#ಆಮುಭಾವದೂಟ ೧೭೮
ಅರ್ಥ ಮಾಡಿಕೊಳ್ಳುವ ಶಕ್ತಿಯಿರಬೇಕು
ಇಲ್ಲದಿದ್ದರೆ ಎಲ್ಲಾ ವ್ಯರ್ಥ
ಏನೇ ಹೇಳಿದರೂ ಪ್ರಯೋಜನವಾಗದು
ಅಪಾರ್ಥ ಮಾಡಿಕೊಳ್ಳುವ ಮನಸಿರಲು
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು
ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು
ಕಾಲೆಳೆವರುಂಟು ಅಡಿಗಡಿಗೂ
ಗಡಿಬಿಡಿ ಮಾಡಿಕೊಳ್ಳುವ ಬದಲು
ಗುರಿ ಮುಟ್ಟುವ ಆತ್ಮವಿಶ್ವಾಸವಿರಲಿ ಎಂದಿಗೂ
೧೦೫೮ಪಿಎಂ೧೦೧೨೨೦೨೧
ಅಮುಭಾವಜೀವಿ ಸುಧಾ ಮುಸ್ಟೂರು
ಮೌನವನ್ನೇ ಅಲಂಕರಿಸಿ ಬಿಡಿ
ಕೆಲವು ಸಂದರ್ಭದಲ್ಲಿ
ಮಾತು ಮೌನಗಳ ಸಮ್ಮಿಳಿತ ಭಾವ
ಬದುಕಿನ ಕ್ಷಣಗಳ ಕಟ್ಟಿಕೊಡುವುದು
ನೆಮ್ಮದಿಯ ಹೊಂದಬೇಕೆಂದರೆ
ಮೌನವನ್ನು ತಬ್ಬಿ ಕೋರೋಣ
ಪ್ರತಿ ಕ್ಷಣವೂ ಆ ಖುಷಿಯನ್ನು ಸವಿದು
ಜೀವನದ ಸಾರ್ಥಕತೆ ಪಡೆಯೋಣ
೦೭೩೮೧೨೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*
#ಅಮುಭಾವದೂಟ 185
ಕಣ್ಣಿಂದ ಜಾರಿ ಹಸಿರು
ನೂರು ಕಥೆಯ ಹೇಳಿದೆ
ಅಂತರಂಗದ ಮಾತುಗಳು
ಮೂಕವೇದನೆಯಲಿ ನೊಂದಿವೆ
ಎದೆಗೆ ಚುಚ್ಚಿದ ಬಾಣದಿ ರಕ್ತ ಸುರಿಸಿ
ಬೆಂದ ಭಾವಗಳು ಸೋತು ಕೂತಿವೆ
ಎದ್ದು ನಿಲ್ಲುವ ಸತ್ವವಿಲ್ಲದೆ
ಆಸರೆಯ ಮರೀಚಿಕೆಯ ನಿರೀಕ್ಷೆ
ತಂದೊಡ್ಡಿದೆ ಮತ್ತೊಷ್ಟು ಪರೀಕ್ಷೆ
ಹೀಗೆಯೇ ಜೀವನ
0259ಎಎಂ18122021
*ಅಮುಭಾವಜೀವಿ ಸುಧಾ ಮುಸ್ಟೂರು*
ನೂರು ಕಥೆಗಳನ್ನು ಹೇಳಿದೆ.
#ಕಣ್ಣು
ನೋಡುವ ಕಣ್ಣುಗಳಿಗೆ
ಕಾಮಾಲೆ ಅಂಟಿದೆ
ಆಡುವ ಮಾತುಗಳಿಗೆ
ಸ್ವಾರ್ಥದ ಗ್ರಹಣ ಹಿಡಿದಿದೆ
ಅವರವರ ಮೂಗಿನ ನೇರಕ್ಕೆ
ಅವರದೇ ಚಿಂತನೆ ಆಲೋಚನೆ
ವಾಸ್ತವವಾಗಿ ಗುರಿಯಾದ ಜೀವ
ನೋಯುವುದೆಂಬ ಕಾಳಜಿಯೂ ಇಲ್ಲದ
ಆ ಜನರ ಚುಚ್ಚುನುಡಿಗಳ ಜಾಲ
ಹರಡಿದೆ ಜಗದ ತುಂಬೆಲ್ಲ
0324ಎಎಂ18122021
*ಅಮುಭಾವಜೀವಿ ಸುಧಾ ಮುಸ್ಟೂರು* .
ಈ ನಿನ್ನ ಮೋಹಕ ನೋಟ
ನಿತ್ಯ ಸತ್ಯದ ಸಂಪುಟ
ಮುಗ್ಧತೆಯ ಮುಗುಳ್ನಗೆಗೆ
ಮಾರುಹೋಗಿದೆ ಹೃದಯ
ಒಲವಿನ ಅಧಿದೇವತೆಯು ನೀನು
ಸದಾ ವ್ಯಾಪಿಸುವ ಆರಾಧಕ ನಾನು
ಈ ಚಿತ್ರಣ ಹೊಸಚೇತನ
ತಂತು ಸೋತ ಬಾಳಲಿ
ಇನ್ನು ಸೋಲುವ ಮಾತಿಲ್ಲ
ನೀನಿರಲು ಜೊತೆಯಲಿ
0402ಎಎಂ18122021
ಅಮುಭಾವಜೀವಿ ಸುಧಾ ಮುಸ್ಟೂರು
*ಟಂಕ ಸ್ಪರ್ಧೆಗಾಗಿ 1*
ಕಷ್ಟಗಳೆಲ್ಲ
ಪಾಠಗಳಾದವಿಲ್ಲಿ
ದೈವದ ಪಾತ್ರ
ದಾರಿದ್ರ್ಯವ ನೀಗದೆ
ಬಾಳು ಬೀಳಾಯಿತಲ್ಲ
0855ಪಿಎಂ18122021
*ಟಂಕ 2*
ಜೀವನದಲ್ಲಿ
ನಡೆಯುವುದೆಲ್ಲವೂ
ದೈವ ನಿರ್ಣಯ
ನಮ್ಮದೇನಿದ್ದರಿಲ್ಲಿ
ನಟಿಸುವ ಅಭಿನಯ
0859ಪಿಎಂ18122021
*ಅಮುಭಾವಜೀವಿ ಸುಧಾ ಮುಸ್ಟೂರು*
ಇಂಥವರೂ ಇರ್ತಾರೆ
ತಿಳಿಗೊಳದಂತ ಬಾಂಧವ್ಯದೊಳಗೆ
ಬೇಡದ ಕಲ್ಲೆಸೆದು ಕದಡಿ
ಏನೂ ಆಗಿಯೇ ಇಲ್ಲವೆಂಬಂತೆ
ಹೊರಜಗದಲ್ಲಿ ಮೆರೆಯುತಿಹರು
ಹೊರಗೊಂದು ಒಳಗೊಂದು
ದ್ವಂದ್ವ ವ್ಯಕ್ತಿತ್ವ ಅವರದು
ತನ್ನದೂ ಬೇಕು ಇತರರದೂ ಬೇಕು
ಬೆಣ್ಣೆಯೊಳೊಕ್ಕ ಕೇಶದಂತೆ
ಸಿಕ್ಕೂ ಸಿಗದಂತಿರುವರು
ನಲ್ಲ (ಲ್ಲೆ) ಬಾಹುಬಂಧನವಿದ್ದೂ
ಪ್ರಿಯಕರನ(ಳ) ಆಲಿಂಗನದಾಸೆಯಲಿ
ಸಲಿಗೆಯ ಕರಗತಗೊಳಿಕೊಂಡು
ಬೆರೆತರೂ ಬೆರೆಯದವರಂತೆ ನಟಿಸಿ
ಬೇಳೆ ಬೇಯದಾದಾಗ ಹೀಗಳೆವರು
ಕೋತಿ ಹಣ್ಣನು ತಾ ತಿಂದು
ಮೇಕೆ ಮೂತಿಗೊರೆಸಿದಂತೆ
ಅಮಯಾಕರ ಬದುಕಲ್ಲಿ ಬಂದು
ಬಗ್ಗಡವೆಬ್ಬಿಸಿ ದುಗುಡವಿಲ್ಲದೆ
ಎದ್ದು ಹೋಗಿಯೇ ಬಿಡುವರು
ಅವರಿವರ ಮುಂದೆ ಹಗುರ ಮಾತಾಡಿ
ಅನುಕಂಪ ಗಿಟ್ಟಿಸಿಕೊಂಡ ಬಳಿಕ
ಅವಮಾನಿಸಿ ಅಧೀರಗೊಳಿಸಿ
ಅಂತರಂಗದಲೂ ಅಳುಕಿಲ್ಲದ
ಕೊಳಕು ಜನರಿವರು
0248ಎಎಂ19122021
*ಅಮುಭಾವಜೀವಿ ಸುಧಾ ಮುಸ್ಟೂರು*
ನೀನು ದೀಪ ನಾನು ರೂಪ
ಒಲವ ಹಾದಿಯಲಿ ನಾ ಸಂತೃಪ್ತ
ನೀನು ಬೆಳಕು ನಾನು ಬದುಕು
ಅರ್ಥ ಬಂತು ಬಾಳ ಪ್ರತಿ ಪದಕೂ
ನೀನು ಪ್ರೇಮ ನಾನು ನೇಮ
ಜೀವನ ಒಲವು ಚೆಲುವಿನ ಸಂಗಮ
ನೀನು ಆಸೆ ನಾನು ತಮಾಷೆ
ಪ್ರೀತಿ ಬಾಳಿನುದಯದ ಉಷೆ
ನೀನು ನಾನು ಬೆರೆತ ಜೇನು
ಈ ಅನುರಾಗ ಬಿಟ್ಟು ಬೇಡ ಬೇರೇನೂ
0312ಎಎಂ19122021
*ಅಮುಭಾವಜೀವಿ ಸುಧಾ ಮುಸ್ಟೂರು*
No comments:
Post a Comment