*೨•ಗಜಲ್*
ಹರಿದ ಚಿಂದಿಯ ತೊಟ್ಟ ಹರೆಯ
ಒಳಗೆ ರೋಧಿಸುತ್ತಿತ್ತು ಪುಟ್ಟ ಹೃದಯ
ಬಡತನದ ಬೇಗೆಯಲಿ ಬೇಯುತಿದ್ದರೂ
ಬದುಕಿನಲ್ಲಿತ್ತು ಒಂದು ಸದಾಶಯ
ನೋಡಿದವರ ಕಣ್ಣು ಕುಕ್ಕಿ
ಜಗಕೆ ಮೂಡಿತೊಂದು ಸಂಶಯ
ಹರಿದ ಬಟ್ಟೆಯೊಳಗಿನ ಅಂಗಾಂಗವೇ
ಪೋಲಿ ಹುಡುಗರಿಗೊಂದು ವಿಸ್ಮಯ
ಮಾನ ಮುಚ್ಚಿಕೊಳ್ಳಲಾಗದೆ
ಶಾಪವಾಗಿ ಕಾಡಿತ್ತು ಹರೆಯ
ಕಾಮುಕರ ಮಂಚದ ಮೇಲೆ
ಕೊಳೆತು ನಾರಿತು ಪ್ರಾಯ
ಬಡತನದ ಈ ಅಟ್ಟಹಾಸ
ಬದುಕಿಗೆ ತಂದೊಡ್ಡಿತು ಅಪಾಯ
ಅಮುವಿನಂತರಂಗವ ಕಲಕಿತು
ಅಬಲೆ ಮೇಲೆ ನಡೆದ ಈ ಅನ್ಯಾಯ
ಅಮುವಿನಂತರಂಗವು ನೀಡಿತು
ಆ ಅಬಲೆಗೆ ನೆರಳಿನಾಶ್ರಯ
0412ಪಿಎಂ11102017
*ಅಮುಭಾವಜೀವಿ*
No comments:
Post a Comment