Friday, October 13, 2017

ಕವಿತೆ

*೧•ಲಯ ಸಿಕ್ಕಿದೆ* ಭಾವ ಬಾನಲಿ ಮಿಂಚಿ ಮರೆಯಾಗಿವೆ ಸಾವಿರ ತುಡಿತ ಮಿಡಿತಗಳ ಸಂಗೀತ ಎದೆಯ ಭಿತ್ತಿಯಲಿ ಮತ್ತೆ ಮತ್ತೆ ಗುನುಗಿದೆ ಭಾವರೂಪದ ಕವಿತಾ || ಮಂಜಿನಂತೆ ಕರುಗುತಲಿವೆ ಸುಮದಂತೆ ಅರಳುತಲಿವೆ ಎದೆಯ ಬಡಿತಕೆ ತುಡಿತವೂ ಸೇರಿ ಬದುಕಿಗೊಂದು ಲಯ ಸಿಕ್ಕಿದೆ || ಪ್ರೀತಿಯ ಗಾರುಡಿಗನಿಂದ ಬದುಕಿಗೆ ಎಷ್ಟೊಂದು ಅಂದಚೆಂದ ನೋವೇ ಇಲ್ಲದ ಬದುಕಿಗಾಗಿ ನಮ್ಮನೆಲ್ಲ ಬೆಸೆದಿದೆ ಆ ಅನುಬಂಧ ಬರೀ ಕನಸುಗಳ ಕಲ್ಪನೆಯಲ್ಲಿ ನನಸಾಗಿಸುವ ಹೊಮ್ಮಿಡಿತ ಬದುಕಿನ ಹೋರಾಟಕ್ಕಿಲ್ಲಿ ಗೆದ್ದೇ ಗೆಲ್ಲುವ ತುಡಿತ || ೦೮೧೪ಎಎಂ೧೨೧೦೨೦೧೭ *ಅಮುಭಾವಜೀವಿ* *ಗೀತೆ-೨* *ಕವಿ- ಅಮುಭಾವಜೀವಿ* *ಶೀರ್ಷಿಕೆ- ಲಯಸಿಕ್ಕಿದೆ* *ಭಾವಾರ್ಥ-ನಾನಾರ್ಥ-ನನ್ನಾರ್ಥ(ವಿಮರ್ಶೆ)*--ಒಂದು ಭಾವಗೀತೆಯಲ್ಲಿ ಭಾವಕ್ಕೆ ಎಷ್ಟು ಪ್ರಾಧಾನ್ಯತೆ ಇದೆಯೋ ಲಯಕ್ಕು ಕೂಡ ಅಷ್ಟೇ ಪ್ರಾಧಾನ್ಯತೆ ಇದೆ. ಹಾಗೆ ನೋಡಿದರೆ ಕಾಕತಾಳೀಯವೋ ಎಂಬಂತೆ ಕವಿ ಬರೆದಿರುವ ಲಯ ಸಿಕ್ಕಿದೆ ಎಂಬ ಗೀತೆಯು ಸಹ ಮನಸೆಳೆಯುತ್ತಿದೆ.ಪ್ರೀತಿ ಎಂಬ ಬಂಧವನ್ನು ಪದಗಳಲ್ಲಿ ಕಟ್ಟಿ ಹೇಳ ಹೊರಟಿರುವ ಕವಿ,ಮೊದಲ ಸಾಲುಗಳಲ್ಲಿಯೇ ಗೆಲ್ಲುವ ಸೂಚನೆಯನ್ನು ನೀಡಿದ್ದಾರೆ.ಭಾವನೆಯ ಬಾನಿನಲ್ಲಿ ಮಿಂಚಿ ಮರೆಯಾಗಿರುವ ಅದೆಷ್ಟೋ ತುಡಿತಗಳ ಸಂಗೀತಗಳು ಮತ್ತೆ ಮತ್ತೆ ಕವಿತೆಗಳಾಗಿ ಗುನುಗುತ್ತಿರುವ ಸೂಚನೆ ಕವಿಗೆ ಸಿಕ್ಕಿರುವಂತಿದೆ.ಹಾಗಾಗಿ ಕಳೆದು ಹೋದ ನೆನ್ನೆಗಳ ಬದಲು ಇಂದು ನಾಳೆಗಳ ಕನಸುಗಳನ್ನು ಕವಿ ಕಾಣುತ್ತಾ ಅದನ್ನು ನನಸಾಗಿಸುವ ಪ್ರಯತ್ನ,ಬದುಕಿನ ಹೋರಾಟದಲ್ಲಿ ಗೆದ್ದೇ ಗೆಲ್ಲುವ ತುಡಿತವನ್ನು ವ್ಯಕ್ತಪಡಿಸುತ್ತಿದ್ದಾರೆ. *ಮಂಜಿನಂತೆ ಕರಗಿ ಪುನಃ ಸುಮ ದಂತೆ ಅರಳುವ ಬಯಕೆಗಳಿಗೆ ಎದೆಯ ಬಡಿತದ ತುಡಿತವೂ ಸೇರಿ ಬದುಕಿಗೊಂದು ಲಯ ಸಿಕ್ಕಿದೆ* ಎಂತಹ ಅದ್ಭುತವಾದ ಸಾಲು.ಉತ್ಸಾಹದ ಸಾಲುಗಳು ಕವಿತೆಯಲ್ಲಿ ಗೀತೆಯಲ್ಲಿ ಹೇರಳವಾಗಿವೆ.ಸಹೃದಯನಿಗೆ ಭಾವವೂ ನಿಲುವಲ್ಲಿ ಕೊಂಚ ಸೋತಂತೆ ಕಂಡರೂ ಉತ್ಸಾಹದ ಪದಗಳು ಅವರನ್ನು ಜೊತೆ ಕರೆದೊಯ್ಯುತ್ತವೆ.ಇಡೀ ಗೀತೆ ಕವಿಯ ಕನಸೊಂದು ನನಸಾಗುವ ರೀತಿಯಲ್ಲಿ ಬದುಕಲ್ಲಿ ಗೆದ್ದೇ ಗೆಲ್ಲಬೇಕೆಂಬ ಹೋರಾಟದ ಮನೋಭಾವದಲ್ಲಿ ಪ್ರೀತಿ ಬಂಧವನ್ನು ಮೇಳೈಸಿ ಮನದ ತುಡಿತವನ್ನು ಹೇಳಹೊರಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. *ಭಾಷೆ*--ಸರಳ ಭಾಷೆಯ ಪ್ರಯೋಗ. *ಭಾವ*--ಕನಸನ್ನು ನನಸು ಮಾಡಿಕೊಳ್ಳುವ ಬದುಕಿನ ಹೋರಾಟದಲ್ಲಿ ಗೆದ್ದೇ ಗೆಲ್ಲುವ ಹೋರಾಟದ ಭಾವ ಉತ್ಸಾಹದ ಸ್ಥಾಯಿ ಭಾವ *ಲಯ*--ಲಯವಿದೆ *ಪ್ರಾಸ*-ಅಂತ್ಯಪ್ರಾಸ ವಿದೆ ಆನಿಯತವಾಗಿ ಕೆಲವು ಕಡೆ ಇದೆ. *ಸಲಹೆ(ಸೂಚನೆ)*-ಕವಿ ಭಾವ ತುಂಬಿ ಬರೆಯುವುದರಲ್ಲಿ ನಿಸ್ಸೀಮರು.ಲಯದ ಕಡೆ ಕೊಂಚ ಗಮನ ಹರಿಸಬೇಕು *ಓದುಗ/ವಿಮರ್ಶಕ ನೀಡುವ ಅಂಕಗಳು* *೮.೫/೧೦* *ಇನ್ನೊಮ್ಮೆ ಮತ್ತೊಮ್ಮೆ ಮಗದೊಮ್ಮೆ ಬರೆಯಿರಿ, ಕವಿಭಾವಕ್ಕೆ ಧಕ್ಕೆಯಾಗಿದ್ದರೆ ಕ್ಷಮೆ ಇರಲಿ* ಧನ್ಯವಾದಗಳೊಂದಿಗೆ *ಪ್ರಶಾಂತ್ ಪಂಚರಂಗಿ* 🌹🌹🌹🌹🌹🌹🌹🌹🌹🌹

No comments:

Post a Comment