*ವಿಶ್ವಪರಂಪರೆಯ ಸಾಕ್ಷಿಗಳು*
ಒಂದೊಂದು ಕಲ್ಲು ಹೇಳುತಿದೆ
ಹಾಳಾದ ಹಂಪೆಯ ಕಥೆಯ
ಸಂಪದ್ಭರಿತ ನಾಡು ಸಂಪೂರ್ಣ
ಭಗ್ನಗೊಂಡ ಆ ವ್ಯಥೆಯ
ಒಂದೊಂದು ಅವಶೇಷವೂ
ಕಣ್ಣಿಗೆ ಕಟ್ಟುವಂತೆ ನೋವ ಹೇಳುತಿದೆ
ಮಾರಕ ದಾಳಿಗೆ ಸಿಕ್ಕು ನಲುಗಿದ
ಆ ದಾರುಣವ ಇತಿಹಾಸವು ಮರೆಯುವುದೆ
ಶಿಲೆಯು ಕಲೆಯಾಗಿ ಅರಳಿ
ಕಲ್ಲಲ್ಲೂ ಸಂಗೀತ ಮೈತಾಳಿ
ಕಾವ್ಯ ಕನ್ನಿಕೆ ನಾಟ್ಯವಾಡಿದ
ಸಾಮ್ರಾಜ್ಯದ ಅಂತ್ಯವನ್ನು ನೆನಪಿಸಿದೆ
ಶಿಲೆಯೊಂದು ಆಕೃತಿಯಾಗಿ
ಸಾಂಸ್ಕೃತಿಕ ವೈಭವದಿ ಮೆರೆದು
ಧರ್ಮಾಂಧರ ದಬ್ಬಾಳಿಕೆಗೆ
ಮೂಕಸಾಕ್ಷಿಯಾಗಿದೆ ಈ ಕೊಂಪೆ
ಭಗ್ನಾವಶೇಷಗಳು ಇಂದಿಗೂ
ಸೌಂದರ್ಯದ ಪ್ರತಿಮೆಗಳು
ನೋವಲ್ಲೂ ನಾಡಸಂಸ್ಕೃತಿಯ
ಸಾರುತಿರುವ ವಿಶ್ವಪರಂಪರೆಯ ಸಾಕ್ಷಿಗಳು
0136ಪಿಎಂ21102017
*ಅಮುಭಾವಜೀವಿ*
No comments:
Post a Comment