Thursday, October 12, 2017
ಕವಿತೆ 2
*ನನ್ನ ಹಸಿವಿನ ಬೆಲೆ*
ಬರೀ ದೇಹ ಕಿತ್ತು ತಿನ್ನುವ
ಕಾಮುಕರ ಮಂಚದ ಮೇಲೆ
ನಾ ಜೀವಂತ ಶವ
ಮೈಯನಷ್ಟೆ ಮಾರಿಕೊಂಡಹೆ ನಾ
ಮನಸನಂತೂ ಅಲ್ಲ
ನಿತ್ಯ ಸಹಿಸಿ ನೋವ
ನನ್ನ ಹಸಿವಿನ ಬೆಲೆ
ಅವರ ಕಾಮದ ನೆಲೆ
ದಾಹ ತೀರಲೇ ಬೇಕು ಇಬ್ಬರಿಗೂ
ನನ್ನದು ಅನಿವಾರ್ಯದ ಬದುಕು
ಅವರಿಗೋ ಕ್ಷಣದ ಸುಖ ಸಾಕು
ವೇಶ್ಯೆಯ ಪಟ್ಟಕೆ ರಾಣಿ ನಾ
ಕತ್ತಲಾದರೆ ಸಾಕು
ನಾ ಬೆತ್ತಲಾಗಿರಲೇ ಬೇಕು
ನನ್ನವರ ಮಾನ ಮುಚ್ಚಲು
ಮನಸಿಲ್ಲ ಆದರೂ ಹೇಗುವೆ
ನೋವ ಕೇಳುವ ಮನಸು ಸಿಗುವುದೋ
ಎಂದು ನಿತ್ಯ ಕಾಮಕೂಪದಿ ದೀಪವಾಗಿ
ಬಂದವರಾರಿಗೂ ಮನಸು ಬೇಕಿಲ್ಲ
ಬರೀ ಮೈ ನೀಡಿದರೆ ಸಾಕು
ತೀಟೆ ತೀರಿದ ಮೇಲೆ ನಾನ್ಯಾರೋ ಅವರ್ಯಾರೋ
ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯ್ತು
ಯೌವನಕೆ ಬಂದಿದ್ದೇ ಮುಳುವಾಯ್ತು
ಬದುಕು ಸೂತ್ರವಿರದ ಪಟವಾಯ್ತು
0252ಪಿಎಂ130915
ಅಮುಭಾವಜೀವಿ
ವಿನಯ್ ಅವರ ಪ್ರತಿಕ್ರಿಯೆ
ಬದುಕಿನ ಅನಾಚಾರ-ಕರಾಳತೆ-ಅಸಹಾಯಕತೆ-ಸುಖ-ದುಃಖ ಎಲ್ಲವನ್ನೂ ತುಂಬಾ ಚನ್ನಾಗಿವಿವರಿಸಿದ್ದೀರ.....
ಧನ್ಯವಾದಗಳು ಸರ್
🙏🙏🙏🙏
ಸರೋಜ ಬೈಲಹೊಂಗಲ ಅವರ ಪ್ರತಿಕ್ರಿಯೆ
ಸರೋಜ ಬೈಲಹೊಂಗಲ: ಯಪ್ಪಾ ದೇವರೇ ವೇಶ್ಯೇಯರ ಬಾಳು ಬರೀ ಕಣ್ಣೀರ ಗೋಳು
ಅವರ ಮನದಾಳದ ನೋವುಗಳು ಮನ ಮಿಡಿಯುವಂತೆ ಬರೆದಿರುವಿರಿ ಸರ್
👌👌👌👌👌👏👏👏👏
ನಮೀಕ್ಷಾ: ಕತ್ತಲೆ ಲೋಕದ ಚೆಂದದ ಅನಾವರಣ😒😒😒
ಶೀಲಾ ಸುರೇಶ್: ಏನೂಂತ ಪ್ರತಿಕ್ರಿಯೆ ನೀಡೋದು.ಅನಿವಾರ್ಯದ ಅಸಹ್ಯವಾದ ಬದುಕದು...ಹೆಣ್ಣಾಗಿ ಹುಟ್ಟಿದ್ದೆ ಅಪರಾಧ ಆಕೆಗೆ.ಚನ್ನಾಗಿದೆ...ಆದರೆ ಕೆಲ ಪದಗಳು ಸತ್ಯವಾದರೂ ನೇರ ಬದಲು ಏನಾದರೂ ರೂಪಕಗಳ ಮೂಲಕ ಹೇಳಬಹುದಿತ್ತೇನೊ
ಶೀಲಾ ಸುರೇಶ್: ಕಾಮ,..ಬೆತ್ತಲೆ..ಹೀಗೆ ಪದಗಳ ಬದಲು
ಕಿರಣ ಕುಮಾರ್ : ಇನ್ನಷ್ಟು ಸೂಚ್ಯ ಬಳಸಿ, ಕಾವ್ಯೀಕರಿಸಿ...ಇದು ಲೇಖನದಂತಿದೆ ....ಎಂದು ನನ್ನ ಅಭಿಪ್ರಾಯ
ಶ್ರೇಯ ಗೌಡ ಅವರ ಪ್ರತಿಕ್ರಿಯೆ
ನಗ್ನ ಸತ್ಯ
ತಿಪ್ಪೇಸ್ವಾಮಿ ಪ್ರೇಮಾಜ್ಞಿ
ಆ ಮೌನಿಯ ಅಂತರಾಳದ ನೋವಿನ ಕನ್ನಡಿ 👏👏👏👏
ಅನ್ಸಾಲ್ ಸಿ ಕಾಸರಗೋಡು: ಮನ ಕರಗಿಸುವ ಕವನ
👌🏻👌🏻👌🏻
ಚಪ್ಪು ಸಫ್ವಾನ್ : ಸರ್ ಒಂದೊಂದು ವಾಕ್ಯ ಒಂದೊಂದು ನೋವ ತೋರಿಸಿದೆ
[13/09 6:31 pm] +91 73535 09250: ಒಂದಂತೂ ಸತ್ಯ ಸಂಗತಿ ಅವಳೆಂದರೆ ಅವನ ಗುಲಾಮ ಎಂದು
ನೀಲಾ ಅವರ ಪ್ರತಿಕ್ರಿಯೆ
ಕಣ್ಣಲಿ ಕಂಬನಿ ಬಂತು ಸರ್/ಮೇಡಮ ತುಂಬಾ ಚೆನ್ನಾಗಿದೆ👌
ದೀಪ ಪಟಾತ ಅವರ ಪ್ರತಿಕ್ರಿಯೆ
ಹೆಣ್ಣು..ಈ ಕಾಮಕರ ಬದುಕಿನಲ್ಲಿ..ಸತ್ತು ಬದುಕುತ್ತಿದ್ದಾಳೆ...ಹೊಸ ಬದುಕು..ರೂಪಿಸಿಕೊಳ್ಳುವಲ್ಲಿ..ಸೋತು..ಕಾಮಕರಿಗೆ ಆಳಾಗಿದ್ದಾಳೆ...ದೇಹ ಎಂದೋ..ಸತ್ತು ಹೋಗಿದೆ..ಮನಸ್ಸು ಸತ್ತು ಬದುಕುತ್ತಿದೆ....
ತುಂಬಾ..ಚೆನ್ನಾಗಿದೆ..ಸರ್..ಅದರಲ್ಲಿಯೂ...ಆ..ಕವಿತೆಯಲ್ಲಿ..ಅದು ನಾನೆ..ಆ.ಸಂದರ್ಭದಲ್ಲಿ..ನಾನಾಗಿದ್ದರೆ..ಏನು ಮಾಡುತ್ತಿದ್ದೆ..ಎಂದು ಓದಿದರೆ..ಒಂದು ಹೆಣ್ಣಿನ ಬದುಕು ..ಎಲ್ಲರಿಗೂ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಸರ್..
ಥ್ಯಾಂಕು ಸರ್🙏..ತುಂಬಾ ಚೆನ್ನಾಗಿದೆ..
ಭಾರತಿ ಪಲ್ಸಾರೆ ಅವರ ಪ್ರತಿಕ್ರಿಯೆ
ಹಸಿಮಾಂಸದ ಒಳಗಡೆ ಒದ್ದಾಡೊ ಮನಸಿನ ಸಂಕಟ...ಮನಸಿನ ವಿರುದ್ಧ ಅಸಹಾಯಕತೆಯ ರಾಜ್ಯ...ಆ ಹೆಣ್ಣಿನ ಮನ ನಿಜಕ್ಕೂ ದಯನೀಯ..
ಆನಂದ ಅವರ ಪ್ರತಿಕ್ರಿಯೆ
ಮನ ಕಲಕುವ ಕವನ
ಕವಿತಾ ಪತ್ತಾರ್ ಅವರ ಪ್ರತಿಕ್ರಿಯೆ
ಹೆಣ್ಣಿನ ಬಗ್ಗೆ ವಿಚಾರ ಮಾಡುವಂತ ಕವನ ಈ ಸಮಾಜದಲ್ಲಿ ..ಹೆಣ್ಣು ಇಲ್ಲ ಅಂದರ ಎನೂ ಇಲ್ಲ ..ಆದರು.
ಹೆಣ್ಣು ಅರತಿರಬೇಕು ... ದೇವರು ಅಷ್ಟು ಶಕ್ತಿ ಕೊಟ್ಟಿರುತ್ತಾನೆ ದುಡಿದು .ಬದುಕ ಬೇಕು ಮೈ ಮಾರಿಕೊಂಡಲ್ಲ .. ಹೆಣ್ಣಿನಲ್ಲಿ ಚಲ ಬೇಕು
ಗುರುರಾಜ್ ಅವರ ಪ್ರತಿಕ್ರಿಯೆ
Nejwagllu thumba Adabuthavaghi bardidre sir thumba artha idhe e Kavithe Alli ❤
ವೀರೂ ಅವರ ಪ್ರತಿಕ್ರಿಯೆ
Mana Muttuvanthaha Kathe " Katheyalla Jeevana"
ರವಿ ಅವರ ಪ್ರತಿಕ್ರಿಯೆ
Super sir 👌🏻👌🏻
But
ಆದರೂ ಇತ್ತೀಚಿನ ದಿನಮಾನಗಳಲ್ಲಿ ಇಂತಹ ಸದ್ಗುಣವಂತ ವೇಶ್ಯೆಯರು ಸ್ವಲ್ಪ ಕಡಿಮೆ...🤔🤔
ರತ್ನ ರತ್ನ ಬಡಗನೂರು: ಮನಸು ಒಳಗೊಳಗೆ ಮರುಗುತ್ತದೆ
ಅವಳ ನೋವ ಅರಿತರೂ ಅಸಹಾಯಕತೆ ನಮ್ಮದು
ವೇಣಿಬಾಯಿ ಅವರ ಪ್ರತಿಕ್ರಿಯೆ
ಅದ್ಭುತವಾದ ಸಹಜ ಚಿತ್ರಣ.ಅತಿಶಯೋಕ್ತಿ ಇಲ್ಲದ ನೈಜತೆಯ ನೆಲೆಗಟ್ಟಿನಲ್ಲಿ ಮೂಡಿರುವ ಮನಮುಟ್ಟುವ ಕವನ ಸಾರ್👏👏👏👏👏🙏🏻🙏🏻🙏🏻🙏🏻
ಸವಿ ಆಶ: Khandita iwathu 50 percent e tara irtare
And samajada samskara agtide
ಗುಡಿಬಂಡೆ ಫಯಾಜ್ ಅವರ ಪ್ರತಿಕ್ರಿಯೆ
ಮಾಂಸಧಂಧೆಯ ಕರಾಳ ಮುಖವನ್ನು ಜೊತೆಗೆ ಅದರಲ್ಲೇ ಬಳಲುವವರ ಒಳಮನಸಿನ ಕನ್ನಡಿ ಈ ಕವನ ಎನ್ನಬಹುದು.
💐🙏👌***ಉತ್ತಮ
Subscribe to:
Post Comments (Atom)
No comments:
Post a Comment