Saturday, November 4, 2017
*ಬಸವಳಿದ ಬದುಕಿನಲಿ*
ಮತ್ತೆ ಮತ್ತೆ ಬಿದ್ದ ಹೊಡೆತಕೆ
ಬದುಕಲಿ ಗೆದ್ದೇ ಗೆಲ್ಲುವ ಹಟ ಸೋತ ಮನದೊಳಗಿನ ಸತ್ತ ಬಯಕೆಗಳಿಗೆ
ಭರವಸೆ ತಂತು ಜೀವನಪಾಠ
ಪ್ರೀತಿಯ ಪರೀಕ್ಷೆಯಲಿ
ಇಟ್ಟ ನಿರೀಕ್ಷೆ ಸುಳ್ಳಾಗಿ
ನಂಬಿಕೆಯೇ ನರಳಿರುವಾಗ
ಭರವಸೆಯು ತಂತು ಜೀವನಸ್ಪೂರ್ತಿ
ನನ್ನವರೆಂಬುರೆಲ್ಲ ಕೈಬಿಟ್ಟು ಹೋದಾಗ
ಯಾರಿಲ್ಲ ಎಂದು ಕೊರಗುವ ಮನಕೆ
ಬದುಕಿನ ಯಾನ ಬೇಸರವಾಗದಂತೆ
ಭರವಸೆಯನಿತ್ತಿತು ಜೀವನಗಾನ
ನೋವುಗಳಿಗೆ ಬಲಿಯಾದ ಮನಕೆ
ನಲಿವಿನ ನೆರಳಾಗಿ ಮಿಡಿದ
ಹೃದಯ ವೈಶಾಲ್ಯತೆಯ
ಭರವಸೆಯೇ ಜೀವನ ಸಂದೇಶ
ಬಸವಳಿದ ಬದುಕಿನಲಿ
ಹೊಸತನವ ತುಂಬುವ
ಹಸನಾಗದ ಅನುಭಾವವೇ
ಭರವಸೆಯ ಜೀವನ ಮೌಲ್ಯ
ಕಳೆದು ಕೊಳ್ಳದ ವಿಶ್ವಾಸವೇ
ಭರವಸೆಯ ಮೊದಲ ಗೆಲುವು
ಬದುಕಲ್ಲಿ ಹೋರಾಡಿದ ಮೇಲೆಯೇ
ಸುಖದ ಸುಮವರಳುವ ಚೆಲುವು
0305ಪಿಎಂ23102017
*ಅಮುಭಾವಜೀವಿ*
Subscribe to:
Post Comments (Atom)
No comments:
Post a Comment