Saturday, November 4, 2017

ಗಝಲ್

*ಗಜಲ್ ೧* ಎಲ್ಲ ಮನೆಯೊಳಗೂ ದೀಪ ಬೆಳಗುತಿದೆ ನನ್ನದೆಯೊಳಗೆ ಮಾತ್ರ ಕತ್ತಲೆ ತುಂಬಿದೆ ಅನಾಥ ಬದುಕಿನೊಳಗೆ ನಿತ್ಯ ವೇದನೆ ನನ್ನವರಾರಿಲ್ಲ ಆ ದೇವರನೇ ನಾ ನಂಬಿದೆ ಊರೆಲ್ಲಾ ಹಬ್ಬದ ಖುಷಿಯಲ್ಲಿ ಮಿಂದಿರುವಾಗ ಈ ಬಡಪಾಯಿಗೆ ಬಂಧುಗಳಾರಿಲ್ಲವೆಂದು ನೊಂದಿದೆ ಅವರ ಮನೆಯಂಗಳದಿ ರಂಗೋಲಿ ನಗುತಿರಲು ಬಿಕಾರಿಯ ಮನದಂಗಳ ಬಿಕೋ ಎನ್ನುತಿದೆ ಕತ್ತಲೆಯ ಕೂಪದಲಿ ಬೆತ್ತಲಾದ ಬದುಕು ಬರಿಗೈ ಬೊಗಸೆಗೆ ನಿರಾಸೆಯನೇ ಸುರಿದಿದೆ *ಅಮು*ವಿನಂತರಂಗದ ಈ ವೇದನೆಗೆ ಉಪಶಮನವಾಗಿ ಬೆಳಕೇ ನೀ ಬರಬಾರದೆ 1219ಪಿಎಂ18102017 *ಅಮುಭಾವಜೀವಿ*

No comments:

Post a Comment