Monday, December 20, 2021

ಲೇಖನ

ಬದುಕಲು ಬಂದ ನಮಗೆ  ಈ ಸಾವು ನೋವುಗಳು ಸಹಜ. ಅದನ್ನು  ಅನುಭವಿಸಲಷ್ಟೇ ನಾವು ಶಕ್ತರು.ನಮ್ಮ ಮನಸಿನ ಸಮಾಧಾನಕ್ಕೆ ಆ ವಿಧಿಯನ್ನು ಅಥವ ದೇವರನ್ನು ಬೈಯ್ಯುವುದು ಅಸಹಾಯಕರಾಗಿ ನಮಗಿಂತ ನೋವು ದುಃಖ ಕೊಡದಿರು ಎಂದು  ಅಂಗಲಾಚುವುದಷ್ಟೇ ನಮ್ಮಿಂದ ಸಾಧ್ಯ  ಆದರೆ ಅದು ತಾನೇನು ಮಾಡಬೇಕೆಂದುಕೊಂಡಿದೆಯೋ ಅದನ್ನು ಮಾಡಿಯೇ ತೀರುತ್ತದೆ.ನಮಗೆ  ಆ ನೋವು ಮಾತ್ರ ಜೀವಮಾನವಿಡೀ ಉಳಿದುಬಿಡುತ್ತದೆ.ಇಲ್ಲಿ ಸಜ್ಜನರು ದುರುಳರು ದುಷ್ಟರು ಅಂತ  ಇಲ್ಲ.  ಅವರವರ ಸಮಯ ಬಂದಾಗ ಎಲ್ಲರೂ ವಿಧಿಯಿಲ್ಲದೇ ವಿಧಿಗೆ ಶರಣಾಗಬೇಕು. ಆದರೆ ಸಜ್ಜನರು ಸ್ವಲ್ಪ ಬೇಗನೇ ಹೊರಟುಬಿಡುತ್ತಾರೆ ಅದಕ್ಕೆ ಸ್ವಲ್ಪ ನೋವು ಜಾಸ್ತಿ. ಅದನ್ನು ತಡೆಯಲು ಪ್ರಯತ್ನಿಸಿ ಗೆಲ್ಲಬೇಕು.  ಅದಕ್ಕಾಗಿ ನಾವು  ಅವರ ನೆನಪುಗಳ ಬುತ್ತಿ ಬಿಚ್ಚಿ ಅವರೊಡನಾಟದ ಸವಿಕ್ಷಣಗಳನ್ನು ಮೆಲುಕು ಹಾಕುತ್ತಾ ನಮ್ಮ ವರ್ತಮಾನದ ಸಹಜೀವಿಗಳೊಂದಿಗೆ ಅವರ ಹಾದಿಯಲ್ಲಿ ಸಾಗುವ ಮೂಲಕ ನೋವು ಮರೆಯಬೇಕು. ನಮ್ಮ ಸಜ್ಜನಿಕೆಯ ಕಾಲ ಬರುವತನಕ ಸಾಗಬೇಕು. ಇಲ್ಲಿ ಯಾರೂ ಶಾಶ್ವತವಲ್ಲ.  ಎಲ್ಲರೂ  ಎಲ್ಲವೂ ಅನಿಶ್ಚಿತವೇ. ಸಾವು ನೋವಿನ್ನು ತಡೆಯುವ ಶಕ್ತಿ ನಮಗಿಲ್ಲ  ಆದರೆ  ಹಚ್ಚಿಕೊಂಡವರ ನಂಟು ಬಿಚ್ಚಿಕೊಂಡು ಹೋದಾಗ ಇನ್ನಿಲ್ಲದಂತೆ ಖಾಲಿತನ ನಮ್ಮನ್ನು  ಆವರಿಸಿಕೊಂಡುಬಿಡುತ್ತದೆ. ಅದರಿಂದ ಹೊರಬರುವ ಪ್ರಯತ್ನ ಮಾಡುವುದು ನಮ್ಮ ಕೈಯಲ್ಲಿ  ಇದೆ.  ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವು ಒಬ್ಬಂಟಿ ಅನಿಸಿದರೂ ಕೂಡ ನಮ್ಮ ಸುತ್ತ ಮುತ್ತ  ಅದೆಷ್ಟೋ ನೊಂದ ಜೀವಗಳ ಬದುಕು ಸಾಗುತ್ತಿರುತ್ತದೆ.ಅದನ್ನು ನೋಡಿ ನಾವೂ ಅವರಲ್ಲೊಬ್ಬರಾಗಿ ದಡ ಸೇರುವ ಪ್ರಯತ್ನ ಮಾಡಬಹುದು ಅಷ್ಟೇ.  ಅದನ್ನು ಬಿಟ್ಟು ನಾವು ಸದಾ ಅದೇ ಚಿಂತೆಯಲ್ಲಿ ಕೃಶವಾಗದೆ   ಎದುರಾಗುವ ಅದೆಷ್ಟೋ ವಿಪ್ಲವಗಳಿಗೆ ಎದೆಗುಂದಿದೆ ಮುನ್ನಡೆಯಬೇಕು.

0540ಎಎಂ30112021
*ಅಪ್ಪಾಜಿ ಸುಧಾ ಮುಸ್ಟೂರು*


ಫೇಸ್ಬುಕ್ಕಲ್ಲಿ ಪರಿಚಯ
ವಾಟ್ಸಪ್ಪಲ್ಲಿ ವಿನಿಮಯ
ಚಾಟಿಂಗಲ್ಲಿ ಸಲಿಗೆ
ಮೀಟಿಂಗಲ್ಲಿ ಸುಲಿಗೆ
ಸಂಸಾರದಲ್ಲಿ ಗೌಪ್ಯತೆ
ಜಾಲತಾಣದಲಿ ಗಾಢತೆ
ಮಾತಿನಲ್ಲಿ  ಅತಿ ವಿನಯತೆ
ನೋಟದಲಿ ಮಾದಕತೆ
ಸಂ(ಸಾ)ಸ್ಕಾರಸ್ಥರಲಿ ಪ್ರೀತಿ
ಸಮಾಜದಲ್ಲಿ  ಆದರ್ಶ ಸತಿ
ಯಾಮಾರಿಸಿ ಹಳ್ಳ ತೋಡುವ
ಕೆಲ ಅಂತರ್ಜಾಲ ಮಾಯಾಂಗನೆರು
ಬಾಳ ನೆಮ್ಮದಿಗೆ ಕೊಳ್ಳಿಯಿಟ್ಟು
ಬಿಸಿ ಕಾಯಿಸಿಕೊಳ್ಳುವರು ಎಚ್ಚರ

0829ಪಿಎಂ30112021
*ಅಪ್ಪಾಜಿ ಸುಧಾ ಮುಸ್ಟೂರು*

No comments:

Post a Comment