Monday, October 2, 2017
*೧•ಎರಡನೇ ತಾಯಿ*
ಹೆಂಡತಿ ಎಂದರೆ ಪ್ರಾಣ ಹಿಂಡುವವಳಲ್ಲ
ಗಂಡನೇಳಿಗೆಗಾಗಿ ಟೊಂಕ ಕಟ್ಟಿ ನಿಂತವಳು
ಸತಿ ಎಂಬುವಳೊಂದು ಸ್ವತ್ತಲ್ಲ
ಬದುಕಿನ ಬೆಲೆಕಟ್ಟಲಾಗದ ಸಂಪತ್ತವಳು
ಹೆಂಡತಿಯೊಬ್ಬಳು ಸಿಪಾಯಿಯಂತೆ
ಅವಳಿದ್ದರೆ ಇರದು ಯಾವ ಚಿಂತೆ
ಹೆಂಡತಿ ಅವಳು ಎರಡನೆ ತಾಯಿ
ತಪ್ಪನು ತಿದ್ದುವ ಸಹನಾಮಯಿ
ಹೆಂಡತಿ ದಂಡಿಸೋ ದಂಡವಲ್ಲ
ಸ್ವಾರ್ಥಕಾಗಿ ಅವಳೆಂದೂ ಬಾಳುವುದಿಲ್ಲ
ಗಂಡ ಮನೆ ಮಕ್ಕಳೇ ಅವಳಾಸ್ತಿ
ದಂಡೆಮಲ್ಲಿಗೆಗೆ ಒಲಿವ ಪ್ರೀತಿ
ಖಂಡಿಸಬೇಡಿರಿ ಅವಳನ್ನು
ಬದುಕಿಗೆ ಬೆಳಕು ಅವಳಿನ್ನು
ದಂಡಿಸಬೇಡಿರಿ ಅವಳನ್ನು
ಧರ್ಮಪತ್ನಿ ಅವಳಿನ್ನೂ
0811ಎಎಂ28092017
*ಅಮುಭಾವಜೀವಿ*
[28/09 9:38 am] ಮಾನಸ ಬೆಂಗಳೂರು: ಅಮ್ಮುಭಾವಜೀವಿ ರವರೇ 🙏
ಖಂಡಿತಾ ಸತ್ಯ ಹೆಂಡತಿ ಗಂಡನಿಗೆ ಎರಡನೇ ತಾಯಿಯೇ ನಿಮ್ಮ ಅನುಭವದ ನುಡಿಗಳಂತೆ ಬರೆದ ಹಾಗಿದೆ ..
ಚೆಂದದಾ ಸಾಲುಗಳನ್ನು ಬರೆದಿದ್ದೀರಾ ಹಣ್ಣು ನಿಸ್ವರ್ಥ ಜೀವಿ ಅವಳು ಎಂದಿಗೂ ಅವಳಿಗಾಗಿ ಬದುಕಿದವಳಲ್ಲಾ ನಿಜ ಸರ್ ಹೆಣ್ಣಿನ ಮನಸನ್ನು ನೋಯಿಸದಿರಿ ಎಂದು ಸಂದೇಶ ನೀಡಿದ್ದೀರಾ
ಅದ್ಬುತ ವಾಸ್ತವತೆಯ ಭಾವಗೀತೆ
ದಯವಿಟ್ಡು ಎಲ್ಲರೂ ಓದಿ ಓದಲೇ ಬೇಕಾದ ಸಾಲುಗಳು
ದನ್ಯವಾದ ಸರ್ಉತ್ತಮ ಗೀತೆ ಬರೆದು ಬಳಗಕ್ಕೆ ನೀಡಿದ್ದೀರಾ👏🏾👏🏾👏🏾🙏👌🏻👌🏻👌🏻💐💐💐👍🏾👍🏾🤝
[28/09 11:12 am] ದೇವರಾಜ್ ಹಾಸನ ದೇಸು: *೧•ಎರಡನೇ ತಾಯಿ*
ಅಮುಭಾವಜೀವಿ
*ಹೆಣ್ಣೆಂದರೆ ಜಗ, ಹೆಣ್ಣೆಂದರೆ ನೊಗ. ಹೆಣ್ಣು ಈ ಜಗದೊಳು ಅದೆಷ್ಟೊಂದು ಕಾರ್ಯ ನಿರ್ವಹಿಸುತ್ತಾಳೆ ಎಂದರೆ ಅದನ್ನು ಎಣಿಸಿ ಗುಣಿಸಿ ಲೆಕ್ಕವಿರಿಸಿರುವವರ್ಯಾರು?*
*ಹೌದು! ಹೆಣ್ಣೆಂದರೆ ಈ ಜಗದ ಕಣ್ಣು. ಹೆಣ್ಣು ಜಗದಲ್ಲಿ ಮಗಳಾಗಿ, ಸೊಸೆಯಾಗಿ, ಹೆಂಡತಿಯಾಗಿ, ಅಮ್ಮನಾಗಿ, ಅತ್ತಿಗೆಯಾಗಿ, ನಾದಿನಿಯಾಗಿ, ಅತ್ತೆಯಾಗಿ, ಗಂಡಿನ ಬಾಳಿನ ಬೆಳಕಾಗಿ, ಕಾರ್ಯನಿರ್ವಹಿಸುವ ಹೆಣ್ಣು ಎಲ್ಲೂ ಸ್ವಾರ್ಥವನ್ನು ತೋರದ ಭಾಗ್ಯದೇವತೆ. ಆದರಿಲ್ಲಿ ಕವಿ ಒಂದು ಹೆಜ್ಜೆ ಮುಂದಡಿಯಿಟ್ಟು ಎರಡನೆ ತಾಯಿ ಎಂದು ಹೇಳಿರುವುದು ನಿಜಕ್ಕೂ ಇಷ್ಟವಾಗುವ ಸಂಗತಿ.*
*ಸರಳವಾಗಿ ಸುಂದರ ಪದಗಳನ್ನೊಳಗೊಂಡ ಗೀತೆ, ಕೊನೆಯ ಚರಣ ವಾಚ್ಯವೆನಿಸುತ್ತಿದೆ. ಗಮನಿಸಿ.*
ಸಂಪ್ರೀತಿಯಿಂದ
ದೇಸು ಆಲೂರು...✍
[28/09 12:11 pm] ಮನುಜ ಬಿ. ವಿ: *ಅಮು ಸರ್ ರವರ ಎರಡನೇ ತಾಯಿ ತುಂಬಾ ತುಂಬಾ ಅರ್ಥಪೂರ್ಣವಾಗಿದೆ, ನಿಜ ಹೆಂಡತಿ ಎಂದರೆ ಗಂಡನ ಏಳಿಗೆಗಾಗಿ ಅವನ ಜೊತೆ ಇರುವವಳು ಅವನ ಕಷ್ಟ ಸುಖವನ್ನು ಸಮನಾಗಿ ಹಂಚಿಕೊಳ್ಳುವವಳು ಅವಳಿಗೆ ಅವನೆ ಸರ್ವಸ್ವ ಹೆಂಡತಿ ಎರಡನೇ ಯ ತಾಯಿ ವಾವ್ ಸೂಪರ್ ಸುಂದರ ಸಾಲುಗಳು*
👌👌👌👌
Subscribe to:
Post Comments (Atom)
No comments:
Post a Comment