ಗಜಲ್ ೧
ನನ್ನ ಅಸಹಾಯಕ ಬದುಕಲಿ ನೀನು
ಸಹಾಯಕಿಯಾಗಿ ಬಂದವಳಲ್ಲವೇನು
ನಂಬಿಕೆಯೇ ಕುಸಿದು ಬಿದ್ದಾಗ
ಬೆರಳ ಆಸರೆಯಿತ್ತಳು ನೀನು
ಬೇಸರದ ಬೇಗುದಿಯಲ್ಲಿ ಅಲೆವಾಗ
ನೆರಳು ನೀಡಿ ಪೊರೆದವಳು ನೀನು
ಸೋತು ಸೊರಗಿದ ಭಾವಗಳಿಗೆ
ಕೊರಳಾಗಿ ಹಾಡಿದ ಪ್ರೋತ್ಸಾಹವು ನೀನು
ನಿನ್ನೊಲವ ಮಾತುಗಳಿಗೆ
ಮರುಳಾಗಿ ನಿನ್ನನನುಸರಿದವ ನಾನು
ಅಮುವಿನಂತರಂಗದ ಆಸೆಗಳಿಗೆ
ಸರಳ ವ್ಯಾಖ್ಯಾನವಾದವಳು ನೀನು
ಆ ಅನುರಾಗಕೆ ಸೋತು ನಿನ್ನತ್ತ
ಹೊರಳಿ ಬಂದವನು ನಾನು
0541ಎಎಂ11102017
*ಅಮುಭಾವಜೀವಿ*
No comments:
Post a Comment