Tuesday, February 1, 2022

ಕವಿತೆ


ನೀನು ನನ್ನವಳೆಂಬ ಭಾವ 
ಪದಗಳಲ್ಲಿ ತುಂಬಲಿ ಹೇಗೆ ಜೀವ 
ಬರೆವ  ಪ್ರತಿ ಸಾಲಲ್ಲಿ ನೀನೇ ಅವಿತೆ
ಅದಕ್ಕೆ ನನ್ನ ಬಾಳಾಯ್ತು ಸುಂದರ ಭಾವಗೀತೆ 
ಹೃದಯ ತುಂಬಿದ ನೆನಪಾದೆ 
ಕೈಗೆಟುಕದ ಕುಸುಮ ನೀನಾದೆ 

ಸನಿಹವೇ ಇದ್ದರೂ ಕೂಡ 
ನಿನ್ನೊಲವಿಗಾಗಿ ನಾ ಅಲೆಯುತ್ತಿರುವೆ 
ನೀ ಬಳಿ ಇದ್ದರೂ ಅರಿಯದಾದೆ 
ನಿನ್ನ ಪ್ರೀತಿಗೆ ನಾ ಶರಣಾಗಿ ಹೋದೆ 
ಕರುವನ್ನಸರಿಸುವ ಹಸುವಿನಂತೆ ಹುಡುಕುತಿರುವೆ 

ಜನ್ಮಾಂತರಗಳ ಬಂಧ ಬೆಸೆದ 
ಅನುಬಂಧವೇ ಇದು ನಮ್ಮದು 
ಒಬ್ಬರನೊಬ್ಬರು ಬಿಟ್ಟಿರಲಾರದ 
ಅದಾವ ಮೈತ್ರಿ ನಮ್ಮ ಬೆಸೆದಿಹುದೋ
ನಿನ್ನ ಸೇರುವ ಹಂಬಲವಿದೇನೋ ನಾ ಕಾಣೆ 

ಏಳೇಳು ಜನ್ಮಕೂ ಜೊತೆಗಾತಿ ನೀನು 
ನಿನ್ನೊಲವಿಗಾಗಿ ನಿತ್ಯ ಕಾಯುವೆನು 
ಹೃದಯದ ಮಾತಿದು ನೀ ಕೇಳು 
ಆತ್ಮದನುಸಂಧಾನ ನಮ್ಮೀ ಬಾಳು 
ಕೂಗಿ ಒಮ್ಮೆ ನೀ ಹೇಳು 
ನಿನ್ನ ಪ್ರೇಮಿ ನಾನೆಂದೂ ಇನ್ನು 

೧೦೪೯ಪಿಎಂ೦೧೦೨೨೦೨೨
*ಅಮುಭಾವಜೀವಿ ಮುಸ್ಟೂರು*

No comments:

Post a Comment