Sunday, January 29, 2023
ಕವನ
Thursday, January 26, 2023
ಕವನ
ಕವನ
Monday, January 23, 2023
ಕವನ
ಸೋತಾಗ ಮೇಲೆತ್ತುವ ಬದಲು
ಆ ಸೋಲನ್ನೇ ಸಂಭ್ರಮಿಸುವವರ
ಹೇಗೆ ನಂಬುವುದು ಹೇಳು
ಬಿದ್ದವನ ಬಂದು ಎತ್ತುವ ಬದಲು
ಆಳಿಗೊಂದು ಕಲ್ಲನೆಸೆಯುವವರ
ಹೇಗೆ ನಂಬುವುದು ಹೇಳು
ನೊಂದ ಜೀವದೆದುರು ಬಂದು
ಇನ್ನಷ್ಟು ನೋವ ನೀಡುವವರ
ಹೇಗೆ ನಂಬುವುದು ಹೇಳು
ಸಾವಿನ ಮನೆಯಲ್ಲೂ
ಹಗೆ ಸಾಧಿಸುವವರ ನಿಜಸ್ವರೂಪ
ಹೇಗೆ ನಂಬುವುದು ಹೇಳು
ಕಣ್ಣೀರು ಒರೆಸುವ ಬದಲು
ಕಣ್ಚುಚ್ಚುವವರ ಮನಸ್ಥಿತಿಯ
ಹೇಗೆ ನಂಬುವುದು ಹೇಳು
ಗಾಯವಾಗಿಹ ಹೃದಯವನು
ಮತ್ತಷ್ಟು ಘಾಸಿಗೊಳಿಸುವವರ
ಹೇಗೆ ನಂಬುವುದು ಹೇಳು
ಪ್ರೀತಿಸಿ ಪ್ರೀತಿಪಡೆಯುವ ಬದಲು
ದ್ವೇಷಿಸುವವರ ಧೋರಣೆಯುಳ್ಳವರ
ಹೇಗೆ ನಂಬುವುದು ಹೇಳು
ತನ್ನ ಪಾಡಿಗೆ ತಾವಿದ್ದರೂ ಕೂಡ
ತೊಡರ್ಗಾಲು ಕೊಟ್ಟು ಬೀಳಿಸಿ ನಗುವವರ
ಹೇಗೆ ನಂಬುವುದು ಹೇಳು
೦೨೩೧ಎಎಂ೨೦೦೧೨೦೨೩
*ಅಮುಭಾವಜೀವಿ ಮುಸ್ಟೂರು*
ಚಂದ ಚಿಲುಮೆ ಚಿಮ್ಮುವಂತೆ
ಲವಲವಿಕೆಯ ಹೆಣ್ಣು ನನ್ನವಳು
ಚಿತ್ತಾರದ ಚಿಟ್ಟೆ ಹಾರುವಂತೆ
ಚೈತನ್ಯದ ನವಕಿರಣ ನನ್ನವಳು
ಪ್ರೀತಿಯ ಅನುಬಂಧ ಬೆಸೆದ
ಸ್ನೇಹದ ಕಡಲಲ್ಲಿ ಅಲೆ ನನ್ನವಳು
ಬದುಕಿನ ಭರವಸೆಗೆ ಪ್ರೇರಣೆ
ಬಯಸದೆ ಸಿಕ್ಕವಳು ಈ ನನ್ನವಳು
ಬಿರಿದ ಮೊಗ್ಗಿನಂತೆ ಲತೆಯಲ್ಲಿ
ಅರಳಿ ನಗುವ ಗುಲಾಬಿ ನನ್ನವಳು
ಗರಿ ಬಿಚ್ಚಿ ಹಾರುವ ಹಕ್ಕಿಯಂತೆ
ಎದೆಯ ಗೂಡು ನೀಡಿದಳು ಈ ನನ್ನವಳು
ಮುಸ್ಸಂಜೆಯ ವೇಳೆ ಕೆಂಪಾದಂತೆ
ನಾಚಿ ನೀರಾಗಿ ನಿಂತ ನನ್ನವಳು
ಇರುಳ ಬಾಂದಳದಲ್ಲಿ ಮಿನುಗುವ
ಆ ಒಂಟಿ ಬೆಳ್ಳಿಚುಕ್ಕಿ ನನ್ನವಳು
ಇಂಥವಳ ಒಡನಾಟದಲ್ಲಿ
ನಡೆವೆ ಜೊತೆ ಜೊತೆಯಲಿ
ಒಲವಿನ ತೇರಿನಲ್ಲಿ ನಿತ್ಯ
ಮೆರವಣಿಗೆ ಹೋಗುವಾಸೆ ಎದೆಯಲಿ
೦೬೨೧ಪಿಎಂ೨೦೦೧೨೦೨೩
ಅಮುಭಾವಜೀವಿ ಮುಸ್ಟೂರು