Thursday, February 17, 2022

ಕವಿತೆ

ಬಾಳ ಸಾಗರದ 
ತೀರದಾಸೆಗಳ ಮೇಲೆ 
ನಗುವಿನಲೆಯಲಿ ತೇಲುವ
ನಿನ್ನ ನೆನಪು ಕಾಡಿದೆ 

ಎದೆಯ ನೆಲದ ಮೇಲೆ 
ತಂಗಾಳಿ ತೀಡಿದಾಗ
ಹಾರಾಡುವ ಮುಂಗುರುಳ
ನೆನಪು ಕಾಡಿದೆ 

ಬಳುಕೋ ಬಳ್ಳಿಯ ಚೆಲುವೆ 
ನಿನಗೇಕೆ ಹೇಳು ಬಂಗಾರದೊಡವೆ
ಮುಸ್ಸಂಜೆಯ ಹೊಂಗಿರಣಕೆ
ನಿನ್ನ ನೆನಪು ಕಾಡಿದೆ 

ನಿನ್ನ ಪಾದಸ್ಪರ್ಶಕಾಗಿ
ಓಡೋಡಿ ಬರುವ ತೆರೆಗಳ ಸಾಲಲಿ
ಸೇರಿಹೋದ ಮರಳ ಕಣಕೂ
ಮಧುರ ನಿನ್ನ ನೆನಪು ಕಾಡಿದೆ 

ಹರೆಯದ ಮಧು ನೀನು
ಕರೆಯದೇ ಬರದಿರದು ದುಂಬಿಯೊಂದು
ನಿನ್ನಂದ ಕಂಡು ಮೈಮರೆತಿರಲು
ನಿನ್ನ ನೆನಪು ಕಾಡಿದೆ 

ಸಾಗರ ಗರ್ಭದ 
ಮುತ್ತುಗಳ ರಾಶಿ
ಕಾಯುವೆ ಕಾವಲುಗಾರನಾಗಿ ಅಹರ್ನಿಶಿ
ಆ ದಂತಪಂಕ್ತಿಯ ಹೊಳಪಲ್ಲಿ
ನಿನ್ನ ನೆನಪು ಕಾಡಿದೆ 

ನೀನೊಂದು ಬಾಡದ ಪುಷ್ಪ 
ನಿನ್ನಂದ ನಿತ್ಯ ಬೆಳಗೋ ಬೆಳ್ದಿಂಗಳ ದೀಪ
ನೆನಪುಗಳ ಚಿತ್ತಾರ ಬಿಡಿಸಿದ 
ಒಲವಿನ ಅಧಿದೇವತೆ ನಿನಗೆ ಶರಣು
0245ಪಿಎಂ17022022
*ಅಮುಭಾವಜೀವಿ ಮುಸ್ಟೂರು*

No comments:

Post a Comment