*ನಗು ತುಂಬಿದ ಮನೆಯೊಳಗೆ*
ನೀನಿಲ್ಲದ ಮನೆ ಮನೆಯಲ್ಲ
ಹಾಳಾದ ಹಂಪೆಯಂತೆ
ನೀನೀಡುವ ಪ್ರೀತಿಯು
ಸೋನೆಮಳೆ ತಂಪೆರೆದಂತೆ
ನೀ ಹಚ್ಚಿದ ಜ್ಯೋತಿಯು
ನಂದಾದೀಪವಾಗಿ ಬೆಳಗುವುದು
ನಾ ಮೆಚ್ಚಿದ ಮಡದಿ ನೀ
ನಿನ್ನಿಂದಲೇ ಬದುಕು ಸುಖವಾಗಿಹುದು
ಮನೆಯೀಗ ಮಂತ್ರಾಲಯ
ಶಾಂತಿ ತುಂಬಿದ ದೇವಾಲಯ
ನೀನಿಲ್ಲಿ ದೇವತೆಯು
ನಾ ನಿನ್ನ ಆರಾಧಕನು
ಮನೆ ಮಕ್ಕಳ ಹೊಣೆ ಹೊತ್ತು
ದುಡಿವ ನೀನು ಶ್ರಮಜೀವಿ
ಕಷ್ಟ ಸುಖಗಳ ಸಮಾನವಾಗಿ
ಸ್ವೀಕರಿಸಿದ ನೀನು ಕರುಣಾಮಯಿ
ಮನೆಯೆಂದರೆ ಮಡದಿ ಇರಬೇಕು
ಮಡದಿ ಸದಾ ನಗುತಿರಬೇಕು
ನಗು ತುಂಬಿದ ಮನೆಯೊಳಗೆ
ನೆಮ್ಮದಿಯ ಬದುಕ ಸವಿಯಬೇಕು
1236ಪಿಎಂ02102017
*ಅಮುಭಾವಜೀವಿ*
No comments:
Post a Comment