ಅನುಬಂಧ ಕಳಚುತ್ತಿದೆ
ಸೋದರತೆಯು ಸೊರಗುತ್ತಿದೆ
ನಾನೆಂಬ ಅಹಂಕಾರದಿಂದ
ನಡೆವ ಹಾದಿಗೆ ಅಡ್ಡಲಾಗಿ
ಹೆಜ್ಜೆ-ಹೆಜ್ಜೆಗೂ ತೊಡರಾಗಿ
ಬೆಳೆಯಲು ಬಿಡದೆ ದಾಯಾದಿ
ಸ್ವಾರ್ಥಿಯಾದರು ಎಲ್ಲಾ ಜೀವನದಿ
ತಾನು ಮಾತ್ರ ಉಳಿದು
ಇತರರನ್ನು ಅಲ್ಲೇ ತುಳಿದು
ಜಗದೆದುರು ಮುಖವಾಡ ತೊಟ್ಟ
ಗೋಮುಖ ವ್ಯಾಘ್ರಗಳುಂಟು ಇಲ್ಲಿ
ತನಗೆ ಬೇಕಾದಂತೆ ತಿರುಚಿ
ಎಲ್ಲವನ್ನು ಕಿತ್ತುಕೊಳ್ಳುವ
ಹೊಟ್ಟೆಕಿಚ್ಚಿನ ಅಸೂಯೆ ವಾದಿ
ಕಿತ್ತುಕೊಂಡ ಅಮಾಯಕರ ನೆಮ್ಮದಿ
ಲೋಕದೆದುರು ಬಲು ಸಂಪನ್ನ
ಅಂತವರಿಗೆ ಉಂಟು ಬಹುಮಾನ
ಒಳ ಮನಸ್ಸಿನ ಆಳ ಅರಿಯದ ಜನ
ತಿಳಿ ಮನಸ್ಸಿಗೆ ಚುಚ್ಚಿ ತಂದರು ನೋವನ್ನ
ಇಂಥವರ ಸಂತೆಯಲ್ಲಿ ನಿಂತು ಬೆಳೆಯಲಾದೀತೆ?
ಇಂಥವರ ಎದೆಯಲ್ಲಿ ನ್ಯಾಯ ಉಳಿದೀತೆ?
ಸ್ವಾರ್ಥದ ದಬ್ಬಾಳಿಕೆಯಲ್ಲಿ ಪ್ರೀತಿ ನಲುಗಿತೇ?
ಉತ್ತರವಿಲ್ಲದ ಪ್ರಶ್ನೆಗೆ ಅರ್ಥ ಸಿಕ್ಕೀತೇ?
459ಎಎಂ31052022
*ಅಮುಭಾವಜೀವಿ ಮುಸ್ಟೂರು*
No comments:
Post a Comment