Thursday, May 19, 2022

ಕವಿತೆ

ಯಾರಿವಳು ಯಾರಿವಳು
ನೋಡಿದೊಡನೆ ಮೈಮರೆಸುವವಳು
ಮುಂಗಾರಿನ ಮಿಂಚಂತೆ ಅವಳು

ನಗುವಿನಲ್ಲಿ ಸುಮವಾಗಿ ಅರಳುವವಳು
ಅಂದದಲಿ ಕಾರ್ಮುಗಿಲ ಮುಂಗುರುಳವಳು
ವಯ್ಯಾರದಲಿ ಹಂಸ ನಡಿಗೆಯವಳು 

ಅವಳೊಮ್ಮೆ ಬಳಿ ಸುಳಿದುಹೋದರೆ
ಬಿರು ಬೇಸಿಗೆಯಲ್ಲಿ ಸೋನೆ ಸುರಿದಂತೆ
ಹೊಂಗೆ ನೆರಳಿನ ತಂಪು ಅವಳೊಮ್ಮೆ ಸಿಕ್ಕರೆ

ಮಾತಲ್ಲಿ ಅವಳು ಕೋಗಿಲೆಯ ದನಿಯವಳು
ಮೌನದಲ್ಲಿ ಮಿನುಗುವ ಇಬ್ಬನಿಯು ಅವಳು
ಮೈಮರೆಸುವ ಮೋಹದ ಪತಂಗದಂತವಳು

 ಸೀರೆಯನುಟ್ಟರವಳು ಪ್ರಕೃತಿಮಾತೆ
ಲಂಗದಾವಣಿಯಲವಳು ನಲಿವ ಲತೆ
ಕಲ್ಪನೆಯ ಗುಂಗಲ್ಲವಳು ಮೂಡಿದ ಕವಿತೆ

ಅವಳೊಲವು ಸಾಗರದಲೆಗಳ ರೀತಿ
ಅವಳ ಚೆಲುವು ಆಕರ್ಷಣೆಯ ಶಕ್ತಿ
ಅವಳೆಂದರದುವೇ ಭಾರತೀಯ ಸಂಸ್ಕೃತಿ

ಬೇಕಿಲ್ಲ ಈ ಚೆಲುವೆಗೊಡವೆ
ಕೋಟಿಯೊಳಗೊಬ್ಬಳಿ ಚೆಲುವೆ
ಅವಳಿಗಾಗಿಯೇ ನಾ ನಿತ್ಯ ಬರುವೆ

ನಾಳೆಗಳಿರುವವು ಅವಳಿರುವ ತನಕ
ಬಾಳಿಗವಳೆ ಹೆಮ್ಮೆಯ ಪ್ರತೀಕ
ಅವಳು ಮತ್ತೆ ಮತ್ತೆ ಸೆಳೆವ ಚುಂಬಕ

0653ಪಿಎಂ19052022
*ಅಮುಭಾವಜೀವಿ ಮುಸ್ಟೂರು* 

No comments:

Post a Comment