ಅಮ್ಮ ನೀನೆಂದರೆ ಆಗಸ ನಮಗೆ
ಅಂತ್ಯವಿಲ್ಲದ ವಲವ ನೀಡುವೆ ಬದುಕಿಗೆ
ಅಂಬರದ ಚಂದಿರನ ತೋರಿಸಿ
ಅಮ್ಮ ಕೈತುತ್ತನಿತ್ತು ಬೆಳೆಸಿದೆ ನಮ್ಮನ್ನು
ಅಮ್ಮ ನೀನೆಂದರೆ ತಂಗಾಳಿಯ ತವರು
ಅನುಗಾಲವು ಸಲಹಿದ ಸೂರು
ಅವಿರತ ಶ್ರಮಿಸಿದೆ ನಮ್ಮ ಸಲಹಲು
ಅಳುವ ಮರೆಸಿ ನಗಿಸಿತ್ತು ನಿನ್ನೀ ಮಡಿಲು
ಅಪ್ಪನ ಪಾಲಿಗೆ ಸಂಗಾತಿ ನೀನಾಗಿ
ಅಕ್ಕರೆ ತೋರಿದೆ ಮಮತಾಮಯಿಯಾಗಿ
ಅತ್ಯಂತ ಮೇರು ಅಮ್ಮ ನಿನ್ನ ವ್ಯಕ್ತಿತ್ವ
ಅಭಿಮಾನದ ಬಾಂಧವ್ಯ ನಿನ್ನೀ ಮಾತೃತ್ವ
ಅದೆಷ್ಟು ಕಷ್ಟಗಳ ಸಹಿಸಿ ಸಲಹಿದೆ
ಅದೆಂಥ ವಾತ್ಸಲ್ಯ ನಮಗೆ ತೋರಿದೆ
ಅದನ್ನು ಅನುಭವಿಸಲು ಜನುಮ ಸಾಲದೆ
ಅಂತರಂಗದ ಆರಾಧ್ಯದೇವತೆ ನೀನಾದೆ
ಅದಾವ ದೇವರು ನಿನ್ನ ಮುಂದೆ ನಿಲ್ಲಲಾರ
ಅದೆಷ್ಟೋ ಸಂಪತ್ತು ನಿನ್ನೊಲವ ಮುಂದೆ ನಶ್ವರ
ಅಮ್ಮ ನೀನಿರಲು ಬಾಳು ಸುಂದರ
ಅಪ್ಪಿದರೆ ನೀನೊಮ್ಮೆ ನಮ್ಮ ಕಷ್ಟಗಳೆಲ್ಲ ದೂರ
ಅಮ್ಮ ನೀ ಸದಾ ನಮ್ಮ ಜೊತೆಗಿರು
ಅನಾಥರು ನಾವಲ್ಲ ನೀನಿರಲು
ಅದಮ್ಯ ಜೀವನೋತ್ಸಾಹ ನೀ ತುಂಬಿದೆ
ಅನುಕ್ಷಣವು ನಮ್ಮ ನೀ ಸಲಹುವ ದೇವರು
1039ಪಿಎಂ2805022
*ಅಮುಭಾವಜೀವಿ ಮುಸ್ಟೂರು*
No comments:
Post a Comment