Monday, December 20, 2021

ಕವನ

ಕಣ ಕಣದಲ್ಲೂ ಛಲವಿದೆ
ಜಗವನ್ನೇ ಗೆಲ್ಲುವ ಹುರುಪಿದೆ
ಯಾರೆಷ್ಟೇ ತೊಡರಗಾಲು ನೀಡಲಿ
ದಾಪುಗಾಲು ಹಾಕಿ ಗೆದ್ದು ಬರುವೆ
ಅಡೆತಡೆಗಳೇನೇ ಬರಲಿ
ಗುರಿ ಮುಟ್ಟುವ ಹುಮ್ಮಸ್ಸಿದೆ
ಅವಮಾನಗಳನೆಲ್ಲ ಅಭಿಮಾನವಾಗಿಸಿ
ಮತ್ತೆ ಎದ್ದು ಬರುವೆ
ಸೋಲನೆಂದೂ ಸವಾಲಾಗಿಸಿ
ಸೆಡ್ಡುಹೊಡೆವೆ ಸಾಧನೆ ಮಾಡಲು

೦೬೪೯ಪಿಎಂ೧೯೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*


#ಅಮುಭಾವದೂಟ ೧೯೧

*ಗಜಲ್*


ಎದೆಯೊಳಗಿನ ಬಿಸಿ ರಕ್ತವೇ ತಂಪಾಯ್ತು
ನನ್ನೊಳಗಿನ ಒಲವಿನ ತಿಳುವಳಿಕೆಯೇ ತಪ್ಪಾಯ್ತು

ಅವಳು ಬಯಸಿದ ಸಲಿಕಗೆಯ ಕೊಟ್ಟ ತಪ್ಪಿಗೆ
ಜಾಲತಾಣದ ನನಗಿದ್ದ ಭರವಸೆಯೇ ಸತ್ತೋಯ್ತು

ಅವಳ ವಾಂಛೆಗಳ ಈಡೇರಿಸಲಾಗದಾದಾಗ
ಹೆದರಿಕೆ ಬೆದರಿಕೆಗಳಿಂದ ನಗೆಯೆಂಬುದೇ ಕಳೆದೋಯ್ತು

ಅರಸನ ತೊರೆದು ಅಷ್ಥಾವಕ್ರನ ಹಂಬಿಲಿಸುವಂತೆ
ಪತಿಗರಿವಾಗದ ಹಾಗೆಯೇ ಸತಿಸೋತಾಯ್ತು

ಹೀಗೂ ಇರುವರೆಂಬ ದಿಗ್ಭ್ರಮೆಯಲಿ
ಅಮು ಬರಹವೇ ನಿಂತೋಯ್ತು

೧೧೨೯ಪಿಎಂ೧೯೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*

  

No comments:

Post a Comment