ನಿದ್ದೆಗೆಟ್ಟು ಕೂತ ಕಣ್ಣುಗಳು
ಒದ್ದೆಯಾಗಿ ಹೋಗಿವೆ
ನೀ ಕೊಟ್ಟ ನೆನಪುಗಳು
ನೊಂದ ಮನದೊಳಗೆ ಸದ್ದು ಮಾಡಿವೆ
ಹಿಂಡುತಲಿದೆ ಹೃದಯವನ್ನು
ನಿರ್ದಯಿ ಗಾಣ ಕಬ್ಬನರೆದಂತೆ
ದಂಡಿಸುತಲಿದೆ ಮನ ತನುವನು
ಚುಚ್ಚುತ ಸೂಜಿ ಮೊನೆಯಂತೆ
ಕೆಂಡದ ಮೇಲೆ ನಡೆದಿದೆ ಬದುಕು
ನಡೆದರೂ ನಿಂತರೂ ತಪ್ಪದು ಕೆಡುಕು
ನೀ ಕೊಟ್ಟ ಈ ಹಿಂಸೆಗೆ ಕೊನೆಯಿಲ್ಲ
ಬರಕೆ ಬಸವಳಿದ ಪೈರಲಿ ತೆನೆಯಿಲ್ಲ
ಇನ್ನೆಷ್ಟು ನೋವ ಕೊಡುವೆಯೋ
ಕೊಟ್ಟು ಬಿಡು ಸಹಿಸಿಕೊಳ್ಳುವೆ ನಾನು
ನನ್ನ ಈ ಸ್ಥಿತಿ ಕಂಡು
ನೆಮ್ಮದಿಯಿಂದ ಬದುಕ ಬಲ್ಲೆಯಾ ನೀನು
0302ಪಿಎಂ05102017
*ಅಮುಭಾವಜೀವಿ*
No comments:
Post a Comment