Monday, May 16, 2022

ಕವನ

ಮುಸ್ಸಂಜೆಯ ಮೈಮೇಲೆ
ಮುತ್ತಿನ ಹನಿಗಳ ಅಭಿಷೇಕ
ಉರಿಬಿಸಿಲಿಗೆ ದಣಿದ ನೆಲಕೆ
ತಂಪೆರೆಯಿತು ನೀಡಿ ಪುಳಕ

ಮುಂಗಾರಿಗೆ ಮತ್ತೇರಿ
ಮಿಂಚು ಗುಡುಗಿನ ಆರ್ಭಟದಿ
ಕೆರೆಕಟ್ಟೆಗಳ ಮೈದುಂಬಿಸಿ
ಪ್ರಕೃತಿಗೆ ತಂತು ಹೊಸತನ

ಕಾರ್ಮೋಡಗಳೆದೆಯಿಂದ
ಕೋಲ್ಮಿಂಚಿನ ರುದ್ರನರ್ತನ
ಹೊಸ ಮಳೆಯು ಇಳೆ ತಣಿಸಲು
ಹಸಿರಿನಾಳೆಯಲ್ಲಿ ಮೂಡಿತು ಕವನ

ಬಿರುಗಾಳಿ ಸುಳಿಗಾಳಿಗಳ
ರೌದ್ರಾವತಾರ ಭಯಂಕರ
ಮಳೆ ಬಂದು ನಿಂತ ಮರುಕ್ಷಣ
ಕಣ್ಮನಗಳಿಗೆ ನಯನಮನೋಹರ

ವೈಶಾಖದ ಬಿಸಿಲಿನ ಕಾರಣ
ಭೂಮಿಯೊಳಗೆ ಜಲಮರುಪೂರಣ
ಮಳೆಗಾಲವು ಮುಂಬದುಕಿಗೆ ಪ್ರೇರಣ
ನಿಸರ್ಗದ ಉನ್ನತಿಗೆ ಪುಷ್ಟಿ ಕರಣ

0544ಪಿಎಂ16052022
*ಅಮುಭಾವಜೀವಿ ಮುಸ್ಟೂರು* 
    

No comments:

Post a Comment