*ಕನ್ನಡ ತೇರನೆಳೆಯಲು*
ಹನಿ ಹನಿ ಇಬ್ಬನಿಯಲ್ಲಿ
ಹೊಳೆಯುತ ಬೆಳೆಯೋಣ ಬನ್ನಿ
ದಿನ ದಿನ ಹೊಸತನದಲ್ಲಿ
ನವಭಾವಕೆ ಜೀವವ ತುಂಬೋಣ ಬನ್ನಿ
ಎಲ್ಲೋ ಇರುವ
ಎಲೆಮರೆ ಕಾಯಿಗಳು
ಮಾಗಿ ಹಣ್ಣಾಗಿ ರುಚಿಯ
ಜಗಕೆ ನೀಡುವ ಕವಿಭಾವಗಳು
ಸಹಕಾರದ ಈ ಬೆಳವಣಿಗೆ
ಸಾಧನೆಯ ಮೆರವಣಿಗೆ
ಶಿಲೆಯೊಳಗೆ ಕಲೆ ಅರಳುವಂತೆ
ಕಲಿಯುತ ಕಲಿಸುವುದು ಬರವಣಿಗೆ
ಸಾಹಿತ್ಯದ ಸಂರಚನೆಗೆ
ಹೊಸಭಾಷ್ಯ ಬರೆದ ಬಳಗ
ಕನ್ನಡ ತೇರನೆಳೆಯಲು
ಹೊತ್ತಿದೆ ಅಭಿಮಾನದ ನೊಗ
0952ಎಎಂ01102017
*ಅಮುಭಾವಜೀವಿ*
No comments:
Post a Comment