Thursday, May 19, 2022

ಕವಿತೆ

ಅಭಿನಂದನೆ ನಿನಗೆ
ಶುಭಕೋರುವೆ ಆ ಸಾಧನೆಗೆ

ನೀ ನಡೆದು ಬಂದ ಹಾದಿ
ಅದು ಕಲ್ಲುಮುಳ್ಳಿನ ಬೇಗುದಿ
ಕಷ್ಟವನ್ನು ಇಷ್ಟಪಟ್ಟು ಎದುರಿಸಿದೆ
ಈಗ ವಿಜಯಮಾಲೆ ನಿನಗೆ ದಕ್ಕಿದೆ

ಅವಮಾನಿಸಿದವರ ಎದುರಲ್ಲೇ
ಅಭಿಮಾನದ ಪದಕ ಧರಿಸಿದೆ
ಸ್ವಾಭಿಮಾನದ ಈ ನಿನ್ನ ಪಯಣ
ಗುರಿ ಸಾಧನೆಗೆ ಅದುವೆ ಮಹಾ ಪ್ರೇರಣ

ತುಳಿದವರ ತಲೆ ಮೇಲೆ ಮೆರೆಯಬೇಕು
ತುಳಿತಕ್ಕೊಳಗಾದವರಿಗೆ ಸ್ಫೂರ್ತಿಯಾಗಬೇಕು
ಸಹನೆಯ ಕಿಚ್ಚು ಸಾಧನೆಯ ಜ್ಯೋತಿ ಯಾಗಬೇಕು
ತುಳಿದವರು ಕೂಡ ಸದಾ ನಿನ್ನ ಮೆಚ್ಚಬೇಕು

ಇನ್ನು ನಿನ್ನ ನೋವಿಗೆಲ್ಲ ಕೊನೆ
ಎಲ್ಲ ಮರೆಸಿಹುದು ಈ ಸಾಧನೆ
ಅಂತ್ಯವಾಯಿತು ಅವನ ಶೋಧನೆ
ನಿನ್ನನಿನ್ನು ತಾಕದು ಅವಹೇಳನೆ

ಕನಸು ಇನ್ನು ಕೈಗೂಡಿದೆ
ಯಶಸ್ಸು ನಿನಗೊಲಿದಿದೆ
ಹೆಮ್ಮರವಾಗಿ ಬೆಳೆಯಬೇಕು ನೀನಿನ್ನು 
ಆಗ ಮರೆಯದಿದ್ದರೆ ಸಾಕು ನನಗಿನ್ನು

0548ಪಿಎಂ19052022
*ಅಮುಭಾವಜೀವಿ ಮುಸ್ಟೂರು* 

    

No comments:

Post a Comment