*ಅಮುಭಾವದೂಟ ಮಾಲೆ 03*
ನಮ್ಮನ್ನು ತೊರೆದು ಹೋಗುವವರಿಗೆ ನಾವು ಮುಕ್ತ ಅವಕಾಶ ನೀಡಬೇಕು. ಏಕೆಂದರೆ ಅವರಿಗೆ ನಮ್ಮ ಅವಶ್ಯಕತೆ ಇರುವುದಿಲ್ಲ ಎಂಬುದು ಎಷ್ಟು ಸತ್ಯವೋ ನಮಗೂ ಅವನ/ಳ ಅವಶ್ಯಕತೆಯೂ ಇಲ್ಲ ಎಂಬುದನ್ನು ನಾವೂ ಕೂಡ ಸಾಬೀತು ಮಾಡಬೇಕು. ಬೆಳ್ಳಗಿರುವುದೆಲ್ಲಾ ಹಾಲಾಗಿರುವುದಿಲ್ಲ. ಆದರೂ ಆ ಹಾಲಾಹಲವನ್ನೂ ನಾವು ಹಾಲಾಗಿ ಮಾಡಹೊರಟಿದ್ದು ಮಾತ್ರ ಸ್ವಯಂಕೃತ ಅಪರಾಧವಾಗಿರುತ್ತದೆ.ಆದರೆ ಕಾರಣದಿಂದಲೇ ಆ ಪ್ರಾಯಶ್ಚಿತ್ತಕ್ಕಾದರೂ ಬಿಟ್ಟು ಹೋಗುವವರನ್ನು ನಮ್ಮ ಬದುಕಿನಿಂದಾಚೆಗೆ ಕತ್ತುಹಿಡಿದು ದಬ್ಬಿಬಿಡಬೇಕು.
ನಮ್ಮ ವ್ಯಕ್ತಿತ್ವ , ಬದುಕು , ನಮ್ಮ ಮಾತುಕತೆ, ನಮ್ಮ ನಡೆನುಡಿಯ ಬಗ್ಗೆ ಗೌರವಿಸುವ ನಮ್ಮ ಬೆಲೆ ಗೊತ್ತಿರುವ ಯಾರೂ ಕೂಡ ತೊರೆಯಲು ಬರುವುದಿಲ್ಲ.ನಮ್ಮ ಒಡನಾಟದಲ್ಲಿ ಅವರು ತಮ್ಮ ನೋವು ಅಸಹಾಯಕತೆ ಅನ್ಯಾಯಗಳನ್ನು ಮರೆಯುವ ಅಥವಾ ಅವುಗಳಿಗೆ ಉತ್ತರ ಹುಡಿಕೊಳ್ಳುತ್ತಿರುತ್ತಾರೆ.ಅಂತಹವರಿಗೋಸ್ಕರ ನಾವು ಸದಾ ನಮ್ಮನ್ನು ತೆರೆದಿಟ್ಟುಕೊಳ್ಳಬೇಕು.ಇವರು ನಮ್ಮ ಮೇಲೆ ಅದೆಂತಹದ್ದೇ ಆರೋಪ ಬಂದರೂ ಅದನ್ನು ಕ್ಷಣಾರ್ಧದಲ್ಲಿ ನಂಬಿ ನಮ್ಮನ್ನು ಅಗಲಲಾರರು.ಬದಲಾಗಿ ಅದರ ಸತ್ಯಾಸತ್ಯತೆಯ ಪರಾಮರ್ಶೆ ಮಾಡಿ ನಮ್ಮದೇನೂ ತಪ್ಪಿಲ್ಲ ಎಂಬುದನ್ನು ಸಾಬೀತು ಮಾಡಿ ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ನಮ್ಮನ್ನು ಇನ್ನಷ್ಟು ಗಾಢವಾಗಿ ಪ್ರೀತಿಸುತ್ತಾರೆ ಆರಾಧಿಸುತ್ತಾರೆ.
ನಮ್ಮನ್ನು ಬಿಟ್ಟು ಹೋಗುವವರು ಖಂಡಿತವಾಗಿಯೂ ನಮ್ಮ ಬಗ್ಗೆ ಅಪ್ಪಿತಪ್ಪಿಯೂ ಒಂದೊಳ್ಳೆಯ ಮಾತನ್ನು ಆಗುವುದಿಲ್ಲ.ನಮ್ಮಿಂದ ಸಾಧ್ಯವಾದಷ್ಟು ಒಳ್ಳೆಯದನ್ನು ಪಡೆದುಕೊಂಡಿದ್ದಾಗ್ಯೂ ನಮ್ಮ ಮೇಲೆ ನಿಷ್ಠುರವಾದ ಮಾತುಗಳಿಂದ ನಿಂದಿಸಿ ನಮ್ಮ ಬಗ್ಗೆ ಇಲ್ಲಸಲ್ಲದ ಆಪಾದನೆಯನ್ನು ಹೊರಿಸಿ ತಾನು ಮಾತ್ರ ಸಾಚ ಎಂಬಂತೆ ಬಿಂಬಿಸಿಕೊಂಡು ಸಮಾಜ ಸಮುದಾಯ ತಮ್ಮ ಹೊಗಳುಭಟ್ಟಂಗಿಗಳ ಸಮೂಹದಲ್ಲಿ ಹಾಗೂ ಇತ್ತೀಚಿಗಿನ ಸಾಮಾಜಿಕ ಜಾಲತಾಣಗಳಲ್ಲಿ ನೊಂದು ಬೆಂದವರಂತೆ ಮೊಸಳೆ ಕಣ್ಣೀರು ಸುರಿಸಿ ಆ ಎಲ್ಲರೆದೆರು ಅನುಕಂಪ ಗಿಟ್ಟಿಸಿಕೊಂಡು ಬೀಗುತ್ತಾರೆ.ಆದರೆ ವಾಸ್ತವದಲ್ಲಿ ನಮ್ಮ ಬಗ್ಗೆ ಗೊತ್ತಿರುವ ಗೊತ್ತಿಲ್ಲದಿರುವ ಯಾರೂ ಕೂಡ ತಲೆಕೆಡಿಸಿಕೊಳ್ಳದೆ ಅಂತಹವರನ್ನು ಕಡೆಗಣಿಸುತ್ತಾ ನಮ್ಮ ಬಗೆಗಿನ ಆದರಾಭಿಮಾನಗಳನ್ನು ಇಮ್ಮಡಿಗೊಳಿಸಿಕೊಳ್ಳುತ್ತಾರೆ.ಒಂದು ಕುನ್ನಿ ನಮ್ಮನ್ನು ಬಿಟ್ಟು ಹೋದರೇನಂತೆ ನಮ್ಮನ್ನು ಗೌರವಿಸುವ ನಮ್ಮ ಸ್ನೇಹ ಬಯಸುವ ನೂರಾರು ಮಂದಿ ನಮ್ಮನ್ನು ಅನುಸರಿಸುತ್ತಾರೆ ನಮ್ಮ ಕಾರ್ಯಗಳನ್ನು ಬೆಂಬಲಿಸುತ್ತಾರೆ.
ಒಟ್ಟಿನಲ್ಲಿ ನಮ್ಮನ್ನು ಬಿಟ್ಟು ಹೋದವರ ಬಗ್ಗೆ ಚಿಂತಿಸದೆ ನಮ್ಮ ಜೊತೆ ಇರುವವರ ಸಮೂಹದಲ್ಲಿ ಎಂದಿನಂತೆಯೇ ನಾವು ನಾವಾಗಿ ಬದುಕಬೇಕು. ತೊರದವರ ನೀಚ ಬುದ್ಧಿಯ ಬಗ್ಗೆ ಮಾತಾಡದೇ ಮೌನವಾಗಿದ್ದುಬಿಡಬೇಕು. ಆಗ ನಾವು ನಮ್ಮವರು ನೆಮ್ಮದಿಯಿಂದ ಸಂತೋಷದಿಂದ ಬದುಕಬಹುದು. ಆ ನಿಟ್ಟಿನಲ್ಲಿ ನಾವೆಲ್ಲಾ ಸಾಗೋಣ.
1056ಪಿಎಂ09122021
*ಅಪ್ಪಾಜಿ ಸುಧಾ ಮುಸ್ಟೂರು*
No comments:
Post a Comment