*ಗಜಲ್*
ಬದುಕು ಬರಿದಾಗಿದೆ ಬಣ್ಣಗಾದೆ
ಕನಸು ಕಪ್ಪಾಗಿ ತೆಪ್ಪಗಿವೆ ಬಣ್ಣಗಾಣದೆ
ಭಾವಗಳು ಶಿಲೆಯ ಭಿತ್ತಿಗಳಾಗಿವೆ
ಭಾವನೆಗಳು ಭಗ್ನಗೊಂಡಿವೆ ಬಣ್ಣಗಾಣದೆ
ಸೂರ್ಯನ ಬಿಳಿ ಬೆಳಕಿಗೆ ಹೊಳೆದಿವೆ
ಆಂತರ್ಯದೊಳಗೆ ಅಸುನೀಗಿವೆ ಬಣ್ಣಗಾಣದೆ
ಸಾಕಿ ನಿನ್ನ ಮೇಲಿಟ್ಟಿದ್ದ ನಂಬಿಕೆಗೆ
ಪ್ರೀತಿ ಲೇಪವಿಲ್ಲದೆ ಕರಗಿವೆ ಬಣ್ಣಗಾಣದೆ
ಬೆಳದಿಂಗಳು ಕೂಡ ಕತ್ತಲೆಗೆ ಹೆದರಿದೆ
ನಿನ್ನ ನಗುವಿನ ಬಣ್ಣಗಾಣದೆ
ಅಮುವಿನಂತರಂಗ ಭಣಗುಡುತಿದೆ
ಬರಡು ಹೃದಯ ಬಣ್ಣಗಾಣದೆ
0243ಪಿಎಂ21102014
*ಅಮುಭಾವಜೀವಿ*
No comments:
Post a Comment