Monday, December 4, 2023

ಕವನ

ಛಲ ಬೇಕು ಮಾನವನಿಗೆ
ಬದುಕಲು ಅದು ಬಲವಿದ್ದಂತೆ

ಛಲಬೇಕು ನುಡಿದಂತೆ ನಡೆಯಲು
ಛಲಬೇಕು ಪ್ರತಿ ಜೀವಿಗೂ ಪ್ರೀತಿ ಹಂಚಲು
ಛಲಬೇಕು ನಾಡ ಮಾನ ಉಳಿಸಲು
ಛಲಬೇಕು ಜಾತಿ ಸಂಕೋಲೆ ಕಳಚಲು

ಛಲಬೇಕು ಸ್ತ್ರೀ ಕುಲ ರಕ್ಷಿಸಲು 
ಛಲಬೇಕು ನ್ಯಾಯವಾಗಿ ಬಾಳಲು
ಛಲಬೇಕು ಪರಧನ ಬೇಡವೆನ್ನಲು
ಛಲಬೇಕು ಕಾಯಕ ಪೂಜೆಗೈಯಲು

ಛಲಬೇಕು ಹಿರಿಯರೊಳು ಕಿರಿಯನೆನ್ನಲು
ಛಲಬೇಕು ಧರ್ಮದಲಿ ದಯೆ ಕಾಣಲು
ಛಲಬೇಕು ನುಡಿವ ಮಾತಲಿ ಸತ್ಯ ಹೇಳಲು
ಛಲಬೇಕು ಹೊಂದಿಕೊಂಡು ಬಾಳಲು

ಛಲಬೇಕು ಗುರಿ ಸಾಧಿಸಲು
ಛಲಬೇಕು ಮದಗಳ ಬಿಡಲು
ಛಲಬೇಕು ಹೊಗಳಿಕೆಗೆ ಮರುಳಾಗದಿರಲು
ಛಲಬೇಕು ಅನ್ಯಾಯವ ಹೊಡೆದೋಡಿಸಲು

ಛಲಬೇಕು ಬಾಂಧವ್ಯಗಳ ಬೆಸೆಯಲು
ಛಲಬೇಕು ಅಹಿಂಸೆಯ ದಾಸನಾಗಲು
ಛಲಬೇಕು ದುಡಿಮೆಯ ಫಲವುಣ್ಣಲು
ಛಲಬೇಕು ಮೊದಲು ಮಾನವನಾಗಲು

೦೪೦೫೨೦೦೩
*ಅಮುಭಾವಜೀವಿ ಸುಧಾ  ಮುಸ್ಟೂರು*

No comments:

Post a Comment