
ಪಾತ್ರೆಯಲ್ಲಿ ಎಲ್ಲ ಸೇರಿಸಿ
ತಮ್ಮ ತಮ್ಮ ಗುಣಗಳ ನೀಡಿ
ಮಧುರ ಪೇಯವಾಯಿತು ನೋಡಿ
ಜಗದೆಲ್ಲ ಮನಗಳೊಂದಾಗಿ
ಬೇರೆತರೆ ಅದೇನು ಸವಿಯೋ
ಬೆಂಕಿ ಉರಿದು ಹೋಗುವುದು
ಪಾತ್ರೆ ಕರಗದೆ ಉಳಿಯುವುದು
ಹಾಲು ನೀರು ಸಕ್ಕರೆ ಬೆರೆತು
ಚಹಾದೆಲೆ ರಸ ಬಿಟ್ಟು ಉಳಿಯಿತು
ತನ್ನೆಲ್ಲ ಗುಣಗಳ ಪಸರಿಸಿ
ಸೊಪ್ಪು ಸಪ್ಪೆಯಾಗಿ ತಿಪ್ಪೆ ಸೇರಿತ್ತು
0214 ಪಿಎಂ 20 12 2018
ನೀನಿರದೆ
*******
ಬೇಸರವೂ ಬರವಾಗಿ ಎರೆಗಿದೆ
ನೀನಿರದೆ ಈ ಬಾಳು ಸೊರಗಿದೆ
ಬೇಸಿಗೆಯ ಈ ಉರಿತಾಪ
ಎದೆಯ ಭಾವಗಳ ಸುಡುತಿದೆ
ಕನಸುಗಳೆಲ್ಲ ಎಲೆಯುದುರಿ
ಕಲ್ಪನೆಯು ಅಲ್ಲಲ್ಲಿ ಚಿಗುರಿ
ಕರೆಯುತ್ತಿದೆ ನಿನ್ನೊಲವ ಮಳೆಯ
ತಣಿದು ಕುಣಿದು ಮೆರೆಯಲು
ಒಂಟಿತನದ ಒಣ ಹುಲ್ಲಿಗೆ
ಬೇಜಾರಿನ ಕಿಡಿಸೋಕಿ
ಬೇಕಾಗಿದೆ ಭಾವವೆಲ್ಲಾ
ಕಿತ್ತು ತಿನ್ನುತ್ತಿವೆ ನೆನಪೆಲ್ಲ
ನಿನ್ನ ನೆರಳಿಲ್ಲದೆ ನರಳಿದೆ
ಜೀವ ಹಸಿದು ನಿತ್ರಾಣಗೊಂಡಿದೆ
ಬಿದ್ದಲ್ಲಿ ಬಿದ್ದು ಬಳಲಿದೆ
ಯಾವ ಹಾಡು ಹಿಡಿಸುತ್ತಿಲ್ಲ
ನವಭಾವ ಯಾವುದು ಮೂಡುತ್ತಿಲ್ಲ
ಹಸಿ ಗೋಡೆಯ ಹುಸಿ ಹೋಗುವ
ಕಸಿವಿಸಿಯಲ್ಲಿ ತೊಳಲಾಡಿದ ಜೀವ
ಕಾದು ಕೆಂಡವಾಗುವ ಮೊದಲು
ಬಂದು ಜ್ಯೋತಿಯಾಗು ಒಲವೇ
3:47 ಪಿಎಂ 2012 2018
ಒಲವಿಗಾಗಿ
*********
ವಿರಹದ ನೋವು ದೂರವಾಯಿತು
ಮರೆವು ಈಗ ವರವಾಯಿತು
ಎದೆಯಲೊಂದು ಹೊಸ ಭಾವ
ಮೂಡಿ ಮರೆಸಿದೆಲ್ಲ ನೋವ
ಹೂವು ಅರಳಿತು ರವಿಗಾಗಿ
ಭಾವ ಮೂಡಿತು ಪ್ರೇಮಿಗಾಗಿ
ಮಳೆ ಸುರಿಯಿತು ಇಳಿಗಾಗಿ
ಮೌನ ಮುರಿಯಿತು ಒಲವಿಗಾಗಿ
ನನಗಿಲ್ಲ ಇನ್ನು ಬರದ ಚಿಂತೆ
ಒಲವ ವರವಿದೆ ನನ್ನ ಜೊತೆ
ಮೂಡುವ ಭಾವಗಳೆಲ್ಲ ಈಗ
ಹಾಡಾಗಿ ನಲಿಯುತ್ತಿವೆ ನನ್ನಲ್ಲಿ
ಏಕಾಂತ ಹಿತವೆನಿಸಿದೆ
ಗೆಳತಿ ನಿನ್ನ ನೆನಪಿಂದ
ಬೇಸರವು ನೀನಿಲ್ಲದೆ ಓಡಿತು
ನೀನಿರುವ ಭಾವದಿಂದ
ನವಚೇತನ ನನ್ನ ಎದೆಯಲಿ
ಹೊಸ ಆಸೆಗಳ ಸೃಷ್ಟಿಸಿದೆ
ಈ ಪ್ರೀತಿಯು ನನ್ನ
ಬದುಕಿಗೀಗ ಪುಷ್ಟಿ ನೀಡಿದೆ
436 ಪಿಎಂ 20 12 2016
ಮಾನವಿಯತೆ ಸತ್ತಿತು
***************
ಎಳೆಯ ಬಾಲೆಯ ಮೇಲೆ
ದುರುಳ ಕಾಮುಕ ನೆರಗಿ
ಅತ್ಯಾಚಾರ ಗೈಯುವಾಗ
ಮಾನವೀಯತೆ ಸತ್ತಿತು
ತನ್ನನ್ನು ನಂಬಿ ಬಂದ
ತನ್ನ ಮನೆ ಮನ ಬೆಳಗುವಳನ್ನು
ವರದಕ್ಷಿಣೆಗಾಗಿ ಹಿಂತಿಸುವಾಗ
ಮಾನವೀಯತೆ ಸತ್ತಿತು
ಮುದ್ದಿನಿಂದ ಸಲಹಿದ
ಮಗ ನಡು ರಾತ್ರಿಯಲಿ
ನಡು ಬೀದಿಗೆ ತಳ್ಳುವಾಗ
ಮಾನವೀಯತೆ ಸತ್ತಿತು
ಹಸಿವಿನಿಂದ ಜನ ತತ್ತರಿಸಿರಲು
ಉಳ್ಳವರು ಪ್ರತಿಷ್ಠೆಗಾಗಿ
ಅನ್ನವನ್ನು ತೊಟ್ಟಿಗಿಸೆವಾಗ
ಮಾನವೀಯತೆ ಸತ್ತಿತು
ತನ್ನ ನಂಬಿದ ಜೀವವನ್ನು
ಬಾಯಿ ಚಪಲಕ್ಕಾಗಿ
ದೇವರ ಹೆಸರಲ್ಲಿ ಬಲಿ ನೀಡುವಾಗ
ಮಾನವೀಯತೆ ಸತ್ತಿತು
ಅಸಹಾಯಕರ ಮೇಲೆ
ಅಟ್ಟಹಾಸ ಮೆರೆದು
ಅವಹೇಳನಗೈಯುವಾಗ
ಮಾನವೀಯತೆ ಸತ್ತಿತು
624 ಎಎಂ 21.12/2016
ಬಲಿಗೈದರು
*********
ಜಾತಿ ಧರ್ಮಗಳ ಹೆಸರಲ್ಲಿ
ಬೇಲಿಯ ಹಾಕಿ ಬಲಿಗೈದರು
ಹುಟ್ಟು ಒಂದೆ ರೀತಿ
ಸಾವು ಒಂದೇ ರೀತಿ
ನಡುವೆ ಬದುಕುತ್ತಿರುವಾಗ ಏಕೆ
ಈ ಮೇಲು ಕೀಳುಗಳ ಗೊಡವೆ
ಹಾರುವನಾದರೇನು ಹೊಲೆಯನಾದರೇನು
ಉಸಿರಾಡುವ ಗಾಳಿ ಒಂದೇ
ತಿನ್ನುವ ಅನ್ನವು ಒಂದೇ
ದೇಹದೊಳಗಿನ ಚಯಾಪಚಯವು ಒಂದೇ
ಹುಟ್ಟಿನ ಓಣಿಯ ಏಣಿಯ
ಹಿಡಿದು ಹತ್ತುವರುಂಟು
ಸಾಧನೆಯ ಶಿಖರವೇರಿ
ಅವರು ಇಲ್ಲಿ ಉಂಟು
ಒಂದೇ ಜಾಗದಿಂದ ಬಂದವರ
ಭಿನ್ನಗೈದವರು ಯಾರು
ಒಂದೇ ಜಾಗಕ್ಕೆ ಹೋಗುವವರ
ಮಣ್ಣು ಜಾತಿ ಕೇಳಿ ಕೊಳೆಸುವುದೇನು
ಶಾಸ್ತ್ರಗಳ ಅಸ್ತ್ರವು ಬಳಸಿ
ಬಾಳ ಸೂತ್ರದ ನಿಯಮ ನಂಬಿ
ಮೇಲು ಕೀಳಿನ ಅಂತರವ ದೂಡಿ
ಸಮಾನತೆಯ ಜ್ಯೋತಿ ಬೆಳಗಲಿ ಇಂದು
439 ಪಿಎಂ 21.12.2016
ಹತಭಾಗ್ಯಳು
*********
ಪೂಜೆಯ ಹೆಸರೇಳಿ
ಈಗ ಪೂಜೆಗರ್ಹವಲ್ಲದವಳು
ಪಲ್ಲಂಗವನು ಅಲ್ಲದೆ ಏರಿ
ಪಲ್ಲಕ್ಕಿಗೆ ಸಲ್ಲದ ಹತಭಾಗ್ಯಳು
ಅರಿಯದ ಹೊತ್ತಲ್ಲಿ ಮುತ್ತು ಕಟ್ಟಿ
ಹರೆಯದ ಮತ್ತಲ್ಲಿ ಮೈಯ ಮುಟ್ಟಿ
ದೇವರ ದಾಸಿ ಎಂದು ನಂಬಿಸಿ
ವೇಶ್ಯೆ ಪಟ್ಟ ಕಟ್ಟಿದ ಕಾಮಾಧಮರು
ಹಸಿದ ಎಲ್ಲರೂ ಉಂಡವರೇ
ನನ್ನ ಬಳಿದ ದೇಹವನ್ನು
ಬಸುರಿಗೆ ಹೊಣೆಯಾಗಿದ
ಢಾಂಬಿಕ ಈ ದುರುಳರು
ಕೀಳು ಜಾತಿಯವರ ಕಾಲಿಗೆ
ಗೆಜ್ಜೆ ಕಟ್ಟಿ ತಣಿದರು
ಸೂಳೆ ಎಂದು ಕರೆದು
ನನ್ನ ನಾಳೆಯ ಕೊಂದರು
ದೇವರ ಹೆಸರಿಲ್ಲಿ ದಂಧೆಯ
ಮಾಡುವ ನೀಚರಿವರು
ಮೈ ನೆರೆದ ಹಸಿ ಮೈ ಎಂದು
ನೋಡದ ವಾಂಚೆಗೆಲ್ಲದವರು
ಹಿಂಡಿ ಹಿಂಡಿ ಬಸಿದರು
ನನ್ನ ಈ ಯೌವ್ವನವನು
ಹಾದಿಬೀದಿಯ ಅನಾಥವಾಗಿಸಿದರು
ಇಡೀ ನನ್ನ ಬಡ ಬದುಕನು
3 1 ಪಿಎಂ 22.12.2016
ಗುಟ್ಟೇನು
*******
ಕೋಟಿಗಳ ಲೂಟಿ ಹೊಡೆದು
ಮಹಾನುಗಳ ಮೇಲ್ಮಹಲುಗಳ
ಕಟ್ಟಿಕೊಂಡವರನ್ನು ಹಾಗೆ ಬಿಟ್ಟು
ಅಸಹಾಯಕ ಅಮಾಯಕರ
ಒಕ್ಕಲಿಬ್ಬಿಸುವ ಗುಟ್ಟೆನು?
ಪ್ರಕೃತಿಯ ಮೇಲೆ ಅತ್ಯಾಚಾರ ಗೈಯುವವರ
ರಕ್ಷಣೆಗೆ ಮಣೆ ಹಾಕಿ
ಪ್ರಕೃತಿಯೊಂದಿಗೆ ಬದುಕುವವರ
ಬಂಧ ಕಡಿದುದರ ಹಿಂದೆ
ನಡೆದಿರುವ ಲಾಬಿಯಾದರೂ ಏನು?
ಕಾನನದಿ ಪ್ರಾಣಿಗೂ ಕೀಳಾಗಿ
ಬದುಕುವ ನಿರ್ಗತಿಕರ ಬದುಕನು
ಬರ್ಬರವಾಗಿ ಹತ್ಯೆಗೆಯುವ
ಅಧಿಕಾರ ಶಾಹಿಯ ಆದ್ಯತೆ
ಕಾನೂನೋ ಇಲ್ಲ ಮಾನವೀಯತೆಯೋ?
ಆಳುಗರ ಅಟ್ಟಹಾಸದ ಮುಂದೆ
ಚಟ್ಟವೇರುತಿದೆ ಇವರ ಪುಟ್ಟ ಬದುಕು
ಸ್ವಾತಂತ್ರ್ಯದ ಸವಿಯುಂಡವರಿಗೇಕೋ
ಕಾಣದು ಇವರ ಅತಂತ್ರದ ಬದುಕು
ಏನಿದು ಈ ಕಾನೂನಿನ ತೊಡಕು?
ಸರ್ಕಾರಗಳ ಈ ಧೋರಣೆ
ಮುಗಿಲು ಮುಟ್ಟಿದೆ ಶೋಷಣೆ
ಅಂತ್ಯವಿಲ್ಲವೇ ಬಡವರ ಕಷ್ಟಕೆ
ಮನುಷ್ಯತ್ವ ಮರೆತ ದಬ್ಬಾಳಿಕೆಗೆ
೩25 ಎಎಂ 22 12 2016
ಸತತ ಸೋಲುಗಳು
""""""""""""""""""""
ಸತತ ಸೋಲುಗಳು
ನನ್ನ ಕಂಗಡಿಸಿವೆ
ಕದಡಿದವು ಎದೆಯ
ಮುದ್ದು ಭಾವಗಳ
ನಿದ್ರೆ ಕೆಡಿಸಿದವು
ಆಳಕ್ಕೆ ಬೀಳುವ ಭಯದಿಂದ
ಸೋತಮೇಲು ಹಾದಿ ತಪ್ಪದೇ
ಅನುಭವವಾಗಿಸಿಕೊಂಡೆ
ಆಕ್ರಂದನದೊಳಗೂ
ಆನಂದ ಕಾಣಲು ಹೊರಟೆ
ಸೋತ ಸಾವಿರ ಮುಖ ದರ್ಶನದಿ
ನನ್ನ ಸೋಲನ್ನೆಲ್ಲ ಮರೆತೆ ಬಿಟ್ಟೆ
ಹೋರಾಟದ ಈ ಬದುಕಿನಲ್ಲಿ
ಅಲೆದಾಟದ ಅಲೆಮಾರಿ ನಾನಿಲ್ಲಿ
ಕಾಲವನು ಕೊಲ್ಲದೆ ಗೆಲ್ಲುವ
ಹಠಕ್ಕೆ ನಾ ಬಿದ್ದೆ
ಎದ್ದು ಬರುವೆನೆಂಬ ವಿಶ್ವಾಸದಿಂದ
ಸೋಲುಗಳೇ ಸವಾಲಾಗಿ
ನಂಬಿಕೆಗಳೇ ಕಾವಲಾಗಿ
ಮುದುಡಿದ ಮನೆಕೆ ಬೆಂಬಲವಾಗಿ
ಬದುಕಿದೆ ಸೋಲಿಗೊಂದು ಪಾಠವಾಗಿ
236 ಎಎಂ 22 12 2016
ಬೆಳವ ಮುನ್ನವೇ
*************
ನೀ ನೆಟ್ಟ ಪ್ರೀತಿ ಸಸಿ
ಮರವಾಗಿ ಬೆಳೆಯುವ ಮುನ್ನವೇ
ಬರವಾಗಿ ಎರೆಗಿತ್ತು
ನೀ ತಂದ ವಿರಹ
ಜಾತಿ ಗೋಡೆಯ ಕೆಡವಿ
ಪ್ರೀತಿ ಸುತ್ತಾ ವ್ಯಾಪಿಸುವ
ಮೊದಲೇ ಬೇಲಿ ಬಿತ್ತು
ಕಿತ್ತೊಗೆಯುವ ಆ ತಾಕತ್ತು
ನೀನಿಲ್ಲದೆ ನನಗೆ ಎಲ್ಲಿದೆ
ಕಂಬನಿಯ ಕೋಡಿ ಹರಿದು
ವೇದನೆಯ ಸಾಗರ ಸೇರಿ
ಆ ನೆನಪು ಮತ್ತೆ ಮತ್ತೆ
ಅಲೆಯಾಗಿ ತೀರ ಸವರಿತ್ತು
ಎದೆಯ ಭಾವದ ಬಿಸಿಗೆ
ಒಲವ ತೇವ ಆರಿತ್ತು
ಕಣ್ಣ ಕೊಳದಲ್ಲೀಗ ಹಂಸೆಯಾಡದೆ
ಮರೆವಿರದ ಹಿಂಸೆ ಕಾಡಿತ್ತು
ಮುರಿದ ರೆಕ್ಕೆಯ ನಂಬಿ
ಹಾರಿದೆ ನಾ ಬಾಳನಭಕೆ
ಉರಿವ ಝಳಕೆ ಕಣ್ಣು
ಮಂಜಾಗಿ ನಂಜೇರಿತು ಜೀವಕೆ
ಪ್ರೀತಿ ಇರದ ಬದುಕೇಕೆ
ನೋವು ಸಹಿಸುವ ಮನಕೆ
ಬದುಕು ಶೂನ್ಯ ಸಾವು ಮಾನ್ಯ
ಅಂತ್ಯ ಹಾಡಿದ ಕವಿತೆಗೆ
533 ಪಿಎಂ 22.12.2016
ಬೆಳಗಾಯಿತು
**********