Saturday, November 4, 2017
ಕವಿತೆ
*ಕೊಡಲಿ ಬೀಸಿಕೊಂಡವರು*
ಅಪ್ಪ ಹಾಕಿದ ಆಲದ ಮರದಲ್ಲಿ
ನೇತಾಡುವವರಲ್ಲ ನಾವು
ನಮ್ಮ ನಮ್ಮ ಬುಡಕೇ ಕೊಡಲಿ
ಬೀಸಿಕೊಂಡ ಕುಲಜರು ನಾವು
ಬೇರು ಎಷ್ಟೇ ಭದ್ರವಾಗಿದ್ದರೂ
ರೆಂಬೆಕೊಂಬೆಗಳು ಎಷ್ಟೇ ವಿಶಾಲವಾದರೂ
ರುಚಿಯಾದ ಹಣ್ಣುಗಳ ಹೊತ್ತರು
ನಮ್ಮದೇ ಕುಲದ ಕೊಡಲಿಗೆ ಬಲಿಯಾದವರು
ಮಧುರ ಭಾವಕೆ ಬರ ಬಂದೆರಗಿ
ಹೃದಯ ವೈಶಾಲ್ಯ ಮರೆಯಾಗಿ
ನಮ್ಮ ನಮ್ಮೊಳಗೆ ತಿಕ್ಕಾಡಿ
ದ್ವೇಷದ ಕಾಡ್ಗಿಚ್ಗಿನಲಿ ಸುಟ್ಟು ಕರುಕಲಾದವರು
ಹಿಂದೆ ಎಷ್ಟೊಂದು ಚಂದವಿತ್ತು
ಹಕ್ಕಿ ಕೂತು ಹಾಡುತ್ತಿತ್ತು
ದಣಿದ ಜೀವ ನೆರಳಲಿ ವಿರಮಿಸಿತ್ತು
ನಮ್ಮ ಸಂಕುಚಿತತೆಯಿಂದ ಎಲ್ಲ ಮರೆಯಾಯ್ತು
ಎಸೆಯಿರಿ ಆ ಕೊಡಲಿಯನು
ಬೆಸೆಯಿರಿ ಪ್ರೀತಿ ಸ್ನೇಹಗಳನು
ಮತ್ತೆ ಮರುಕಳಿಸಲಿ ಆ ಸಂಭ್ರಮ
ನಮ್ಮೊಳಗೆ ಅರಳಲಿ ಮತ್ತೆ ಸಹಜ ಪ್ರೇಮ
0454ಪಿಎಂ21102017
*ಅಮುಭಾವಜೀವಿ*
ಕವಿಗಳ ಶೋಧನೆ ಧ್ವನಿಸುರಳಿಗೆ ತಂಡದ ಸ್ಪರ್ಧೆ
Subscribe to:
Post Comments (Atom)
No comments:
Post a Comment