೧•
ದೀಪ ದೀಪ ಸೇರಿ
ಬೆಳಗಲು ದೀಪಾವಳಿ
ಜ್ಞಾನ ಜ್ಯೋತಿ ಬೆಳಗಲು
ಕಳೆವುದು ಅಜ್ಞಾನದ ರವಳಿ
೨•
ಮನೆಯ ಮುಂದೆ
ದೀಪದಲಂಕಾರ
ಮನದೊಳಗೆ
ಜ್ಞಾನದ ಶೃಂಗಾರ
೩•
ಇರುಳಿನಲ್ಲಿ ದೀಪ
ಹಚ್ಚಿ ಸಂಭ್ರಮಿಸೋಣ
ಹಗಲಿನಲ್ಲಿ ಜ್ಞಾನದಿಂದ
ಸಂಸ್ಕೃತಿಯ ವಿಜೃಂಭಿಸೋಣ
೪•
ಪಟಾಕಿ ಸದ್ದಿಗಿಂತ
ಪ್ರತಿಭೆ ಸದ್ದು ಮಾಡಲಿ
ಜ್ಞಾನ ಜ್ಯೋತಿ ಬೆಳಗಿಸಿ
ಮನದ ತಮವ ನೀಗಲಿ
೫•
ಶಬ್ದವಿರದ ಆಚರಣೆ
ನಮ್ಮ ಸಂಸ್ಕೃತಿ
ಕತ್ತಲೆಯಿಂದ ಬೆಳಕಿಗೆ
ತರುವುದು ಜ್ಞಾನ ಜ್ಯೋತಿ
0511ಪಿಎಂ08102017
*ಅಮುಭಾವಜೀವಿ*
No comments:
Post a Comment