ಟಿಪ್ಪಣಿ
ನನ್ನ ದೃಷ್ಟಿಯಲ್ಲಿ
ಬರಹಗಾರನ ೧೦ ಲಕ್ಷಣಗಳು
೧ ತಾನು ಲೇಖಕ, ಲೇಖಕಿ ಎಂಬ ವಿಶೇಷ
" ಭ್ರಮೆ "ಯನ್ನು ಕಿತ್ತು ಬಿಸಾಕಬೇಕು.
೨ down to earth ಅಂತಾರಲ್ಲ, ಅಷ್ಟು ಸಹಜ ಸರಳತೆ ಇರಬೇಕು
೩ ಅರ್ಧ ಕತೆ, ಒಂದು ಸಾಲು ಕವಿತೆ
ಬರೆದು ತನ್ನನು ತಾನು ಘೋಷಿತ ಬರಹಗಾರ ಎಂದು ತೀರ್ಮಾನಿಸಬಾರದು, ಅತ್ಯುತ್ತಮವಾದುದನ್ನು ಓದುತ್ತಿರಬೇಕು.
೪ ಪ್ರಶಸ್ತಿ ಪುರಸ್ಕಾರ, ಇತ್ಯಾದಿ ಮೊದಲು
ದಕ್ಕಿದ ಕೂಡಲೇ ಬರಹ ನಿಲ್ಲಿಸಬಾರದು
೫ ಬರಹ ಉಸಿರಿನ ಹಾಗೆ ನಿರಂತರತೆ ಜೀವಮಿಡಿತದ ಹಾಗೆ ಸಹಜತೆ ಇರಬೇಕು
೬ ನದಿ ಗಾಳಿ ಬೆಳಕಿನ ಹಾಗೆ ಫಲಾಫಲ ನಿರೀಕ್ಷೆ ಇರದೆ ತನ್ನ ಪಾಡಿಗೆ ಬರೆಯಬೇಕು
೭ ತನ್ನಿಂದ ಜಗತ್ತು ಅಲ್ಲ, ತಾನು ಜಗತ್ತಿನ ಅತಿ ಸಣ್ಣ ಕಣ ಎಂಬ ನಿರ್ಮಮ ಭಾವ ಇರಬೇಕು
೮ ಸಣ್ಣ ನಿರ್ಲಿಪ್ತತೆ ಮತ್ತು ತೋರಿಸಿಕೊಳ್ಳದ ಅಂತಃಕರಣ ಒಟ್ಟೊಟ್ಟಿಗೆ ಕಟ್ಟಿಕೊಳ್ಳಬೇಕು
೯ ಲೋಕದ ನಿಂದೆ ಮತ್ತು ಜನಾನುರಾಗ ಎರಡನ್ನೂ ನಿಭಾಯಿಸುವ ಶಕ್ತಿ ಎದೆಗೆ ತಂದುಕೊಡಬೇಕು
೧೦ ಬರಹಗಾರನೇ ಮುಖ್ಯ, ಬರಹ ಮುಖ್ಯ ಅಲ್ಲ ಎಂಬ ಒಣ ಹುಚ್ಚು ಹುಸಿಯನ್ನು ಬಿಡಬೇಕು.
ನಾಡಿಗ್
ದೀಪಾವಳಿ
೫/೧೧/೨೧
No comments:
Post a Comment