Saturday, May 28, 2022

ಕವನ

ಬದುಕಿನ ಪುಟ ತೆರೆದು
ಪ್ರೀತಿಯ ಕವಿತೆ ಬರೆದು
ಕರುಣೆಯ ಲಾಲಿ ಹಾಡಿದವಳು ನೀನಮ್ಮ
ಎಲ್ಲ ನೋವನ್ನು ತಾನೇ ನುಂಗಿ
ಬರೀ ನಗುವನ್ನೇ ನೀಡಿ ನಮಗಾಗಿ
ಬದುಕಿದರೆ ತ್ಯಾಗಮಯಿ ನೀನಮ್ಮ

ಕಷ್ಟಗಳ ದಟ್ಟ ಕಾನನದೊಳಗೆ
ಸುಖದ ನೆರಳಾದೆ ನೀ ನಮಗೆ
ತ್ಯಾಗಕ್ಕೆ ಸಾಟಿ ಏನಿಲ್ಲವಮ್ಮ
ಮಮತೆಯ ಮಹಾನ್ ಪರ್ವತ
ಅಮ್ಮ ನೀನಿತ್ತ ಒಲವು ಶಾಶ್ವತ
ನಿನ್ನ ಋಣ ತೀರಿಸಲು ಸಾಧ್ಯವಿಲ್ಲಮ್ಮ

ಅಪ್ಪನ ಜೊತೆ ಹೆಗಲಾಗಿ ದುಡಿದೆ
ಸಂಸಾರದೇಳಿಗೆಗೆ ನೀ ಶ್ರಮಿಸಿದೆ
ಸಂಬಳ ಬೇಡದ ಕಾಯಕ ನಿನ್ನದು
ಹಗಲಿಗೆ ಸೂರ್ಯನಂತೆ
ಇರುಳಿಗೆ ಚಂದ್ರನಂತೆ
ಬಾಳಿಗೆ ಕತ್ತಲಿರದಂತೆ ನೀ ಬೆಳಗಿದೆ

ಇನ್ನು ಸಾಕು ನಿನ್ನ ನೋವಿಗೆ 
ಅಂತ್ಯ ಹಾಡುವೆವು ನಗು ತರಿಸಿ
ಸದಾ ನಗುತಿರಬೇಕು ನೀನಮ್ಮ
ಮರೆತು ಬಿಡು  ಎಲ್ಲಾ ನೋವು 
ನೀನಿತ್ತ ಜೀವದಾನದ  ಋಣ ತೀರಿಸುವೆವು
ನಮ್ಮೆದುರಿಗಿರುವ ದೈವ ನೀನಮ್ಮ

2ಅಮುಭಾವಜೀವಿ ಮುಸ್ಟೂರು 

No comments:

Post a Comment