Wednesday, December 6, 2023

ಲೇಖನ

#ಅಮುಭಾವದೂಟ 

ಬದುಕು ಕಲಿಸುವ ಪಾಠಗಳಿಗೆ  ಅನುಭವದ ಚೌಕಟ್ಟಿದೆ . ಅದು ಕೊಡುವ ಒಂದೊಂದು ಹೊಡೆತಗಳು ಕೂಡ ನಮ್ಮನ್ನು ಜಾಗೃತರನ್ನಾಗಿ ಸುತ್ತದೆ . ಸೋಲುಗಳನ್ನು ಸವಾಲನ್ನಾಗಿಸಿ ಸಂದಿಗ್ಧತೆಯನ್ನು ಎದುರಿಸುವ ಆತ್ಮವಿಶ್ವಾಸ ತುಂಬಿ ನಮ್ಮನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ .ಬದುಕಿನ ಪ್ರತಿ ಪುಟವೂ ಹೊಸದಾಗಿರುತ್ತದೆ ಅದು ನಮಗೆ ಮಾತ್ರ ಸಂಬಂಧಿಸಿದ್ದಾಗಿರುತ್ತದೆ .ಬೇರೆಯವರು ಅನುಭವಿಸಿದ ಕಷ್ಟ ನೋವುಗಳು ನಮಗೆ ಉದಾಹರಣೆಯಾದರೆ ನಮ್ಮ ಕಷ್ಟ ನೋವುಗಳು ಸ್ವತಃ ಅನುಭವ ಜನ್ಯವಾಗಿ ರುತ್ತದೆ .ಯಾರು ಎಷ್ಟೇ ಬುದ್ಧಿವಾದ ಹೇಳಿದರೂ ಅರ್ಥವಾಗದ ವಿಚಾರಗಳು ಬದುಕಿನ ಅಧ್ಯಾಯಗಳಲ್ಲಿ ಹೆಜ್ಜೆ ಹೆಜ್ಜೆಗೂ ಕಲಿಕೆಯನ್ನು ಉಂಟುಮಾಡುತ್ತದೆ .ನಾನೆಂದು ಮೆರೆದವನನ್ನು ಇಲ್ಲಿ ಬಾಗಿಸಿ ಶಿಕ್ಷಿಸಿ ಸರಿದಾರಿಗೆ ತರಲು ಪ್ರಯತ್ನಿಸುತ್ತದೆ .ಅದಕ್ಕೂ ಜಗ್ಗದೇ ಹೋದಾಗ ಸರಿಯಾದ ಏಟು ನೀಡಿ ನಮ್ಮನ್ನು ನೀಟು ಮಾಡುತ್ತದೆ .ಸೋತು ಶರಣಾದವನನ್ನು ಕೈಹಿಡಿದು ಮೇಲೆತ್ತಿ ಜಗದಲ್ಲಿ ಪೂಜ್ಯನೀಯನನ್ನಾಗಿ ಮಾಡುತ್ತದೆ .

       ನನ್ನೊಳಗಿನ ಅಹಂಕಾರವನ್ನು ತ್ಯಜಿಸಿ ನಾವು ಎಂದು ಬದುಕಿದಾಗ ಕ್ಷಣ ಕಾಲ ಬಾಳಲಿ ಬಿಡುತ್ತದೆ ಈ ಬದುಕು .ಆಗಲೇ ಸಾರ್ಥಕತೆ ನಮ್ಮ ಪಾಲಿಗೆ ಆಗುತ್ತದೆ .ಬೀಗುವ ಬದಲು ಬಾಗುವುದನ್ನು ಕಲಿತಾಗ ಬದುಕು ನಮ್ಮಂತೆಯೇ ನಡೆಯುತ್ತದೆ .ಆಗ ಜೀವನ ಸುಂದರ ಸುಖಮಯ ಸಂತೃಪ್ತಿಯಿಂದ ನಮ್ಮನ್ನು ಬಾಳಗೊಡುತ್ತದೆ .ಆದ್ದರಿಂದ ನಾವೆಲ್ಲರೂ ಆ ನಿಟ್ಟಿನಲ್ಲಿ ಬಾಳ ಹಾದಿಯನ್ನು ಸವೆಸೋಣ .

೦೫೫೩ ಎ ಎಂ ೦೬೧೨೨೦೨೧
ಅಮುಭಾವಜೀವಿ ಸುಧಾ ಮುಷ್ಟೂರು

No comments:

Post a Comment