Friday, May 20, 2022

ಕವಿತೆ

ಅದೇಕೆ ಮಳೆಯೇ ಹೀಗೆ 
ಹುಚ್ಚೆದ್ದು ಸುರಿಯುತಿರುವೆ
ಮುಂಗಾರಿನಾಗಮನವೇ 
ಸೋನೆಮಳೆಯಾಗಿ ಬಂದಿರುವೆ

ವೈಶಾಖದ ಬಿಸಿಲ ತಾಪ
ಒಮ್ಮೆಲೇ ತಂಪಾಗಿ ಹೋಯ್ತು 
ಬರಿದಾದ ಕೆರೆಕಟ್ಟೆಗಳು ತುಂಬಿ
ಮೆರೆಯುತಿವೆ ಮೈದುಂಬಿ

ನಗರಗಳೆಲ್ಲ ನೀರೊಳು ಮುಳುಗಿವೆ
ನದಿಗಳು  ಪ್ರವಾಹವಾಗಿ ಉಕ್ಕಿವೆ
ಗಿರಿಶೃಂಗಗಳೆಲ್ಲ ಹಸಿರೊದ್ದು ಮಲಗಿವೆ
ಹೊಲಗದ್ದೆಗಳೆಲ್ಲ ನಡುಗಡ್ಡೆಗಳಾಗಿವೆ

ಇನ್ನೆಷ್ಟು ದಿನವೋ ಈ ರಗಳೆ 
ಸುರಿವುದ ನಿಲ್ಲಿಸಲಿ ಮಳೆ
ಬದುಕು ಭೀಕರವಾಗುವ ಮೊದಲು
ಬರಲಿ ಒಂದಿಷ್ಟು ಬಿಸಿ ಬಿಸಿಲು

ಇನ್ನು ಮುಂದಿದೆ ಮಳೆಗಾಲ
ಬಿಡುವು ಮಾಡಿಕೊಳ್ಳಬೇಕಲ್ಲ
ಜಲ ದಿಗ್ಬಂಧನ ತೆರವುಗೊಳಿಸು
ಮುಳುಗುವ ಬದುಕ ಉಳಿಸು

0717ಪಿಎಂ20052022
*ಅಮುಭಾವಜೀವಿ ಮುಸ್ಟೂರು* 



No comments:

Post a Comment